ಬಾಗಲಕೋಟೆ –
ಬಿಟ್ಟು ಬಿಡದೇ ಕಾಡುತ್ತಿರುವ ಮಹಾಮಾರಿ ಕೊರೊ ನಾದ ನಡುವೆ ಹೇಗಪ್ಪಾ ಬದುಕೊದು ಎಂದು ದೇಶ ದ ಜನತೆಗೆ ಚಿಂತೆ ಕಾಡುತ್ತಿದ್ದರೆ ಇಲ್ಲೊಬ್ಬ ಆರೋಗ್ಯ ಇಲಾಖೆಯ ಮಹಾಶಯ ಇಂಥಹ ಪರಸ್ಥಿತಿಯ ನಡುವೆ ಹೇಗೆ ಹಣವನ್ನು ಸಂಗ್ರಹ ಮಾಡೊದು ಎನ್ನುತ್ತಾ ಲಕ್ಷ ಲಕ್ಷ ರೂಪಾಯಿ ಸಂಗ್ರಹ ಮಾಡುತ್ತಿದ್ದ ಇಂತಹ ಮಹಾಶಯನಿಗೆ ಎಸಿಬಿ ಅಧಿಕಾರಿಗಳಿಗಳು ಟ್ರ್ಯಾಪ್ ಮಾಡಿದ್ದಾರೆ
ಹೌದು ಪರ್ಸೆಂಟಿಸ್ ರೂಪದಲ್ಲಿ ಹಣ ವಸೂಲಿ ಮಾಡುತ್ತಿದ್ದವನಿಗೆ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ ಹೌದು ಕೊರೊನಾ ನಡುವೆಯೂ ಹಣವನ್ನು ಸಂಗ್ರಹ ಮಾಡುತ್ತಿದ್ದ ಬಾಗಲಕೋಟೆ ಆರೋಗ್ಯ ಇಲಾಖೆ ಎಫ್ ಡಿಸಿ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಕೊರೊನಾ ಮಧ್ಯೆಯೂ ಆರೋಗ್ಯ ಇಲಾಖೆಯಲ್ಲಿ ಲಂಚದ ಹಣವನ್ನು ಈ ಆಸಾಮಿ ಸಂಗ್ರಹ ಮಾಡು ತ್ತಿದ್ದರು.ಪ್ರಯಾಣ ಭತ್ಯೆ ಮಂಜೂರಿಗೆ ಲಂಚದ ಹಣ ಸಂಗ್ರಹ ಮಾಡುತ್ತಿದ್ದನು.ಜಿಲ್ಲೆಯಲ್ಲಿ ವಿವಿಧ ಆರೋ ಗ್ಯ ಇಲಾಖೆ ಕಚೇರಿಗಳಿಂದ ಪರ್ಸೆಂಟೇಜ್ ಆಧಾರ ದಲ್ಲಿ ಲಂಚದ ಹಣವನ್ನು ಈ ಮಹಾಶಯ ಮಾಡು ತ್ತಿದ್ದನು.
ಕಾರಿನಲ್ಲಿ ಹಣ ಸಂಗ್ರಹಿಸಿಕೊಂಡು ಬರುವ ವೇಳೆ ಖಚಿತ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಬಾಗಲಕೋಟೆ ನವನಗರದಲ್ಲಿ ಕಾರಿನ ಮೇಲೆ ದಾಳಿ ಮಾಡಿ ಟ್ರ್ಯಾಪ್ ಮಾಡಲಾಗಿ ದೆ.ಕಾರಿನಲ್ಲಿದ್ದ 5ಲಕ್ಷ 8ಸಾವಿರ ಹಣ ಕೂಡಾ ಪತ್ತೆ ಯಾಗಿದೆ.
ಮಹಾಂತೇಶ್ ನಿಡಸನೂರ,ಎಫ್ ಡಿಸಿ ಎಸಿಬಿ ಬಲೆ ಗೆ ಬಿದ್ದ ಅಧಿಕಾರಿಯಾಗಿದ್ದು ಮಹಾಂತೇಶ್ ಬಾಗಲ ಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕನಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ಈ ಒಂದು ದಾಳಿಯನ್ನು ಮಾಡಿದ್ದಾರೆ.ಕೆಎ -03 ಎಂವಿ 8709 ಕಾರನ್ನು ಪರಿಶೀಲನೆ ಮಾಡಿದಾಗ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ.ಪರಿಶೀಲನೆ ವೇಳೆ ನಗ ದು ಹಣ,ಪ್ರಯಾಣ ಭತ್ಯೆ ಬಿಲ್ಲುಗಳು ಕೂಡಾ ಪತ್ತೆ ಯಾಗಿವೆ.ಸಧ್ಯ ಆರೋಪಿಯನ್ನು ವಶಕ್ಕೆ ಪಡೆದಿರು ವ ಎಸಿಬಿ ಅಧಿಕಾರಿಗಳು ತನಿಖೆಯನ್ನು ಮುಂದುವ ರೆಸಿದ್ದಾರೆ.ಎಸಿಬಿ ಇನ್ಸ್ಪೆಕ್ಟರ್ ಸಮೀರ್ ಮುಲ್ಲಾ ನೇತ್ರತ್ವದಲ್ಲಿ ಈ ಒಂದು ದಾಳಿಯಾಗಿದ್ದು ಪರಿಶೀ ಲನೆ ಮಾಡತಾ ಇದ್ದಾರೆ ಈ ಕುರಿತಂತೆ ಬಾಗಲಕೋ ಟೆ ಎಸಿಬಿ ಕಚೇರಿಯಲ್ಲಿ ಕೇಸ್ ದಾಖಲಾಗಿದೆ