ಹುಬ್ಬಳ್ಳಿ –
ಮುಂದೆ ಹೊರಟಿದ್ದ ವಾಹನಕ್ಕೆ ಬೈಕ್ ವೊಂದು ಡಿಕ್ಕಿ ಯಾದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವಿಗೀಡಾದ ಘಟನೆ ಹುಬ್ಬಳ್ಳಿಯ ವರೂರ ಬಳಿ ನಡೆದಿದೆ.
ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಒಂದು ಘಟನೆ ನಡೆದಿದೆ. ಮುಂದೆ ಹೊರಟಿದ್ದ ವಾಹನಕ್ಕೆ ಜೋರಾಗಿ ಬಂದ ಬೈಕ್ ನಿಯಂತ್ರಣ ಕಳೆದುಕೊಂಡು ಡಿಕ್ಕಿಯಾಗಿದೆ. ಪರಿಣಾಮ ಸ್ಥಳದ ಲ್ಲೇ ಬೈಕ್ ಸವಾರ ಸಾವಿಗೀಡಾಗಿದ್ದಾನೆ.
ಇರ್ಫಾನ್ ಸಾಬ್ ಹುಸೇನ್ ಸಾಬ್ ಕೆಲಕೊಂಡ ಸಾವಿಗೀಡಾದ ಬೈಕ್ ಸವಾರನಾಗಿದ್ದಾನೆ.ಮೃತನು ಹಾವೇರಿ ಜಿಲ್ಲೆಯ ಯಲವಗಿ ಗ್ರಾಮದ ನಿವಾಸಿಯಾ ಗಿದ್ದಾನೆ
ಇನ್ನೂ ಸುದ್ದಿ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀ ಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರ ಣ ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ