ಡಾಕ್ಟರೇಟ್ ಪದವಿ ಪಡೆದ BRC ಅಧಿಕಾರಿ – ಪದವಿ ಪಡೆದ ಎಮ್ ಎಸ್ ಮೇದಾರ ರವರಿಗೆ ಸನ್ಮಾನ

Suddi Sante Desk

ಬೆಳಗಾವಿ –

ಬೆಳಗಾವಿ ತಾಲೂಕು ವಲಯ ಕ್ಷೇತ್ರ ಸಂಪನ್ಮೂಲ ಕೇಂದ್ರದ (ಬಿ ಆರ್ ಸಿ )ಸಮನ್ವಯಾಧಿಕಾರಿ ಗಳಾದ ಕ್ರಿಯಾಶೀಲತೆಗೆ ಹೆಸರಾದ ಮಹಾದೇವ ಎಸ್ ಮೇದಾರ ರವರು ಇಂಗ್ಲಿಷ್ ವಿಷಯದಲ್ಲಿ ಶೈಕ್ಷಣಿಕದ ಹಿನ್ನಲೆಯ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ನಿಮಿತ್ಯ ಜಿಲ್ಲಾ ಸಮಾನ ಮನಸ್ಕ ಶಿಕ್ಷಕರ ಗೆಳೆಯರ ಬಳಗದ ವತಿಯಿಂದ ಸನ್ಮಾನ ಮಾಡಿ ಅವರ ಉತ್ತಮ ಶೈಕ್ಷಣಿಕ ಕಾರ್ಯಗಳಿಗೆ ಅಭಿನಂದನೆಗಳನ್ನು ಹೇಳಿ ಅವರಿಗೆ ಶುಭ ಕೋರಲಾಯಿತು. ಹೌದು ಅವರಿಂದ ಶಿಕ್ಷಕ ಸಮುದಾಯಕ್ಕೆ ಹೆಮ್ಮೆ ಬಂದಿದೆ ಎಂದು ಸಂತೋಷ್ ವ್ಯಕ್ತಪಡಿಸಿದರು.

ಶಿಕ್ಷಕರ ಬಳಗದ ಗೆಳೆಯರಾದ ರುಕ್ಮಿಣಿ ನಗರದ ಕನ್ನಡ ಶಾಲೆಯ ಶಿಕ್ಷಕರಾದ ರಾಜೇಂದ್ರ ಗೊಶ್ಯಾನಟ್ಟಿಯವರು, ವಿಜಯ ನಗರ ಮರಾಠಿ ಶಾಲೆಯ ಶಿಕ್ಷಕರಾದ ಆರ್ ಅಯ್ ಮೆಟ್ಯಾಳಮಠ ರವರು,ತಾಲೂಕು ವಲಯದ ಬಿ ಐ ಆರ್ ಟಿ. ಶಬ್ಬೀರ ಖುದ್ದನವರ ನವರು,ಬೆಳಗಾವಿ ನಗರ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಗೌರವ ಅಧ್ಯಕ್ಷರಾದ ಕುಮಾ ರಸ್ವಾಮಿ ಚರಂತಿಮಠ,ನಗರ ವಲಯದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಎ ಡಿ ಸಾಗರ ರವರು,ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಳಾದ ಬಸವರಾಜ ಸುಣಗಾರ ರವರು ಜಂಟಿಯಾಗಿ ಸನ್ಮಾನಿಸಿ ಅಭಿನಂದಿಸಿದರು
ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದವರಾದ ಸಾಮಾನ್ಯ ಕುಟುಂಬದಿಂದ ಬಂದಿರುವ ಎಮ್ ಎಸ್ ಮೇದಾರ ರವರು ಪ್ರಾರಂಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದರು ಸ್ವಪ್ರಯತ್ನದಿಂದ ವಿವಿಧ ಹುದ್ದೆಗಳಲಿ ಕಾರ್ಯನಿರ್ವಹಿಸಿ ಇಂದು ಕೆ ಇ ಎಸ್ ಅಧಿಕಾರಿಗಳಾಗಿರುವರು.ಸತತವಾಗಿ ಆರು ವರ್ಷ ಕಾಲ ಅಧ್ಯಯನ ಮಾಡಿ ಇಂದು ಇಂಗ್ಲಿಷ್ ವಿಷಯದಲ್ಲಿ ಪಿ ಎಚ್ ಡಿ ಪಡೆದಿರುವದು ಅಭಿನಂದನೀಯ ವಿಷಯವಾ ಗಿದೆ ಎಂದು ಶಿಕ್ಷಕರು ಹೇಳಿ ಅಭಿನಂದಿಸಿದರು ಸದಾ ನಗು ಮೊಗದ,ಶಿಕ್ಷಕರ ಸ್ನೇಹಿ ಆಡಳಿತಗಾರರು,ಸರಳ ಸಜ್ಜನಿ ಕೆಯ, ಸ್ನೇಹ ಜೀವಿ ಯಾಗಿರುವ ಎಮ್ ಎಸ್ ಮೇದಾರ ರವರು ತಮಗೆ ಸಹಾಯ ಸಹಕಾರ ನೀಡಿದವರನ್ನು ನೆನೆದರು ಹಾಗೂ ತಮಗೆ ಸನ್ಮಾನ ಮಾಡಿದ ಶಿಕ್ಷಕರ ಗೆಳೆಯರ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.