ಧಾರವಾಡ –
ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಧಾರವಾಡ ವಾರ್ತಾ ಭವನದಲ್ಲಿ ಇಂದು ಬೆಳಿಗ್ಗೆಯಿಂದ ಮಾದ್ಯ ಮ ಪ್ರತಿನಿಧಿಗಳಿಗೆ ಕೋವಿಶಿಲ್ಡ್ ಲಸಿಕೆಯನ್ನು ಹಾಕಿ ಸಲಾಯಿತು.ಸುಮಾರು 85 ಜನ ಮುದ್ರಣ ಹಾಗೂ ವಿದ್ಯುನ್ಮಾನ ಮಾದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ಪತ್ರಕರ್ತರು, ಪೋಟೊಗ್ರಾಫರ್, ವಿಡಿಯೋ ಗ್ರಾಪರ್ ಗಳು ಹಾಗೂ ವಾರ್ತಾ ಇಲಾಖೆ ಸಿಬ್ಬಂದಿ ಗಳು ಲಸಿಕೆ ಪಡೆದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀ ನಕರ ಹಾಗೂ ಆರ್.ಸಿ.ಎಚ್.ಓ ಡಾ. ಎಸ್.ಎಮ್. ಹೊನಕೇರಿ ಅವರು ಖುದ್ದು ಪರಿಶೀಲಿಸಿ, ಲಸಿಕಾಕರ ಣದ ಮೇಲ್ವಿಚಾರಣೆ ಮಾಡಿದರು.

ಮಾದ್ಯಮ ಕೋರೊನಾ ವಾರಿಯರ್ಸ್ ಗಳ ಬೇಡಿಕೆ ಯಂತೆ ಲಸಿಕಾಕರಣಕ್ಕೆ ಆದ್ಯತೆ ನೀಡಿ ಒಂದೇ ಸ್ಥಳ ದಲ್ಲಿ ಸ್ಪಾಟ್ ರಿಜಿಸ್ಟ್ರೇಶನ್ ಮಾಡಿಕೊಳ್ಳುವ ಮೂಲಕ ಲಸಿಕೆ ಪಡೆಯಲು ಅವಕಾಶ ಕಲ್ಪಿಸಿದ ಮಾನ್ಯ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಾರ್ತಾ ಇಲಾಖೆಯಿಂದ ಮತ್ತು ಮಾಧ್ಯಮ ಮಿತ್ರರಿಂದ ಧನ್ಯವಾದಗಳು.