ಲಾತೂರ್ –
ಧೈರ್ಯ ವೊಂದು ಇದ್ದರೆ ಏನಾದರೂ ಸಾಧನೆ ಮಾಡಬಹುದು ಗೆಲ್ಲಬಹುದು ಎಂಬ ಮಾತಿಗೆ ಈ ಸ್ಟೋರಿ ಸಾಕ್ಷಿ. ದಿನ ಬೆಳಗಾದರೆ ಸಾಕಿ ಮಹಾಮಾರಿ ಯ ಒಂದೊಂದು ಸುದ್ದಿ ಕೇಳಿ ಕೇಳಿ ಜೀವನವೇ ಮುಗಿದು ಹೋಯಿತು ನಮಗೂ ಕೂಡಾ ಯಾವಾಗ ಬರುತ್ತದೆ ಎಂಬ ಚಿಂತೆಯಲ್ಲಿ ಕಾಲವನ್ನು ಕಳೆಯು ವಂತಾಗಿದೆ.ಹೌದು ಇಂತಹ ಕರೊನಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರೂ ಧೈರ್ಯದಿಂದ ಇರಿ ಧೃತಿಗೆ ಡಬೇಡಿ.ಹೆದರಿದರೆ ಅರ್ಧ ಸತ್ತಂತೆಯೇ, ಅದರಲ್ಲಿ ಯೂ ಕರೊನಾ ಪಾಸಿಟಿವ್ ಎಂದು ಗೊತ್ತಾದ ತಕ್ಷಣ ಭಯಪಡುವುದರಿಂದಲೇ ಮೃತಪಡುವವರ ಸಂಖ್ಯೆ ಏರುತ್ತಿದೆ ಎಂದು ತಜ್ಞರು ಇದಾಗಲೇ ಎಷ್ಟೋ ಬಾರಿ ಹೇಳಿದ್ದಾರೆ, ಹೇಳುತ್ತಲೂ ಇದ್ದಾರೆ. ಧೈರ್ಯದಿಂದ ಇದ್ದರೆ ಕರೊನಾ ಅಷ್ಟೇ ಎಲ್ಲಾ,ಸಾವನ್ನೇ ಜಯಿಸಬ ಹುದು ಎಂದು ತೋರಿಸಿಕೊಟ್ಟಿದ್ದಾರೆ ಇಲ್ಲೊಬ್ಬ ಶತಾ ಯುಷಿ ದಂಪತಿಗಳು
ಹೌದು ದೂರದ ಮಹಾರಾಷ್ಟ್ರದ ಲಾತೂರ್‌ನ ಧೇನು ಚೌಹಾಣ್ ಮತ್ತು ಅವರ ಪತ್ನಿ ಮೋಟಾಬಾ ಯಿ ಅವರೇ ಈ ಒಂದು ಮಾತಿಗೆ ನಮ್ಮ ಮುಂದೆ ಸಾಕ್ಷಿಯಾಗಿ ನಿಲ್ಲುತ್ತಾರೆ. ಈ ದಂಪತಿಗಳಲ್ಲಿ ಧೇನು ಅವರಿಗೆ 105 ವರ್ಷವಾಗಿದ್ದರೆ, ಮೋಟಾಬಾಯಿ ಅವರಿಗೆ 96 ವರ್ಷ.ಇವರಿಬ್ಬರಿಗೂ ಕರೊನಾ ಪಾಸಿ ಟಿವ್ ಕಾಣಿಸಿಕೊಂಡಿತ್ತು.ಮಾತ್ರವಲ್ಲದೇ ವಿಪರೀತ ವಾಗಿ ದಂಪತಿ ಬೆಳಲಿ ಬೆಂಡಾಗಿದ್ದರು.
ಕೊರೊನಾ ಕಾಣಿಸಿಕೊಂಡ ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ ಈ ಹಿರಿ ಯ ಜೀವಗಳು ಮಾತ್ರ ಯಾವುದಕ್ಕೂ ಭಯಪಡ ದೇ ಅಂಜದೇ ಧೈರ್ಯದಿಂದ ಇದ್ದರು.ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಈ ದಂಪತಿ ಜೀವಂತವಾಗಿ ಬರುತ್ತಾರೆ ಎಂದು ನೆರೆಹೊ ರೆಯರಾರೂ ನಂಬಲಾರದ ಪರಿಸ್ಥಿತಿಯ ನಡುವೆ ಕೊರೊನಾ ವನ್ನು ಗೆದ್ದು ಬಂದಿದ್ದಾರೆ ಶತಾಯುಷಿ ದಂಪತಿಗಳು
ಇಬ್ಬರಿಗೂ ಕರೊನಾ ಸೋಂಕು ಹೆಚ್ಚಾಗಿ ಇನ್ನೇನು ಸಾವಿನ ಸಮೀಪವೇ ಇದ್ದರು.ಐಸಿಯುನಲ್ಲಿ ಇಬ್ಬ ರಿಗೂ ಚಿಕಿತ್ಸೆ ನೀಡಲಾಗಿತ್ತು.ಆದರೆ ಇಬ್ಬರೂ ಸಾವಿನೊಂದಿಗೆ ಸಧ್ಯ ದೇಶವನ್ನು ಬಿಟ್ಟು ಬಿಡಲಾರ ದೇ ಕಾಡುತ್ತಿರುವ ಲಕರೊನಾವನ್ನೂ ಜಯಿಸಿ ಬಂದಿ ದ್ದಾರೆ.ವಾಪಸ್ ಬಂದಿದ್ದನ್ನು ನೋಡಿ ಎಲ್ಲರೂ ಆಶ್ಚ ರ್ಯಚಕಿತರಾಗಿದ್ದಾರೆ
ಇನ್ನೂ ಪ್ರಮುಖವಾಗಿ ಇ ಒಂದು ಸೋಂಕು ತಗುಲಿ ದ ನಂತರ ಮೊದಲು ಭಯದಿಂದ ಇದ್ದರೂ ಕೊನೆಗೆ ಧೈರ್ಯದಿಂದ ಎಲ್ಲವನ್ನೂ ನಿಭಾಯಿಸಿ ದ್ದಾರೆ. ಅವ ರ ಧೈರ್ಯವೇ ಇಂದು ಅವರಿಗೆ ಮರುಜೀವ ನೀಡಿ ದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇಬ್ಬರೂ ಸಹ ವೃದ್ಧರಾದ ಕಾರಣ ಚಿಕಿತ್ಸೆಗೆ ಹೇಗೆ ಸ್ಪಂದಿಸು ತ್ತಾರೆಂಬ ಕಳವಳವಿತ್ತು,ಆಕ್ಸಿಜನ್ ಬೆಂಬಲದಲ್ಲಿ ಯೇ ಇದ್ದರು ಮತ್ತು 5 ಆಂಟಿವೈರಸ್ ರೆಮಿಡಿಸಿವ ರ್ ಚುಚ್ಚುಮದ್ದು ನೀಡಲಾಯಿತು ಎಂದು ದಂಪತಿಗೆ ಚಿಕಿತ್ಸೆ ನೀಡಿದ ವೈದ್ಯ ಗಜಾನನ ಹೇಳಿದ್ದಾರೆ.ಇದ ರೊಂದಿಗೆ ಧೈರ್ಯದಿಂದ ಇದ್ದರೆ ಕರೊನಾವನ್ನೂ ಜಯಸಿಬಹುದು ಎಂದು ಅವರು ಎಲ್ಲರಿಗೂ ಒಂದು ಈ ಮೂಲಕ ದೊಡ್ಡ ಸಂದೇಶವನ್ನು ನೀಡಿದ್ದಾರೆ.