ಚಿತ್ರದುರ್ಗ –
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ ನಗರ ಸಭಾ ಸದಸ್ಯ ಸೇರಿ ನಾಲ್ಕು ಜನರನ್ನು ಬಂಧಿಸಿರುವ ಘಟನೆ ಚಿತ್ರದುರ್ಗ ದಲ್ಲಿ ನಡೆದಿದೆ.ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ಮಾಡಿ ಮಾಜಿ ಸಚಿವ ಡಿ. ಸುಧಾಕರ್ ಬೆಂಬಲಿಗ ಹಾಗೂ ನೂತನ ನಗರ ಸಭೆ ಸದಸ್ಯ ಜಗದೀಶ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆ ದ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಲಾ ಗಿದೆ.ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಐಪಿಎಲ್ ಪಂದ್ಯ ನಡೆದಿತ್ತು.ಈ ಪಂದ್ಯಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದರು ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು

ಇನ್ನೂ ಮುಖ್ಯವಾಗಿ ಕಳೆದ ತಿಂಗಳು ನಡೆದ ನಗರ ಸಭೆಯ ಉಪಚುನಾವಣೆಯಲ್ಲಿ 15ನೇ ವಾರ್ಡ್ ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಗದೀ ಶ್ 548 ಮತಗಳಿಂದ ಗೆಲುವು ಕಂಡಿದ್ದರು.ಚುನಾ ವಣೆಯಲ್ಲಿ ಗೆದ್ದು ತಿಂಗಳು ಕಳೆಯುವ ಮೊದಲೇ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ.ಜಗದೀಶ್ ಜೊತೆಗೆ ಮಾರುತಿ,ಕಿರಣ್, ರವಿ ಅಲಿಯಾಸ್ ಉಂಡೆರವಿ ಎಂಬುವವರನ್ನು ಬಂಧಿಸಲಾಗಿದೆ.ಬಂಧಿತರಿಂದ ಸುಮಾರು 1 ಲಕ್ಷ ಕ್ಕೂ ಹೆಚ್ಚು ನಗದು ಮತ್ತು 10 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಿರಿಯೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ





















