ಬೆಂಗಳೂರು –
ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ ಮಹಾನ್ ಸಾಹಿತಿಯೊಬ್ಬರು ಬಲಿಯಾಗಿದ್ದಾರೆ. ಹೌದು ಕನ್ನಡ ಪ್ರಾಧ್ಯಾಪಕ,ಸಾಹಿತಿ,ಅಂಕಣಕಾರ,ಚಿಂತಕ, ಸಂಘ ಟಕ ಹಾಗೂ ಕನ್ನಡಪರ ಹೋರಾಟಗಾರರೂ ಆದ ಡಾ. ಕೋ.ವೆಂ. ರಾಮಕೃಷ್ಣೇಗೌಡ ಅವರು ಕೊರೋ ನ ಮಹಾಮಾರಿಗೆ ಬಲಿಯಾಗಿದ್ದಾರೆ

ಕನ್ನಡ ಸಂಘರ್ಷ ಸಮಿತಿ ಮತ್ತು ಬೆಂಗಳೂರು ವಿಶ್ವ ವಿದ್ಯಾಲಯದ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷರಾಗಿದ್ದ ಡಾ.ಕೋ.ವೆಂ.ಅವರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಗೌರವ ಕಾರ್ಯ ದರ್ಶಿ ಮತ್ತು ಕಸಾಪ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ರಾಮಕೃಷ್ಣೇ ಗೌಡರ ಅಕಾಲಿಕ ಮರಣ ನೋವಿನ ಸಂಗತಿಯಾ ಗಿದೆ ಎಂದು ನಾಡಿನ ಸಮಸ್ತ ಶಿಕ್ಷಕರ ಬಳಗ ಸಂತಾ ಪ ಸೂಚಿಸಿದೆ.ಅಲ್ಲದೇ ದುಖಃವನ್ನು ತಡೆದುಕೊಳ್ಳು ವ ಶಕ್ತಿಯನ್ನು ಆ ಒಂದು ದೇವರು ಕುಟುಂಬಕ್ಕೆ ನೀಡಲೆಂದು ಸತೀಶ್ ಜವರೇಗೌಡ, ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾ ಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ, ಹನುಮಂತ ಬೂದಿಹಾಳ ಸೇರಿದಂತೆ ಹಲವರು ಸಂತಾಪ ಸೂಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ತುಂಲಾರದ ನಷ್ಟವುಂಟಾಗಿದೆ. ಅವರ ಕನ್ನಡಪರ ಸೇವೆ ಸ್ಮರಣೀಯ. ಕನ್ನಡ ಮಾತೆ ಅವರ ಅತ್ಮಕ್ಕೆ ಶಾಂತಿಯನ್ನು ಕರುಣಿಸಲೆಂದು ಪ್ರಾರ್ಥಿಸಿ ದ್ದಾರೆ