ಮೂರು ವರ್ಷದ ಸಂಬಳವನ್ನು ಮರಳಿ ನೀಡಿದ ಪ್ರಾಧ್ಯಾಪಕ ದೇಶಕ್ಕೆ ಮಾದರಿಯಾಯಿತು ಈ ಪ್ರಾಧ್ಯಾಪಕರ ಕಾರ್ಯ…..

Suddi Sante Desk

ಮುಜಾಫರ್‌ಪುರ (ಬಿಹಾರ)

ಎಲ್ಲರೂ ಮಾಡುವುದು ಹೊಟ್ಟೆಗಾಗಿ ಎನ್ನುತ್ತಾರೆ.ಪುಕ್ಕಟೆ ಹಣ ಸಿಗುತ್ತದೆ ಎಂದರೆ ಬಿಡಲು ತಯಾರಿಲ್ಲದ ಈ ಕಾಲ ದಲ್ಲಿ ತಾವು ಜೀವನಪೂರ್ತಿ ದುಡಿದ ಹಣವನ್ನು ಹಿಂದಿರು ಗಿಸುವುದು ಎಂದರೆ ನಂಬಲು ಅಸಾಧ್ಯವಾದ ಮಾತು ಅಲ್ಲವೆ.ಇಲ್ಲೊಬ್ಬರು ಕಾಲೇಜಿನ ಪ್ರಾಧ್ಯಾಪಕರೊಬ್ಬರು ತಾವು ದುಡಿದಿರುವ ಸಂಪೂರ್ಣ ಹಣವನ್ನು ತಾವು ಕಲಿಸು ತ್ತಿರುವ ಕಾಲೇಜಿಗೆ ಹಿಂದಿರುಗಿಸಿದ್ದಾರೆ.33 ತಿಂಗಳು ಅಂದರೆ ಸುಮಾರು ಮೂರು ವರ್ಷ ದುಡಿದಿರುವ ಇವರು, ತಮ್ಮಅಷ್ಟೂ ಸಂಬಳವಾಗಿರುವ 24 ಲಕ್ಷ ರೂಪಾಯಿ ಗಳನ್ನು ಹಿಂತಿರುಗಿಸಿದ್ದಾರೆ.2019ರ ಸೆಪ್ಟೆಂಬರ್ ತಿಂಗಳಿ ನಲ್ಲಿ ಕೆಲಸಕ್ಕೆ ಸೇರಿದಾಗಿನಿಂದ ಗಳಿಸಿರುವ ಒಟ್ಟು ಹಣ ವನ್ನು ವಾಪಸ್ ಕೊಟ್ಟಿದ್ದಾರೆ.

ಇಂಥದ್ದೊಂದು ನಿರ್ಧಾರಕ್ಕೆ ಬರಲು ಕಾರಣ ಆತ್ಮಸಾಕ್ಷಿ ಎನ್ನುತ್ತಾರೆ 33 ವರ್ಷದ ಲಾಲನ್ ಕುಮಾರ್.ಇಲ್ಲಿಯ ನಿತೀಶ್ವರ ಕಾಲೇಜಿನಲ್ಲಿ ಹಿಂದಿ ವಿಷಯದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಆತ್ಮಸಾಕ್ಷಿಗೂ ಸಂಬಳ ವಾಪಸ್ ಮಾಡುವುದಕ್ಕೂ ಏನಪ್ಪಾ ಸಂಬಂಧ ಎಂದರೆ ಇವರ ಕ್ಲಾಸ್ ಗೆ 33 ತಿಂಗಳಲ್ಲಿ ಬೆರಳೆಣಿಕೆ ವಿದ್ಯಾರ್ಥಿಗಳು ಹಾಜರು ಆಗಿರುವುದಂತೆ ಆನ್ ಲೈನ್ ಕ್ಲಾಸ್ ಇದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೇ ಬಾರದಿದ್ದಾಗ ವೇತನವನ್ನು ಸ್ವೀಕರಿಸಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಅದಕ್ಕಾ ಗಿಯೇ ಸಂಬಳವನ್ನು ವಾಪಸ್ ನೀಡುತ್ತಿರುವುದಾಗಿ ಲಾಲನ್ ಕುಮಾರ್ ಹೇಳಿದ್ದಾರೆ.

ಇಲ್ಲಿಯ ಬಿಆರ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯ ದಲ್ಲಿ (ಬ್ರಾಬು) ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸು ತ್ತಿರುವ ಲಾಲನ್ ಅವರು ರಿಜಿಸ್ಟ್ರಾರ್ ಅವರಿಗೆ 23,82, 228 ರೂ.ಗಳ ಚೆಕ್ ನೀಡಿದರು.ಬೋಧನೆ ಮಾಡದೆ ಸಂಬಳ ತೆಗೆದುಕೊಳ್ಳಲು ನನ್ನ ಆತ್ಮಸಾಕ್ಷಿಯು ಒಪ್ಪತ್ತಿಲ್ಲ ಲಲನ್ ಕುಮಾರ್ ಅವರಿಗೆ ಇದು ಮೊದಲ ಉದ್ಯೋಗ ವಾಗಿದೆ. ನಿತೀಶ್ವರ ಕಾಲೇಜಿನಲ್ಲಿ ಸುಮಾರು 3,000 ವಿದ್ಯಾರ್ಥಿಗಳಿದ್ದು ಅವರಲ್ಲಿ ಸರಿಸುಮಾರು 1,100 ಪದವಿ ಪೂರ್ವ ವಿದ್ಯಾರ್ಥಿಗಳು ಹಿಂದಿಯನ್ನು ಕಲಿಯಬೇಕಾಗಿದೆ. ಈ ವಿಷಯಕ್ಕೆ ಅತಿಥಿ ಶಿಕ್ಷಕರನ್ನು ಬಿಟ್ಟರೆ ಕುಮಾರ್ ಮಾತ್ರ ಕಾಲೇಜಿನಲ್ಲಿ ನಿಯಮಿತ ಹಿಂದಿ ಶಿಕ್ಷಕರಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.