ಬೆಂಗಳೂರು –
ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿಂದು ಮತ್ತೆ ಏಳು ಜನ ಶಿಕ್ಷಕರು ಸಾವಿಗೀಡಾಗಿದ್ದಾರೆ.ರಾಜ್ಯದ ಹಲವೆಡೆ ಇಂದು ಕೂಡಾ ಕೋವಿಡ್ ನಿಂದಾಗಿ ಶಿಕ್ಷಕರು ಸಾವಿಗೀಡಾಗಿದ್ದಾರೆ. ಶಾಲೆಗಳಿಗೆ ರಜೆ ಇದ್ದರೂ ಕೂಡಾ ಮನೆಯಲ್ಲಿದ್ದ ಶಿಕ್ಷಕರಿಗೆ ಕರೋನಾ ಸೋಂಕು ಕಾಣಿಸಿಕೊಂಡು ನಂತರ ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಇಂದು ರಾಜ್ಯದ ಹಲವೆಡೆ ಮೃತರಾದ ಶಿಕ್ಷಕರ ವಿವರನ್ನು ನೊಡೊದಾದರೆ

ಮತ್ತಪ್ಪ ಹರಿಜನ ವಿಜಯಪುರದ ಇಂಡಿಯ ಸರ್ಕಾ ರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಇವರಿಗೆ ಮೂರು ದಿನಗಳ ಹಿಂದೆ ಕರೋನಾ ಸೋಂ ಕು ಕಾಣಿಸಿಕೊಂಡು ನಂತರ ಇಂಡಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಇವರು ನಿಧನರಾಗಿದ್ದಾರೆ.

ಎಸ್ ಎಸ್ ಅಸಂಗಿ ಸಿಂದಗಿಯ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರಿಗೆ ಕಳೆದ ವಾರ ಕರೋನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಇವರನ್ನು ಆಸ್ಪತೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸ ದೇ ಇಂದು ಇವರು ಆಸ್ಪತ್ರೆಯಲ್ಲಿ ಸಾವಿಗೀಡಾಗಿ ದ್ದಾರೆ.

ಇನ್ನೂ ಎಮ್ ಬಿ ಮುಜಾವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರು ಕೂಡಾ ಕೋವಿಡ್ ಸೋಂಕಿನಿಂದಾಗಿ ಮೃತರಾಗಿದ್ದಾರೆ.ಕರೋನಾ ಸೋಂಕು ಕಾಣಿಸಿಕೊಂಡ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.

ಮಲ್ಲಿಕಾರ್ಜುನ ವಸ್ತಿ ಸಿಂದಗಿಯ ಕೋರಹಳ್ಳಿಯಲ್ಲಿ ಶಿಕ್ಷಕರಾಗಿರುವ ಇವರಿಗೆ ಕರೋನಾ ಸೋಂಕು ಕಾಣಿಸಿಕೊಂಡು ಆಸ್ಪತ್ರಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೇ ಇವರು ಇಂದು ನಿಧನರಾಗಿದ್ದಾರೆ. ಕೋವಿಡ್ ಕರ್ತವ್ಯದ ಮೇಲಿದ್ದಾಗ ಇವರಿಗೆ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ದ್ದರು.

ಶಾಂತಕುಮಾರ ವಾಲಿಕರ ಹಿರಿಯ ಪ್ರಾಥಮಿಕ ಶಾಲೆ ಶಿವಪುರ ಗುಲ್ಬರ್ಗಾ ಇವರು ಕೂಡಾ ಕೋವಿಡ್ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯ ಮಾಡುತ್ತಿದ್ದರು. ಇವರಿಗೂ ಕೂಡಾ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.ಇವರು ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.

ಜಿ ಎಎಮ್ ಪಾರಸಗೊಡ ಐನಾಪೂರದ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರೂ ಕೂಡಾ ಇಂದು ಮೃತರಾಗಿದ್ದಾರೆ. ಗ್ರಾಮೀಣ ವಲಯದಲ್ಲಿರುವ ಈ ಒಂದು ಶಾಲೆಯಲ್ಲಿ ಆದರ್ಶ ಶಿಕ್ಷಕರಾಗಿರುವ ಇವರಿಗೆ ಕರೋನಾ ಸೋಂಕು ಕಾಣಿಸಿಕೊಂಡು ನಂತರ ಆಸ್ಪತ್ರೆಗೆ ದಾಖಲಾಗಿದ್ದರು.

ಡಿ ಎಸ್ ರಾಠೋಡ ಹಿಟ್ನಳ್ಳಿ ಕಿರಿಯ ಪ್ರಾಥಮಿಕ ಶಾಲೆ ಇವರು ಕೂಡಾ ಕೋವಿಡ್ ಸೋಂಕಿನಿಂದಾಗಿ ನಿಧನರಾಗಿದ್ದಾರೆ. ಇವರೊಂದಿಗೆ ಸಿಆರ್ ಪಿ ಯಾಗಿದ್ದ ಪಿ ವೈ ಧನ್ನೂರ ಇವರು ಕೂಡಾ ಇಂದು ಕೋವಿಡ್ ನಿಂದಾಗಿ ನಿಧನರಾಗಿದ್ದು ವಿಜಯಪುರ ಜೆಲ್ಲೆಯಲ್ಲಿಯೇ ಇಂದು ಅತಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ನಿಂದಾಗಿ ಮೃತರಾಗಿದ್ದಾರೆ.

ಇನ್ನೂ ಮೃತರಾದ ಶಿಕ್ಷಕರಿಗೆ ಶಿಕ್ಷಕರ ಸಂಘಟನೆಯ ಮುಖಂಡರಾದ ಹನುಮಂತ ಬೂದಿಹಾಳ,ಸುರೇಶ ಚಡಿಚಾಳ,ಬಿಟಿ ಗೌಡರ ಜಗದೀಶ್ ಬೊಸೂರ ಎ ಬಿ ದಡಕೆ,ಚಂದ್ರಶೇಖರ ನುಗ್ಗಲಿ ಎಸ್ ಎನ್ ಪಡಶೆಟ್ಟಿ ಆರ್ ಎಮ್ ಮೇತ್ರಿ,ಎಮ್ ಎಸ್ ಟಕ್ಕಳಕಿ,ಸುನೀಲ ಬಿರಾದಾರ ಪಾಟೀಲ,ಸಂತೋಷ ಕುಲಕರ್ಣಿ, ಅಶೋಕ ಭಜಂತ್ರಿ,ಶ್ರೀಮತಿ ಎಮ್ ಎಸ್ ಸಾಸನೂ ರ,ಶ್ರೀಮತಿ ಡಿ ಎ ಕಬಾಡಿ,ಆನಂದ ಬೂಸನೂ ರು,ಎಸ್ ಎಸ್ ಪಾಟೀಲ(ಚಡಚಣ) ಎಸ್ ಎಸ್ ಸಣ್ಣಗಿ,ಎಸ್ ಎಸ್ ಇಂಡಿ,ಬಸವರಾಜ ಬೇನೂರ,ಜಿ ಎಸ್ ಬೇನೂರ,ಶಿವಾನಂದ ಮಂಗನ್ನವರ, ಶಂಕರ ಖಂಡೇಕರ,ಹೆಚ್ ಎನ್ ಖನ್ನೂರ, ಸಂಗು ಬಿರಾ ದಾರ,ಶ್ರೀಶೈಲ ಸೊಲ್ಲಾಪೂರ,ರವಿಂದ್ರ ಹೂಗಾರ, ಹೆಚ್ ಎಮ್ ಚಿತ್ತರಗಿ, ಗಬ್ಬೂರ, ಸಜ್ಜನ, ಬೀರಗೊಂ ಡ,ದಡೇದ,ಗೀತಪ್ಪಗೋಳ,ವಸಿಂ ಚತ್ತರಕಿ,ಎಸ್ ಎಮ್ ಜಂಗಮಶೆಟ್ಟಿ,ಪಿ ಬಿ ದೋರನಹಳ್ಳಿ,ಆರ್ ಎಮ್ ಪಾಟೀಲ,ಸಚಿನ ನದಾಫ್,ಜಿ ಎಸ್ ಅಕ್ಕಿ, ವೀರಭದ್ರಪ್ಪ,ಆನಂದ ಜಾಧವ, ಎಸ್ ಆರ್ ಪಾಟೀಲ(ಇಂಡಿ) ಎಸ್ ಡಿ ಪಾಟೀಲ,ರಮೇಶ ಮುಂಜೇನಿ,ಆನಂದ ಕೆಂಬಾವಿ,ರಾಯಪ್ಪ ,ಶ್ರೀಮತಿ ಜಯಶ್ರೀ ಬೆಣ್ಣಿ,ಎಮ್ ಎಸ್ ಚಪ್ಪರಬಂದ,ಅನಿಲ ಕೋತ್ಯಾಳ,ರಂಗನಾಥ ದೇಸಾಯಿ,ವಾಯ್ ಆರ್ ವೀರ,ಸೇರಿದಂತೆ ಹಲವರು ಜಿಲ್ಲೆಯಲ್ಲಿ ಇಂದು ನಿಧನರಾದ ಶಿಕ್ಷಕರಿಗೆ ಭಾವಪೂರ್ಣ ಸಂತಾಪವನ್ನು ಸೂಚಿಸಿ ಕುಟುಂಬದವರಿಗೆ ನೋವಿನ ಶಕ್ತಿಯನ್ನು ತಡೆದುಕೊಳ್ಳುವ ಶಕ್ತಿಯನ್ನು ಕೊಡಲಿ ಹಾಗೇ ಇವರ ನ್ನು ಕರೋನಾ ವಾರಿಯರ್ಸ್ ಅಂತಾ ಘೋಷಣೆ ಮಾಡಿ ಸೂಕ್ತವಾದ ಪರಿಹಾರವನ್ನು ಘೋಷಣೆ ಮಾಡಿ ನೀಡುವಂತೆ ಒತ್ತಾಯ ಮಾಡಿದ್ದಾರೆ.