ಚಿಂತಾಮಣಿ –
ಫ್ರಂಟ್ ಲೈನ್ ನಲ್ಲಿ ಸಧ್ಯ ಜೀವವನ್ನು ಲೆಕ್ಕಿಸದೇ ಕೆಲಸವನ್ನು ಮಾಡುತ್ತಿರುವ ಶಿಕ್ಷಕರನ್ನು ಕರೋನಾ ವಾರಿಯರ್ಸ್ ಅಂತಾ ಘೋಷಣೆ ಮಾಡಿ ಅವರಿಗೆ ಸೂಕ್ತವಾದ ಸೌಲಭ್ಯಗಳನ್ನು ನೀಡವಂತೆ ಚಿಕ್ಕ ಬಳ್ಳಾಪೂರ ಜಿಲ್ಲೆಯ ಸರ್ಕಾರಿ ಗ್ರಾಮೀಣ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಆರ್ ನಾರಾಯಣಸ್ವಾಮಿ ಚಿಂತಾಮಣಿ ಒತ್ತಾಯವನ್ನು ಮಾಡಿದ್ದಾರೆ.
ಈ ಕುರಿತಂತೆ ಸುದ್ದಿ ಸಂತೆ ಯ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಕೋವಿಡ್ ನಿಯಂತ್ರಣಕ್ಕಾಗಿ ಬೇರೆ ಬೇರೆ ಇಲಾಖೆಯೊಂದಿಗೆ ನಾವು ಕೂಡಾ ಕೆಲ ಸವನ್ನು ಮಾಡಲು ಸಿದ್ದವಾಗಿದ್ದು ಸಧ್ಯ ಮಾಡುತ್ತಿ ದ್ದೇವೆ.ಜೀವವನ್ನು ಲೆಕ್ಕಿಸದೇ ತ್ಯಾಗ ಮಾಡಿ ಕರ್ತವ್ಯ ಮಾಡುತ್ತಿರುವ ರಾಜ್ಯದಲ್ಲಿನ ಶಿಕ್ಷಕರನ್ನು ಕೂಡಲೇ ಕರೋನಾ ವಾರಿಯರ್ಸ್ ಅಂತಾ ಘೋಷಣೆ ಮಾಡ ಬೇಕು ಹಾಗೇ ನಂತರ ಅವರಿಗೆ ಇತರೆ ವಾರಿಯರ್ಸ್ ಗಳಿಗೆ ನೀಡುವ ಸೌಲಭ್ಯಗಳನ್ನು ನೀಡುವಂತೆ ಒತ್ತಾ ಯವನ್ನು ಮಾಡಿದರು.ಈ ಕುರಿತಂತೆ ಕೂಡಲೇ ಶಿಕ್ಷಣ ಸಚಿವರು ಇಲಾಖೆಗೆ ಮತ್ತು ರಾಜ್ಯ ಸರ್ಕಾರಕ್ಕೆ ಆದೇಶವನ್ನು ಮಾಡುವಂತೆ ನಾರಾಯಣಸ್ವಾಮಿ ಆಗ್ರಹಿಸಿದರು. ಈಗಾಗಲೇ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಮೃತರಾಗಿದ್ದು ವಿಷಾದದ ಸಂಗತಿಯಾಗಿದ್ದು ನಮ್ಮ ವೃತ್ತಿ ಬಾಂಧವರನ್ನು ಕಳೆ ದುಕೊಂಡು ನಾವುಗಳು ತುಂಬಾ ದುಖಃದಲ್ಲಿದ್ದೇವೆ ಎಂದರು.ಒಟ್ಟಾರೆ ನಾವು ಕೂಡಾ ಕೋವಿಡ್ ನಿಯಂ ತ್ರಣ ವಿಚಾರದಲ್ಲಿ ಕರ್ತವ್ಯವನ್ನು ಮಾಡಲು ಸಿದ್ದವಾ ಗಿದ್ದು ನಮ್ಮನ್ನು ಎಲ್ಲರ ಹಾಗೇ ಕರೋನಾ ವಾರಿಯ ರ್ಸ್ ಅಂತಾ ಘೋಷಣೆ ಮಾಡಲಿ ಸೌಲಭ್ಯಗಳನ್ನು ಕೊಡಲಿ ಕುರಿತಂತೆ ಆದೇಶವನ್ನು ಹೊರಡಿಸಲಿ ಎಂದು ನಾರಾಯಣಸ್ವಾಮಿ ಸರ್ಕಾರವನ್ನು ಆಗ್ರಹಿಸಿ ದರು. ಅಲ್ಲದೇ ನಮ್ಮನ್ನು ನೀವು ಕೆಲಸ ಮೊಡೊ ದನ್ನು ಗಮನಿಸಿದ್ದಿರಿ ಸಧ್ಯ 3ಲಕ್ಷ ಶಿಕ್ಷಕರು ಕೆಲಸ ವನ್ನು ಮಾಡುತ್ತಿದ್ದು ಹೀಗಾಗಿ ನಮ್ಮನ್ನು ಕರೋನಾ ವಾರಿಯರ್ಸ್ ಅಂತಾ ಪರಿಗಣನೆಗೆ ಮಾಡಿಲ್ಲ ಹಾಗೇ ನಾದರೆ ಯಾರಾದರೂ ಮೃತರಾದರೆ ಅವರಿಗೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಸಧ್ಯ ಕೋವಿಡ್ ನೇ ಅಲೆಯಲ್ಲಿ 500 ಕ್ಕೂ ಹೆಚ್ಚು ಶಿಕ್ಷಕರು ನಿಧನರಾಗಿದ್ದು ವಿಷಾದದ ಸಂಗತಿ.ಇನ್ನೂ ಪ್ರಮುಖ ವಾಗಿ ಬೆಂಗಳೂರಿನಲ್ಲಿರುವ ಶಿಕ್ಷಕರ ಸದನವನ್ನು ಕೋವಿಡ್ ಕೇರ್ ಮಾಡುವಂತೆ ಒತ್ತಾಯವನ್ನು ಮಾಡಿದರು.ಇನ್ನೂ ಈ ಒಂದು ಬೇಡಿಕೆಗಳಿಗೆ ಹುಬ್ಬಳ್ಳಿ ಯ ರಾಜ್ಯ ಘಟಕದ ಎಲ್ಲಾ ಪದಾಧಿಕಾರಿ ಗಳು ಎಲ್ಲಾ ಜಿಲ್ಲಾ ಅಧ್ಯಕ್ಷರು ಗಳು ಧ್ವನಿ ಸೇರಿಸಿ ಒತ್ತಾಯವನ್ನು ಮಾಡಿದ್ದಾರೆ.