ಮೈಸೂರು –
ಒಂದು ಕಡೆ ಮಹಾಮಾರಿ ಕರೊನಾ ಸಂಕಷ್ಟ ಮತ್ತೊಂದು ಕಡೆ ಲಾಕ್ ಡೌನ್ ಇದನ್ನೇ ಬಂಡವಾಳ ಮಾಡಿಕೊಂಡು ಹೈಟೆಕ್ ರೀತಿಯಲ್ಲಿ ಇದರ ನಡುವೆ ಯೂ ಸ್ಪಾ ಹೆಸರಿನಲ್ಲಿ ಮಸಾಜ್ ಮತ್ತು ವೇಶ್ಯಾವಾ ಟಿಕೆ ದಂಧೆ ನಡೆಸುತ್ತಿದ್ದ ಕಿಡಿಗೇಡಿಗಳ ಅಡ್ಡೆ ಮೇಲೆ ಮೈಸೂರಿನ ವಿಜಯನಗರ ಪೊಲೀಸರು ದಾಳಿ ಮಾಡಿದ್ದಾರೆ.
ದಂಧೆ ನಡೆಸುತ್ತಿದ್ದ ಮಹಿಳೆಯೊಂದಿಗೆ ಪ್ರಜ್ವಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮನೆ ಬಾಡಿಗೆಗೆ ಕೊಟ್ಟಿದ್ದ ಮಾಲೀಕರ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಲ್ಯಾವೆಂಡರ್ ಯ್ಯೂನಿಸೆಕ್ಸ್ ಬ್ಯೂಟಿ ಸ್ಪಾ ಮತ್ತು ಸಲೂನ್ ಹೆಸರಿನಲ್ಲಿ ಕಿಡಿಗೇಡಿಗಳು ದಂಧೆ ನಡೆಸು ತ್ತಿದ್ದರು.ಆನ್‌ಲೈನ್‌ನಲ್ಲೇ ಪುರುಷರನ್ನು ಸಂಪರ್ಕಿ ಸುತ್ತಿದ್ದ ಆರೋಪಿಗಳು ಆನ್‌ಲೈನ್‌ನಲ್ಲೇ ಸಮಯ ನಿಗದಿ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಯುವತಿಯ ರಿಂದ ಮಸಾಜ್ ಮಾಡಿಸುತ್ತಿದ್ದರು.ಇದರೊಂದಿಗೆ ಬೇರೆ ಚಟುವಟಿಕೆಗಳು ಸಹ ನಡೆಯುತ್ತಿದ್ದವು.
ಇವೆಲ್ಲವುದರ ನಡುವೆ ಆತಂಕಕಾರಿ ವಿಚಾರವೆಂದರೆ ಲಾಕ್‌ಡೌನ್ ವೇಳೆಯೂ ಸ್ಪಾಸುತ್ತಲೂ ವಾಹನಗಳು ಗಳು ಸಂಚರಿಸುತ್ತಿದ್ದವು.ಈ ವೇಳೆ ಗಸ್ತಿನಲ್ಲಿದ್ದ ಹೆಡ್ ಕಾನ್ ಸ್ಟೇಬಲ್ ಸೋಮಾರಾಧ್ಯ ಎಂಬುವರು ಪರಿ ಶೀಲನೆ ನಡೆಸಿದ ಬಳಿಕ ತಮ್ಮ ತಂಡದೊಂದಿಗೆದಾಳಿ ನಡೆಸಿದಾಗ ಕಿಡಿಗೇಡಿಗಳ ದಂಧೆ ಬಯಲಾಗಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.