ತುಮಕೂರು –
ಕೋವಿಡ್ ಮಹಾಮಾರಿಗೆ ರಾಜ್ಯದಲ್ಲಿ ಮತ್ತೊರ್ವ ದಕ್ಷ ಅಧಿಕಾರಿ ಸಾವಿಗೀಡಾಗಿದ್ದಾರೆ. ಹೌದು ಈ ಒಂದು ರೋಗಕ್ಕೆ ಜಗವೇ ತಲ್ಲಣಗೊಂಡಿದ್ದು ಸಾವು ನೋವುಗಳೇ ಹೆಚ್ಚುತ್ತಿದೆ.ಕೊರೊನಾ ಅಟ್ಟಹಾಸಕ್ಕೆ ಇಂದು ದಕ್ಷ ಮಹಿಳಾ ಶಿಕ್ಷಣ ಅಧಿಕಾರಿಯೊಬ್ಬರು ರಾಜ್ಯದಲ್ಲಿ ಸಾವಗೀಡಾಗಿದ್ದಾರೆ. ಹೌದು ಶ್ರೀಮತಿ ಕಾಮಾಕ್ಷಿ.ಕೆ.ಎಂ ಮೃತ ಅಧಿಕಾರಿಯಾಗಿದ್ದಾರೆ. ತುಮಕೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆ ಉಸಿರೆಳೆದಿ ದ್ದಾರೆ. ಈ ಹಿಂದೆ ಬಾಗಲಕೋಟೆ ಜಿಲ್ಲೆ ಹಾಗೂ ತುಮಕೂರು (ದಕ್ಷಿಣ) ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿ ಸಿ ಅವರ ದಕ್ಷ ಪ್ರಾಮಾಣಿಕ ಆಡಳಿತದಿಂದ ಜಿಲ್ಲೆಗೆ ಹೆಸರಾಗಿದ್ದರು.ಕಳೆದ ವರ್ಷವಷ್ಟೇ ಚಿತ್ರದುರ್ಗ ಜಿಲ್ಲೆಯ ಸಿ.ಟಿ.ಇ ಶಿಕ್ಷಣ ಸಂಸ್ಥೆಗೆ ಹಿರಿಯ ಪ್ರವಾಚ ಕರಾಗಿ ವರ್ಗಾವಣೆಗೊಂಡು ಕೆಲಸ ನಿರ್ವಹಿಸುತ್ತಿ ದ್ದರು.ಅಲ್ಲಿಯೂ ಸಹ ಶಿಕ್ಷಕರ ಆನ್‌ಲೈನ್ ನಿಷ್ಟಾ ತರಬೇತಿಯ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾ ಗಿ ನಿಬಾಯಿಸಿ ಎಲ್ಲ ಶಿಕ್ಷಕರ ಮನದಲ್ಲಿ ನೆಲೆಯಾಗಿ ನಿಂತವರಾಗಿದ್ದರು. ದುರಾದೃಷ್ಟವಶಾತ್ ಇಂದು ಕೋರೊನಾ ಮಹಾಮಾರಿಗೆ ಸಿಲುಕಿ ಮರಣ ಹೊಂದಿದ್ದಾರೆ.

ಅಕಾಲಿಕ ಸಾವನ್ನಪಿದ ಶ್ರೀಮತಿ ಕಾಮಾಕ್ಷಿ ಮೆಡಂ ರವರ ಆತ್ಮಕ್ಕೆ ಚಿರಶಾಂತಿ ಸಿಗಲಿ,ಅವರ ದುಂಖತಪ್ತ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗ ವಂತ ಕರುಣಿಸಲಿ ಎಂದು ನಾಡಿನ ಶಿಕ್ಷಕರು ಭಾವ ಪೂರ್ಣ ಶ್ರದ್ದಾಂಜಲಿ ಸಲ್ಲಿಸಿದ್ದಾರೆ

ಇನ್ನೂ ಮೃತರಾದ ಶಿಕ್ಷಣ ಇಲಾಖೆಯ ಅಧಿಕಾರಿಗೆ ನಾಡಿನ ಮೂಲೆಗಳಿಂದ ಶಿಕ್ಷಕರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ ಹನಮಂತ ಬೂದಿಹಾಳ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ, ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇ ಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾಪೂರ, ರಾಜುಸಿಂ ಗ್ ಹಲವಾಯಿ,ಚಂದ್ರಶೇಖರ ಶೆಟ್ರು, ನಾರಾಯಣ ಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜು ಳಾ,ಸೀಮಾ ನಾಯಕ, ಭಾರತಿ ಭಂಡಾರಿ, ಮಂಜು ಳಾ ಬಾಗಲೂರು, ನಾಗವೇಣಿ, ಇಂದಿರಾ. ಮುಕಾಂ ಬಿಕಾ ಭಟ್.ನಾಗರತ್ನ,ಲಕ್ಷ್ಮೀದೇವಮ್ಮ,ಎಂ ವಿ, ಕುಸುಮಾ ಎಸ್ ಹೊಳೆಯಣ್ಣನವರ,ಬಿ ವಿ ಅಂಗಡಿ ಜಗದೀಶ್ ಬೋಳಸೂರ, ಅಶೋಕ ಸಜ್ಜನ, ಶಿವಾನಂದ ಗುಡ್ಡೋಡಗಿ ಸಿದ್ದು ಹಂಚಿನಾಳ ಸೇರಿ ದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ಮೃತ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಕರೋನಾ ವಾರಿಯರ್ಸ್ ಅಂತಾ ಘೋಷ ಣೆ ಮಾಡಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ವನ್ನು ಮಾಡಿದ್ದಾರೆ.