ಬೆಂಗಳೂರು –
ಕಳೆದ ಎರಡು ವರುಷಗಳಿಂದ ಎಲ್ಲಿ ನೋಡಿದಲ್ಲಿ ಕೇಳಿದಲ್ಲಿ ಒಂದು ಕಡೆ ಕರೋನಾ ಯಾವಾಗ ಕಡಿಮೆ ಆಗಿತ್ತದೆ ಎಂಬ ಮಾತು ಇನ್ನೊಂದು ಕಡೆಗೆ ಶಾಲೆಗ ಳು ಯಾವಾಗ ಆರಂಭ ಆಗುತ್ತವೆ ಎಂಬ ಪ್ರಶ್ನೆ. ಎರಡು ವರುಷಗಳಿಂದ ಸರಿಯಾಗಿ ಮಕ್ಕಳಿಗೆ ಶಿಕ್ಷಣ ಇಲ್ಲದೇ ಪೊಷಕರು ಬೇಸತ್ತಿದ್ದಾರೆ.ಅಲ್ಲದೇ ಪೋಷ ಕರು ಮಕ್ಕಳ ಶಿಕ್ಷಣದ ಭವಿಷ್ಯದ ಬಗ್ಗೆ ಚಿಂತನೆ ಗಳನ್ನು ಸಹ ಮಾಡುತ್ತಿದ್ದಾರೆ
ಕೊರೋನಾದಿಂದ ಶಾಲೆಗಳು ಬಂದ್ ಆಗಿ, ಮಕ್ಕಳು ಹೊರಗುಳಿದಿದ್ದಾರೆ. ಆದರೆ, ಈಗ ಮಕ್ಕಳು ಕಲಿಕೆ ಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗಿ ದೆ. ತಜ್ಞರ ಸಮಿತಿ ರಚಿಸಿ ಮಾಹಿತಿ ಪಡೆಯಲು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದರು.
ಇನ್ನೂ ಕೂಡಾ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿಲ್ಲ.ಕೊರೋನಾ ಹಿನ್ನೆಲೆ ನಿಗದಿ ಯಂತೆ ಶಾಲೆಗಳು ಆರಂಭವಾಗಿಲ್ಲ. ಅದರಿಂದಾಗಿ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕ್ರಮ ಕೈಗೊ ಳ್ಳಲು ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಶಿಕ್ಷಣ ಸಚಿವರು ಸಭೆ ನಡೆಸಿ ಚರ್ಚಿಸಿದರು.
ಕೊವಿಡ್ 3ನೇ ಅಲೆಗೆ ಈಗಿನಿಂದಲೇ ಸಿದ್ಧತೆ ಆರಂ ಭವಾಗಿದೆ.ಸಕಾಲಕ್ಕೆ ಮಕ್ಕಳಿಗೆ ಪಠ್ಯ ಪುಸ್ತಕ ಪೂರೈ ಕೆಗೆ ಸೂಚನೆ ನೀಡಲಾಗಿದೆ.ಮುಂದಿನ 2 ತಿಂಗಳ ಅವಧಿಯಲ್ಲಿ ಪುಸ್ತಕ ತಲುಪಿಸಬೇಕು. ವಿದ್ಯಾರ್ಥಿ ಗಳಿಗೆ ಪುಸ್ತಕ ತಲುಪಿಸುವಂತೆ ಅಧಿಕಾರಿಗಳಿಗೆ ಸಚಿವ ಸುರೇಶ್ಕುಮಾರ್ ಈಗಾಗಲೇ ಖಡಕ್ ಆಗಿ ಸೂಚಿಸಿದ್ದಾರೆ
ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ಮಕ್ಕಳನ್ನು ಕಲಿ ಕೆಯಿಂದ ವಿಮುಖರಾಗದಂತೆ ಕ್ರಮ ಕೈಗೊಳ್ಳಲು ಮತ್ತು ಮಕ್ಕಳ ಶಿಕ್ಷಣದ ಹಕ್ಕು ರಕ್ಷಿಸುವ ಸಲುವಾಗಿ ಪರ್ಯಾಯ ಕ್ರಮಕ್ಕೆ ಸಮಿತಿ ರೂಪು ರೇಷೆ ಸಿದ್ದ ಪಡಿಸಲಿದ್ದು ಮುಂದಿನ ಶೈಕ್ಷಣಿಕ ವರ್ಷದ ಕುರಿತು ಸಮಗ್ರ ಚರ್ಚೆ ನಡೆಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದು ಈ ವರುಷವಾದರೂ ಶಾಲೆಗಳು ಆರಂಭವಾಗುತ್ತವೆನಾ ಇಲ್ಲ ಮತ್ತೆ ಮೂರನೇಯ ಅಲೆಗೆ ಏನಾಗಲಿದೆ ಎಂಬ ಕುರಿತು ಕಾದು ನೋಡ ಬೇಕಿದೆ.