ಧಾರವಾಡ –
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕೇಂದ್ರ ಸಮಿತಿ ಯ ನಿಕಟಪೂರ್ವ ಕಾರ್ಯಾಧ್ಯಕ್ಷರು ಧಾರವಾಡ ದವರೆ ಆದ ಆರ್ ಎಫ್ ನೀರಲಕಟ್ಟಿ ನಿಧನರಾಗಿ ದ್ದಾರೆ.ಕಳೆದ ಅನಾರೋಗ್ಯದಿಂದ ಬಳಲುತ್ತಿದ್ದು ಇವ ರು ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಬೆಳೆಯಲು ಕಾರಣಿ ಭೂತರಾಗಿದ್ದ ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲೆಂದು ಕೇಂದ್ರ ಕಲ್ಲಿದ್ದಲು ಹಾಗು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಪ್ರಲ್ಹಾದ ಜೋಶಿ ಕೇಂದ್ರ ವಿದೇಶಾಂಗ ಸಹಾಯಕ ಸಚಿವರು ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕೇಂದ್ರ ಸಮಿತಿ ಅಧ್ಯಕ್ಷರು ವಿ ಮುರಳಿಧರನ್ ದಕ್ಷಿಣ ಭಾರತ ಕರ್ನಾಟಕ ಪ್ರಾಂತ ಅಧ್ಯಕ್ಷರು ಈರೇ ಶ ಅಂಚಟಗೇರಿ ಅರುಣ ಜೋಶಿ ಎಂ ಆರ್ ಪಾಟೀ ಲ ಎಸ್ ಬಿ ಹಿಂಚಿಗೇರಿ ಡಾ ರಾಧಾಕೃಷ್ಣನ್ ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮುಖ್ಯ ಸ್ಥರು ಶಿಕ್ಷಕ ಹಾಗು ಶಿಕ್ಷಕೇತರ ವೃಂದದಿಂದ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು

ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಲು ಇಂದು ಕರ್ನಾಟಕ ಪ್ರಾಂತದ ಕೇಂದ್ರ ಸ್ಥಾನ ಧಾರ ವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯಲ್ಲಿ ಶೃದ್ದಾಂಜಲಿ ಸಭೆ ಆಯೋಜಿಸಿ ಅವರ ಭಾವಚಿತ್ರಕ್ಕೆ ಪುಷ್ಪನಮನಗಳ ಗೌರವ ಸಲ್ಲಿಸಲಾಯಿತು.

ಈ ಒಂದು ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರು ಈರೇಶ ಅಂಚಟಗೇರಿ ನೀರಲಕಟ್ಟಿ ಅವ ರ ಕೊಡುಗೆ ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕ್ಕೆ ಅಪಾರ ಮುಂಬರುವ ಪೀಳಿಗೆ ಕೂಡಾ ಅವರ ನೆನೆದು ಮುಂದುವರೆಯಬೇಕು ಅವರ ಅಗಲಿಕೆ ತುಂಬಲಾರದ ನಷ್ಟ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಿ ಅವರ ಕುಟುಂಬಕ್ಕೆ ಅವರ ಅಗಲಿಕೆ ನೋವನ್ನು ಭರಿಸೊ ಶಕ್ತಿ ನೀಡ ಲೆಂದು ನುಡಿದರು