ಚಿಕ್ಕಮಗಳೂರು –
ಇಂದು ಹಸೆಮಣೆ ಏರಬೇಕಿದ್ದ ಯುವಕನೊರ್ವ ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿ ರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕ ಮಗಳೂರಿನ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
32 ವರ್ಷದ ಪೃಥ್ವಿರಾಜ್ ಕೊರೊನಾ ಸೋಂಕಿಗೆ ಬಲಿಯಾದವನಾಗಿದ್ದಾನೆ.ಇಂದು ವೈವಾಹಿಕ ಜೀವ ನಕ್ಕೆ ಕಾಲಿಡಬೇಕಾಗಿತ್ತು ಪೃಥ್ವಿರಾಜ್ ಇದಕ್ಕಾಗಿ ಬೆಂಗಳೂರಿನಿಂದ ಹತ್ತು ದಿನಗಳ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದನು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು ಚಿಕಿತ್ಸೆ ಫಲಕಾರಿ ಯಾಗದೆ ಸಾವಿಗೀಡಾಗಿದ್ದಾನೆ.
ಇನ್ನೂ ಸಂಭ್ರಮ ನೆಲೆಸಬೇಕಿದ್ದ ಮನೆಯಲ್ಲಿಗ ಸೂತಕದ ಛಾಯೆ ಕಂಡು ಬರುತ್ತಿದೆ