ಬೆಂಗಳೂರು –
ಕೋವಿಡ್ ನಿಂದಾಗಿ ರಾಜ್ಯಾಧ್ಯಂತ ಶಿಕ್ಷಕರ ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ. ಈ ಒಂದು ಸೋಂಕಿನಿಂ ದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿ ದ್ದ ಶಿಕ್ಷಕರು ರಾಜ್ಯದ ಹಲವೆಡೆ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಮಹಾಮಾರಿಗೆ ಒಟ್ಟು ಐದು ಜನ ಶಿಕ್ಷಕ ಬಂಧುಗಳು ಸಾವಿಗೀಡಾಗಿದ್ದಾರೆ. ಹೌದು ಸಧ್ಯ ಶಾಲೆಗಳಿಗೆ ರಜೆ ನೀಡಲಾಗಿದೆ ಆದರೂ ಕೂಡಾ ಈ ಹಿಂದೆ ಕರ್ತವ್ಯ ಮಾಡಿ ಈಗ ಮನೆಯಲ್ಲಿ ರುವ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗುತ್ತಿದ್ದಾರೆ.ಇನ್ನೂ ರಾಜ್ಯದಲ್ಲಿ ಮಹಾಮಾರಿಗೆ ಮೃತರಾದ ಶಿಕ್ಷಕ ಬಂಧುಗಳ ಮಾಹಿತಿಯನ್ನು ನೋಡೊದಾದರೆ
ಇತ್ತ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕುರವಿ ನಕೊಪ್ಪದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದ ಕುಮಾರಸ್ವಾಮಿ ಮಠದ ಕೂಡಾ ಕೋವಿಡ್ ಮಹಾಮಾರಿಗೆ ಬಲಿ ಯಾಗಿದ್ದಾರೆ. ಚಿಕ್ಕ ವಯಸ್ಸಿನ ಇವರು ಕೂಡಾ ಮಹಾ ಮಾರಿಗೆ ಸಾವಿ ಗೀಡಾಗಿದ್ದಾರೆ.ಸರ್ಕಾರಿ ಪ್ರೌಢ ಶಾಲೆ ಕುರುವಿನ ಕೊಪ್ಪದಲ್ಲಿ ಸಂಪನ್ಮೂಲ ಗಣಿತ ಶಿಕ್ಷಕರಾ ಲಗಿದ್ದರು.
ಇನ್ನೂ ಇತ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ
ಶಿಕ್ಷಕಿ ಸುಶೀಲಾ ಅವರು ಕೂಡಾ ಕೋವಿಡ್ ನಿಂದಾ ಗಿ ಸಾವಿಗೀಡಾಗಿದ್ದಾರೆ.
ಇನ್ನೂ ಡಿ ಎ ಧೂಳಖೇಡ ನಿವೃತ್ತ ಶಿಕ್ಷಕರು ಇವರು ಕೂಡಾ ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾ ರೆ.
ಶ್ರೀಮತಿ ಪಾರ್ವತಿ ಘಾಳೆ ಉಪನ್ಯಾಸಕಿ ಕಲಬುರ ಗಿಯ ಗುರು ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿ ಯಾಗಿದ್ದು ಇವರಿಗೆ ಕಳೆದ ವಾರ ಸೋಂಕು ಕಾಣಿಸಿ ಕೊಂಡು ನಂತರ ಇವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.
ಇನ್ನೂ ತುಂಬೆಲ್ಲಾ ಮೃತರಾದ ಶಿಕ್ಷಕರಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾ ಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,.ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗವೇಣಿ, ಇಂದಿರಾ. ಮುಕಾಂಬಿಕಾ ಭಟ್.ನಾಗರತ್ನ,ಲಕ್ಷ್ಮೀದೇವಮ್ಮ, ಎಂ ವಿ,ಕುಸುಮಾ ಎಸ್ ಹೊಳೆಯಣ್ಣನವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಹನಮಂತಪ್ಪ ಬೂದಿಹಾಳ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ಮೃತ ಶಿಕ್ಷಕರ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಕರೋನಾ ವಾರಿಯರ್ಸ್ ಅಂತಾ ಘೋಸಣೆ ಮಾಡಿ ಸೂಕ್ತ ಪರಿಹಾರವನ್ನು ನೀಡುವಂತೆ ಒತ್ತಾಯವನ್ನು ಮಾಡಿದ್ದಾರೆ.