ಬೆಂಗಳೂರು –
ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಲು ಅಭಿಯಾನವನ್ನು ಆರಂಭ ಮಾಡಲಾಗಿದೆ .ರಾಜ್ಯ ಚುನಾವಣಾ ಆಯೋಗ ಈ ಒಂದು ವಿಶೇಷ ಅಭಿಯಾನವನ್ನು ಆರಂಭ ಮಾಡಿದೆ.ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ- 2021’ರ ಅಂಗವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಚುನಾವಣಾ ಆಯೋಗ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ.
ನವಂಬರ್ 29, ಡಿಸೆಂಬರ್ 6 ಮತ್ತು ಡಿಸೆಂಬರ್ 13 ರಂದು ರಾಜ್ಯವ್ಯಾಪಿ ಅಭಿಯಾನ ನಡೆಯಲಿದೆ. ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಪ್ರತಿ ಮತಗಟ್ಟೆ ಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ಅಥವಾ ವಿಳಾಸ ಬದಲಾವಣೆ, ತಿದ್ದುಪಡಿಗಳಿಗೆ ಸಂಬಂಧಿಸಿ ಅರ್ಜಿ ಗಳನ್ನು ಸ್ವೀಕರಿಸಲಾಗುತ್ತದೆ.
2021ರ ಜನೇವರಿ 1ಕ್ಕೆ 18 ವರ್ಷ ತುಂಬುವ ಮತ್ತು ಅದಕ್ಕೆ ಮೇಲ್ಪಟ್ಟ ಎಲ್ಲ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಗಳನ್ನು ನೋಂದಣಿ ಮಾಡಿಸಿಕೊಳ್ಳಬಹುದು. ಇದರ ಜೊತೆಗೆ ಹೆಸರು, ವಿಳಾಸ ಇನ್ನಿತರ ತಿದ್ದುಪಡಿಗಳಿದ್ದರೆ ನಿಗದಿತ ನಮೂನೆಗಳಲ್ಲಿ ಅರ್ಜಿ ಸಲ್ಲಿಸಬಹುದು. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವುದಕ್ಕೂ ಅವಕಾಶ ಇದೆ.
ಅಭಿಯಾನದ ಸಂಬಂಧ ಈಗಾಗಲೇ ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ ಮತಗಟ್ಟೆ ಅಧಿಕಾರಿಯ ವ್ಯಾಪ್ತಿಗೆ 300 ಮನೆಗಳು ಬರುತ್ತವೆ. ನಿಗದಿತ ದಿನಾಂಕಗಳ ವಿಶೇಷ ಅಭಿಯಾನದ ಹೊರತಾಗಿ ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರದೇಶದ ಮನೆ ಮನೆ ಭೇಟಿ ಸಹ ನೀಡಲಿದ್ದಾರೆ. ಮತಗಟ್ಟೆ ಅಧಿಕಾರಿಗಳು ಮನೆಗೆ ಬರುತ್ತಾರೆ ಎಂದು ಕಾದು ಕುಳಿತು ಕೊಳ್ಳದೆ ಮತಗಟ್ಟೆ ಕಚೇರಿಗೆ ತೆರಳಿ ಹೆಸರು ನೋಂದಣಿ ಮತ್ತು ಇನ್ನಿತರ ಬದಲಾವಣೆ ಮಾಡಿಕೊಳ್ಳುವಂತೆ ಆಯೋಗದ ಅಧಿಕಾರಿಗಳು ಮನವಿ ಮಾಡಿದ್ದಾರೆ.