ಧಾರವಾಡ ದಲ್ಲಿ ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣಾ ಕಾರ್ಯಕ್ರಮ – ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಹಲವರು ಉಪಸ್ಥಿತಿ…..

Suddi Sante Desk

ಧಾರವಾಡ –

ಸ್ವಾಮಿ ವಿವೇಕಾನಂದರ ಪುಣ್ಯ ಸ್ಮರಣೆಯನ್ನು ಧಾರವಾಡ ದಲ್ಲೂ ಮಾಡಲಾಯಿತು.ಧಾರವಾಡದ ವಿವೇಕಾನಂದ ವೃತ್ತದಲ್ಲಿ ಭಾರತದ ಕೋಟ್ಯಾಂತರ ಜನ ಯುವಕರಿಗೆ ಇಂದಿಗೂ ಸ್ಪೂರ್ತಿಯಾದ, ಆಧುನಿಕ ಯುಗದ ಶ್ರೇಷ್ಠ ಸಂತರು ಮತ್ತು ಚಿಂತಕರು ಆದ ಸ್ವಾಮಿ ವಿವೇಕಾನಂದ ಅವರ ಪುಣ್ಯಸ್ಮರಣೆಯಂದು ಅವರ ವಿಗ್ರಹಕ್ಕೆ ಮಾಲಾ ರ್ಪಣೆ ಮಾಡುವ ಮೂಲಕ ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಭಕ್ತಿಪೂರ್ವಕ ನಮನಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಉಪ ಮಹಾಪೌರರಾದ ಶ್ರೀಮತಿ ಉಮಾ ಮುಕುಂದ,ಆಯುಕ್ತರಾದ ಗೋಪಾಲಕೃಷ್ಣ ಸಹಾಯಕ ಆಯುಕ್ತರಾದ ಆರ್.ಎಂ.ಕುಲಕರ್ಣಿ ಪಾಲಿಕೆ ಯ ಸದಸ್ಯರಾದ ಶಂಕರ ಶೆಳಕೆ ಬಿಜೆಪಿ ನಗರಾಧ್ಯಕ್ಷರಾದ ಸುನಿಲ ಮೊರೆ,ಶ್ರೀನಿವಾಸ ಕೋಟ್ಯನ್ ಹಾಗೂ ಭಾರತೀ ಯ ಜನತಾ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕ ರ್ತರು ಕೂಡಾ ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.