ಬೆಂಗಳೂರು –
ಕಳೆದ ಹಲವಾರು ದಿನಗಳಿಂದ ನನೆಗುದಿಗೆ ಬಿದ್ದು ಅವಾಗ ಇವಾಗ ಆಗುತ್ತದೆ ಚಾಲನೆ ಸಿಗುತ್ತದೆ ಎಂದು ಕೊಂಡು ಕಾಯುತ್ತಾ ಇದ್ದ ನಾಡಿನ ಶಿಕ್ಷಕರ ವರ್ಗಾವ ಣೆ ಪ್ರಕ್ರಿಯೆಗೆ ಅಂತೂ ಇಂತೂ ಚಾಲನೆ ಸಿಗುವ ಸಮಯ ಹತ್ತಿರ ಬಂದಿದ್ದು ಆ ಒಂದು ಲಕ್ಷಣಗಳು ಗೋಚರಿಸುತ್ತಿವೆ. ಹೌದು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ 2020 ನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು ಇದಕ್ಕೂ ಮುನ್ನ ಏಪ್ರಿಲ್ 26 ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆಯನ್ನು ತಗೆದುಕೊಂಡು ನಂತರ ರಾಜ್ಯಪಾಲರ ಅಂಕಿತ ಸಿಕ್ಕ ನಂತರ ಸುಗ್ರೀವಾಜ್ಞೆ ಸಲ್ಲಿಕೆಯಾಗಲಿದೆ
ಹೌದು ಈ ಹಿಂದೆ ಇದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಯು 2020 ನವೆಂಬರ್ 2020-21 ನೇ ಸಾಲಿನ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿಗಳನ್ನು ಪ್ರಕಟಿ ಸುವ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭಿಸಿತ್ತು ಇದರ ನಂತರ ಮತ್ತೆ ವರ್ಗಾವಣೆ ಕೋರಿ 70 ಸಾವಿರ ಕ್ಕಿಂತ ಅಧಿಕ ಶಿಕ್ಷಕರು ಅರ್ಜಿ ಸಲ್ಲಿಸಿದ್ದರು.2019-20 ರಲ್ಲಿ ಹಳೆಯ ವರ್ಗಾವಣೆ ಕಾಯಿದೆ ಅನ್ವಯ ಸಾವಿ ರಾರು ಶಿಕ್ಷಕರು ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾ ವಣೆ ಶಿಕ್ಷೆಗೆ ಗುರಿಯಾಗಿದ್ದರು.ಈ ಶಿಕ್ಷಕರ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಶಿಕ್ಷಣ ಇಲಾಖೆ 2020 -21 ರಲ್ಲಿ ಪ್ರಥಮ ಆದ್ಯತೆ ನೀಡಿ ವರ್ಗಾವಣೆ ಮಾಡ ಲು ಮುಂದಾಗಿ ನಂತರ ನೆನೆಗುದಿಗೆ ಬಿದ್ದಿತ್ತು
2016-17 ನೇ ಸಾಲಿನಲ್ಲಿ ಹೆಚ್ಚುವರಿ ವರ್ಗಾವಣೆ ಶಿಕ್ಷೆಗೆ ಗುರಿಯಾದ ಶಿಕ್ಷಕರು ಈ ಕ್ರಮ ವಿರೋಧಿಸಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಮೊರೆ ಹೋಗಿದ್ದರು.ಈ ವರ್ಷದ ಜನವರಿ 2ರಂದು ತೀರ್ಪು ಪ್ರಕಟಿಸಿದ ಕೆಎಟಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗ ಳ ಅಧಿನಿಯಮ 2020’ರ ಅನ್ವಯ ಕಾಯಿದೆಯ ಅಂಶಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಂಶಗಳನ್ನು ಜಾರಿಗೊಳಿಸದೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳನ್ನು ನಡೆಸಬೇಕು ಎಂದಿತು.ಹೈಕೊರ್ಟ್ ಕೂಡ ಕೆಎಟಿ ತೀರ್ಪುಗಳನ್ನು ಎತ್ತಿ ಹಿಡಿದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು
ಶಿಕ್ಷಕರು ಈಗಾಗಲೇ ಹಲವು ಸಮಸ್ಯೆ ಎದುರಿಸುತ್ತಿ ರುವ ನಮ್ಮ ಶಿಕ್ಷಕರಿಗೆ ವರ್ಗಾವಣೆ ದೊಡ್ಡ ಗಂಭೀರ ವಾದ ಸಮಸ್ಯೆಯಾಗಿದೆ.ಪತಿ ಒಂದು ಕಡೆ ಪತ್ನಿ ಮತ್ತೊಂದು ಕಡೆ ಮಕ್ಕಳು ಇನ್ನೊಂದು ಕಡೆ ಹೀಗಾಗಿ ಏನಾದರೂ ಕೋಡಿ ಬಿಡಿ ಮೊದಲು ನಮಗೆ ವರ್ಗಾ ವಣೆ ಮಾಡಿ ಎನ್ನುತ್ತಿರುವ ಶಿಕ್ಷಕರ ನೋವಿನ ಧ್ವನಿಗೆ ಕೊನೆಗೂ ಸೋಮವಾರ ಸಚಿವ ಸಂಪುಟದ ಸಭೆ ಯಲ್ಲಿ ಉತ್ತರ ಸಿಗಲಿದೆ
ಈಗಾಗಲೇ ಈವರೆಗೆ ಸಾಕಷ್ಟು ಪ್ರಮಾಣದಲ್ಲಿ ನೋವು ಅನುಭವಿಸಿರುವ ಶಿಕ್ಷಕರು ವರ್ಗಾವಣೆ ಇಲ್ಲದೇ ಬೇಸತ್ತಿದ್ದಾರೆ.ಅವರಿವರಿಗೆ ಮನವಿ ನೀಡಿ ಕೊನೆಗೂ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮೇಲ್ ಮೂಲಕ ಸಂದೇಶ ಕಳಿಸಿದ ಶಿಕ್ಷಕರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ
ಇವೆಲ್ಲದರ ನಡುವೆ ಅಂತಿಮವಾಗಿ ಶಿಕ್ಷಕರ ವರ್ಗಾ ವಣೆ ಗೆ ಕುರಿತು ಸೋಮವಾರ ನಡೆಯುವ ಸಚಿವ ಸಂಪುಟದ ಸಭೆಗೆ ಮುಹೂರ್ತ ನಿಗದಿಯಾಗಿದ್ದು ಅಂದಿನ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆ ಯಾಗಿ ನಂತರ ಅಂತಿಮವಾಗಿ ರಾಜ್ಯಪಾಲರ ಅನು ಮೊದನೆಗೆ ಹೊಗಲಿದೆ
ಒಟ್ಟಾರೆ ಕಳೆದ ಹಲವಾರು ದಿನಗಳಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದ ನಾಡಿನ ಜನತೆಗೆ ಸೋಮವಾರ ಶುಭ ಸುದ್ದಿ ಸಿಗಲಿದ್ದು ಸಂತಸದ ವಿಚಾರವೇ ಸರಿ