ಬಳ್ಳಾರಿ –
ಮಹಾಮಾರಿ ಕರೋನ ಗೆ BEO ಕಚೇರಿಯ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯೊಬ್ಬರು ಬಲಿ ಯಾಗಿದ್ದಾರೆ.ಕಚೇರಿಯ ಅಧೀಕ್ಷರಾದ ಕರಿಬಸವ ರಾಜ ಇವರಿಗೆ ಕಳೆದ ವಾರ ಕರೋನ ಸೋಂಕು ಕಾಣಿಸಿಕೊಂಡಿತ್ತು ನಂತರ ಇವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಯನ್ನು ನೀಡಲಾ ಗುತ್ತಿತ್ತು ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆ ಯಲ್ಲಿ ನಿಧನರಾದರು.ಇನ್ನೂ ಮೃತರಾದ ಆತ್ಮಕ್ಕೆ ಶಾಂತಿ ಸಿಗಲಿ ಕುಟುಂಬಕ್ಕೆ ನೋವು ಸಹಿಸುವ ಶಕ್ತಿಯನ್ನು ಭಗವಂತ ಕೊಡಲಿ ಎಂದು ನಾಡಿನ ಮೂಲೆ ಮೂಲೆ ಗಳಿಂದ ಶಿಕ್ಷಕ ಬಂಧುಗಳು ಪ್ರಾರ್ಥಿಸಿದ್ದಾರೆ

ಇನ್ನೂ ಮೃತರಾದ ಶಿಕ್ಷಕರಿಗೆ ಸಂಘವೂ ಕೂಡಾ ಸಂತಾಪವನ್ನು ಸೂಚಿಸಿದೆ.ಸಂಘದ ಅಧ್ಯಕ್ಷ ಶಂಭು ಲಿಂಗನಗೌಡ ಪಾಟೀಲ.ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹಾಗೇ ಸುರೇಶ ಶೇಡಶ್ಯಾಳ, ಬಿ ಟಿ ಗೌಡರ,ಜುಬೇರ ಕೆರೂರ,ಜೆ ಎಸ್ ಬಾಲೇಸೂ ರ,ಹೆಚ್ ಬಿ ಕೊನಾಡಿ ಸೇರಿದಂತೆ ಸಂಘದ ಸರ್ವ ಸದಸ್ಯರು ಒಂದೇ ದಿನ ಮೃತರಾದ ಮೂವರು ಶಿಕ್ಷಕರಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ ಇದರೊಂದಿಗೆ ಕಾಳಜಿವಹಿಸಿಕೊಳ್ಳುವಂತೆ ವಿನಂತಿಸಿ ಇದರೊಂದಿಗೆ ಮೃತ ಶಿಕ್ಷಕರ ಕುಟುಂಬಕ್ಕೆ ಕೂಡಲೇ ಸೂಕ್ತವಾದ ಪರಿಹಾರವನ್ನು ನೀಡುವಂತೆ ಒತ್ತಾಯ ವನ್ನು ಮಾಡಿದ್ದಾರೆ.