ಬೆಂಗಳೂರು –
ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿ ಮತ್ತೆ ಹತ್ತು ಜನ ಶಿಕ್ಷಕರು ಮೃತರಾಗಿದ್ದಾರೆ.ಹೌದು ಕೋವಿಡ್ ಕರ್ತವ್ಯ ಮಾಡುತ್ತಿರುವ ಮತ್ತು ಚುನಾವಣೆಯ ನಂತರ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಾಗಿರುವ ಶಿಕ್ಷಕರು ಚಿಕಿತ್ಸೆ ಫಲಿಸದೇ ರಾಜ್ಯ ದ ಹಲವೆಡೆ ಇಂದೂ ಕೂಡಾ ನಿಧನರಾಗಿದ್ದಾರೆ.
ಹೌದು ಬಾಗಲಕೋಟ ಜಿಲ್ಲೆಯ ಬದಾಮಿ ತಾಲ್ಲೂಕಿ ನಲ್ಲಿ ವಿನಾಯಕ ಕೇಶಪ್ಪ ಭಾವಿಕಟ್ಟಿ ವಿಜ್ಞಾನ ಶಿಕ್ಷಕ ರು ಮುರಾರ್ಜಿ ವಸತಿ ಶಾಲೆ ಚಿಕ್ಕಮುಚ್ಚಳಗುಡ್ಡ ಇವರು ಕೋವಿಡ್ ನಿಂದಾಗಿ ಮೃತರಾಗಿದ್ದಾರೆ. ಇವ ರ ಸಹೋದರ S.K.ಭಾವಿಕಟ್ಟಿ ಶಿಕ್ಷಕರು ಹಾಗೂ ಮೃತರ ಪತ್ನಿ ಕೂಡಾ ಶ್ರೀಮತಿ ಅಂಬಿಕಾ ಭಾವಿಕಟ್ಟಿ ಶಿಕ್ಷಕಿ ಆಗಿದ್ದಾರೆ.ಮೃತರಿಗೆ ಬದಾಮಿ ತಾಲ್ಲೂಕಿನ ಸಮಸ್ತ ಶಿಕ್ಷಕ ಬಳದವರು ಸಂತಾಪವನ್ನು ಸೂಚಿಸಿ ದ್ದಾರೆ.
ವಿಠ್ಠಲ ಮುಗದಿ ವಿಜಯಪುರ ಜಿಲ್ಲೆಯ ಚಡಚಣದ ಶಿಗನಾಪೂರ ಎಮ್ ವಿ ಗ್ರಾಮದಲ್ಲಿನ ಸರ್ಕಾರಿ ಕಿರಿ ಯ ಪ್ರಾಥಮಿಕ ಶಾಲೆಯ ಪ್ರಧಾನ ಶಿಕ್ಷಕರಾಗಿರುವ ಇವರಿಗೆ ಸೋಂಕು ಕಾಣಿಸಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಿಸದೇ ಇವರು ಇದು ನಿಧನರಾಗಿದ್ದಾರೆ.
ಮಂಜುನಾಥ್ ಕನಕಪುರ ತಾಲ್ಲೂಕಿನ ಶಿವನಹಳ್ಳಿ ಗ್ರಾಮದ ಹನುಮಹಳ್ಳಿಯ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.ಚಿಕ್ಕ ವಯಸ್ಸಿ ನಲ್ಲಿಯೇ ಕೋವಿಡ್ ಗೆ ಇವರು ನಿಧನರಾಗಿದ್ದಾರೆ. ಪತ್ನಿ ಚಿಕ್ಕ ಮಗು ಇದೆ ತುಮಕೂರಿನ ಸಿದ್ದಾರ್ಥ್ ಆಸ್ಪತ್ರೆಯಲ್ಲಿ ಚಿಕತ್ಸೆಯನ್ನು ಪಡೆಯುತ್ತಿದ್ದರು.
ಆನಂದ್ ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಪ್ಪೇನಹಳ್ಳಿ ಶಾಲೆಯ ಸಹಶಿಕ್ಷಕರಾದ ಇವರು ಕೂಡಾ ಕೋವಿಡ್ ಗೆ ಬಲಿಯಾಗಿದ್ದಾರೆ.ಸೋಂಕು ಕಾಣಿಸಿಕೊಂಡು ನಂತರ ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಿಸದೇ ಇವರು ಆಸ್ಪತ್ರೆಯಲ್ಲಿ ಮೃತರಾಗದ್ದಾರೆ.
ಆನಂದ್ ರವರ ಅಕಾಲಿಕ ಮರಣದಿಂದಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ತಿಪ್ಪೇನಹಳ್ಳಿ ಶಾಲೆಯ ಮಕ್ಕಳು ಶಿಕ್ಷಕರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಶಿವರಾಜು ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ಡಣಾಯಕನಪುರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಇವರು ಕೂಡಾ ಕೋವಿಡ್ ನಿಂದಾಗಿ ಮೃತರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.ಇವರ ನಿಧನಕ್ಕೆ ಟಿನರಸೀರಪುರ ತಾಲ್ಲೂಕಿನ ಸಮಸ್ತ ಶಿಕ್ಷಕರು ಸಂತಾಪ ಸೂಚಿಸಿದ್ದಾರೆ.
ಚಿಂತಾಮಣಿಯ ಕಾಲೇಜು ಉಪನ್ಯಾಸಕ ಡಾ ರಘು ಅವರು ಕೂಡಾ ಕೋವಿಡ್ ನಿಂದಾಗಿ ಮೃತರಾಗಿ ದ್ದಾರೆ.ಚಿಕ್ಕ ವಯಸ್ಸಿನ ಇವರು ಸೋಂಕು ಕಾಣಿಸಿ ಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.ಚಿಕತ್ಸೆ ಫಲಿಸ ದೇ ಇಂದು ನಿಧನರಾಗಿದ್ದಾರೆ.ಇನ್ನೂ ಇವರ ನಿಧನ ಕ್ಕೆ ಚಿಂತಾಮಣಿಯ ಸಮಸ್ತ ಉಪನ್ಯಾಸಕರು ಮತ್ತು ಶಿಕ್ಷಕರು ಭಾವಪೂರ್ಣ ನಮನವನ್ನು ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ.
ಶಿವಾನಂದ ರಾಯಚೂರಿನ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯ ಸಹ ಶಿಕ್ಷಕರು ಇವರು ಕೂಡಾ ಮಹಾಮಾರಿಗೆ ಬಲಿಯಾಗಿದ್ದಾರೆ.ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೇಡರ ಕಾರ್ಲಕುಂಟಿ ಇವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು ನಂತರ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ನಿಧನಕ್ಕೆ ಶಾಲೆಯ ಸಮಸ್ತ ಶಿಕ್ಷಕಬಳಗದವರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.
ಪಂಚಾಕ್ಷರಯ್ಯ ರಾಯಚೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಸ್ಕಿ ತಾಲ್ಲೂಕಿನ ತಾಂಡಾ ಶಾಲೆಯ ಶಿಕ್ಷಕರಾಗಿರುವ ಇವರು ಕೂಡಾ ಸೋಂಕು ಕಾಣಸಿಕೊಂಡು ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಾಗಿ ದ್ದರು ಚಿಕಿತ್ಸೆ ಫಲಿಸದೇ ಇಂದು ಇವರು ನಿಧನರಾಗಿ ದ್ದಾರೆ.ಇನ್ನೂ ಮೃತರಾದ ಇವರಿಗೆ ಶಾಲೆಯ ಮತ್ತು ಮಸ್ಕಿ ತಾಲ್ಲೂಕಿನ ಸಮಸ್ತ ಶಿಕ್ಷಕ ಬಳದವರು ಸಂತಾಪವನ್ನು ಸೂಚಿಸಿದ್ದಾರೆ.
ಪವಾಡೆಪ್ಪ, ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋ ಳ, ಹನುಮಂತಪ್ಪ ಬೂದಿಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜು ಳಾ, ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ, ನಾಗರಾಜ ಕಾಮನಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾ ಯಿ, ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖರ್ ತಿಗಡಿ, ಎಂ ಐ ಮುನವ ಳ್ಳಿ, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಫನೀಂ ದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂ ರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊ ಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ