ಸರಕಾರಿ ನೌಕರರ ಕರ್ತವ್ಯಕ್ಕೆ ತೊಂದರೆ ಆದರೆ ಸಹಿಸಲಾರೆವು ಜಂಟಿ ಸಮಾಲೋಚನ ಸಭೆಯಲ್ಲಿ ನೌಕರರ ಅಹವಾಲು ಕುರಿತು ಗಂಭೀರವಾಗಿ ಚರ್ಚೆ ಮಾಡಿ ಸಮಸ್ಯೆ ಆಲಿಸಿದ ಅಧ್ಯಕ್ಷ ಎಸ್ ಎಫ್ ಸಿದ್ದನಗೌಡರ…..

Suddi Sante Desk

ಧಾರವಾಡ –

ಇತ್ತಿಚಿನ ದಿನಗಳಲ್ಲಿ ರಾಜ್ಯ ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವ,ಹಲ್ಲೆ,ದಬ್ಬಾಳಿಕೆ ಮಾಡುತ್ತಿರುವ ಘಟನೆ ಗಳು ರಾಜ್ಯದಲ್ಲಿ ನಡೆಯುತ್ತಿದ್ದು ಅವು ಧಾರವಾಡ ಜಿಲ್ಲೆ ಯಲ್ಲಿಯೂ ಮರುಕಳಿಸುತ್ತಿವೆ.ಇಂತಹ ಘಟನೆಗಳನ್ನು‌ ನೌಕರ ಸಂಘ ಸಹಿಸುವುದಿಲ್ಲ ಗಂಭೀರವಾದ ಪ್ರತಿಕ್ರಿಯೆ ತೋರಿಸಲಾಗುತ್ತದೆ ಎಂದು ಸರಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಹೇಳಿದರು.

ಜಿಲ್ಲಾ ಸರಕಾರಿ ನೌಕರ ಸಂಘದ ಸಭಾಭವನದಲ್ಲಿ ಜರುಗಿದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರಕಾರಿ ನೌಕರರ ಹಿತಾಸಕ್ತಿ ಕಾಪಡಲು ಸಂಘ ಬದ್ದವಾಗಿದೆ.ಅನಾಮಧೇಯ, ಅನಧಿ ಕೃತ ವ್ಯಕ್ತಿಗಳು ಸರಕಾರಿ ಕಚೇರಿಗಳಿಗೆ ಬಂದು ನೌಕರರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಮತ್ತು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ನೌಕರರಿಂದ ಅಹವಾಲು ಬಂದಿವೆ. ಸಂಘವು ಈ ಕುರಿತು ಗಂಭೀರವಾಗಿ ಚರ್ಚಿಸಿ, ಪ್ರತಿಭಟಿಸಲು ನಿರ್ಧರಿಸಿದೆ. ಸಂಭಂದಿಸಿದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ನೌಕರರ ಅಹ ವಾಲುಗಳಿಗೆ ತಕ್ಷಣ ಸ್ಪಂದಿಸಬೇಕು ಎಂದರು.

ಎಲ್ಲ ಸರಕಾರಿ ನೌಕರ ಸಮಸ್ಯೆ, ಅಹವಾಲುಗಳನ್ನು ಆಲಿಸಲು ಸರಕಾರವು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನೌಕರ ಸಂಘದ ಪ್ರತಿನಿಧಿಗಳು ಜಿಲ್ಲಾ ಮಟ್ಟದ ಅಧಿಕಾರಿ ಗಳ ಜಂಟಿ ಸಮಿತಿ ರಚಿಸಿ ಆದೇಶಿಸಿದೆ.

ಬರುವ ಜುಲೈ 18 ರಂದು ಜಿಲ್ಲಾ ಜಂಟಿ ಸಮಾಲೋಚನೆ ಸಮಿತಿ ಸಭೆ ನಿಗದಿಯಾಗಿದೆ.ಜಿಲ್ಲೆಯ ನೌಕರರು ತಮ್ಮ ದೂರುಗಳಿದ್ದಲ್ಲಿ ಜಿಲ್ಲಾ ಸಂಘದ ಕಚೇರಿಗೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.ಇಲಾಖೆ ಮಟ್ಟದ ಸಮಸ್ಯೆಗಳನ್ನು ಸಲ್ಲಿಸಬೇಕು.ಮತ್ತು ಎಷ್ಟೊ ಸಂದರ್ಭ ದಲ್ಲಿ ನೌಕರರು ಕಚೇರಿ ಕೇಲಸದಲ್ಲಿ ಅಧಿಕಾರಿಗಳಿಂದ ಕಿರುಕುಳ ಅನುಭವಿಸುತ್ತಿರುತ್ತಾರೆ.ಅಂತಹ ವಯಕ್ತಿಕ ಸಮಸ್ಯೆಗಳಿದ್ದಲ್ಲಿ ನೌಕರರು ಸಂಘದ ಕಚೇರಿಗೆ ನೇರವಾಗಿ ಸಲ್ಲಿಸಬೇಕು.ಸಂಘದ ಅಧ್ಯಕ್ಷರ,ಪ್ರಧಾನ ಕಾರ್ಯದರ್ಶಿ ಗಳೊಂದಿಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳ ಬೇಕು.ಈ ಕುರಿತು ಜಂಟಿ ಸಭೆಯಲ್ಲಿ ಚರ್ಚಿಸಲಾಗುವುದು. ಸರಕಾರಿ ನೌಕರರು ಯಾವುದೇ ವ್ಯಕ್ತಿ ಅಧಿಕಾರಿಗಳಿಗೆ ಹೆದರದೆ ಮುಕ್ತವಾಗಿ ತಮ್ಮ ಅನಿಸಿಕೆ ಸಮಸ್ಯೆಗಳನ್ನು ಸಂಘದ ಕಚೇರಿಗೆ ಜುಲೈ 15 ರೊಳಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

ನೌಕರ ಸಂಘದ ಪದಾಧಿಕಾರಿಗಳು ತಮ್ಮ ಇಲಾಖೆ ಸಿಬ್ಬಂದಿಗಳ ನೋವು, ಸಮಸ್ಯೆಗಳಿಗೆ ಸ್ಪಂದಿಸಬೇಕು. ಜಿಲ್ಲಾ ಘಟಕ ನೌಕರ ಬೆಂಬಲಕ್ಕಿದೆ ಎಂದು ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ತಿಳಿಸಿದರು.

ಎಸ್.ಎಸ್.ಎಲ್.ಸಿ.ಮತ್ತು ದ್ವೀತಿಯ ಪಿಯುಸಿ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಗಳಿಸಿದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡಲು ಸಿದ್ದತೆ ಮಾಡಿಕೊಳ್ಳ ಲಾಗುತ್ತಿದೆ.ಅರ್ಹರು ಅರ್ಜಿ ಸಲ್ಲಿಸಬೇಕು.ಮತ್ತು ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ನೌಕರ ಸಂಘದ ಜಿಲ್ಲಾ ಸದಸ್ಯರ ಸರ್ವ ಸಾಧರಣ ಸಭೆ ಸಹ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಸರಕಾರಿ ನೌಕರರಿಗೆ ಜಾರಿಯಾಗಿರುವ ಆರೋಗ್ಯ ಸಂಜೀವಿನಿ ಯೋಜನೆ, ಎನ್.ಪಿ.ಎಸ್ ಪಿಂಚಣಿ ಯೋಜನೆ, ಸರಕಾರಿ ಕಾರ್ಯಕ್ರಮಗಳಿಗೆ ಸಂಘದ ಪದಾಧಿಕಾರಿಗಳ ನಿಯೋಜನೆ ಕುರಿತು ಗಂಭೀರ ಚರ್ಚೆ ಮಾಡಲಾಯಿತು.

ಸಂಘದ ಪದಾಧಿಕಾರಿಗಳಾದ ಡಾ.ಸುರೇಶ ಹಿರೇಮಠ, ಕೆ.ಶ್ರೀಧರ, ಮಲ್ಲಿಕಾರ್ಜುನ ಸೊಲಗಿ, ಫಿರೋಜ ಎಫ್. ಗುಡೆನಕಟ್ಟಿ, ರವಿಕುಮಾರ, ಆರ್.ಎಂ.ಕಂಟೆಪ್ಪಗೌಡರ, ರಾಜೇಶ ಕೊನರಡ್ಡಿ ಹಾಗೂ ಇತರ ಪದಾಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಸುಬ್ಬಾಪುರ ಮಠ ಸ್ವಾಗತಿಸಿ,ಸಭೆಯಲ್ಲಿ ಹಿಂದಿನ ಸಭೆಯ ಠರಾವು ಮಂಡಿಸಿದರು.

ಗೌರವಾಧ್ಯಕ್ಷ ರಮೇಶ ಲಿಂಗದಾಳ ಅವರು ಈಚೆಗೆ ನಿಧನರಾದ ಸಂಘದ ಸಿಪಾಯಿ ಚನ್ನಪ್ಪ ಅವರ ಕುರಿತು ಮಾತನಾಡಿ, ಶೃಂಧಾಜಲಿ ಸಲ್ಲಿಸಿದರು.

ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ ಪ್ರಾಸ್ತಾವಿಕ ವಾಗಿ ಮಾತನಾಡಿದರು.ಖಜಾಂಚಿ ರಾಜಶೇಖರ ಬಾಣದ ಸಂಘದ ಅಡಿಟ್ ವರದಿ ಮಂಡಿಸಿದರು.ಕಾರ್ಯದರ್ಶಿ ಮಂಜುನಾಥ ಯಡಹಳ್ಳಿ ವಂದಿಸಿ ಸಭೆ ನಿರೂಪಿಸಿದರು.

ಜಿಲ್ಲೆಯ ಸುಮಾರು 30 ಕ್ಕೂ ಹೆಚ್ಚು ಇಲಾಖೆಗಳ ಸಂಘದ ಪ್ರತಿನಿಧಿಗಳು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿ ಸಿದ್ದರು.


Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.