ಧಾರವಾಡ ದಲ್ಲಿ GST ವಿರುದ್ಧ ಕೈ ಪಕ್ಷದ ಪ್ರತಿಭಟನೆ – ದುಬಾರಿ ದುನಿಯಾ ವಿರುದ್ಧ ಕೈ ನಾಯಕರ ಹೋರಾಟ ಆಕ್ರೋಶ…..

Suddi Sante Desk

ಧಾರವಾಡ –

ಕೇಂದ್ರ ಸರ್ಕಾರದ ಜಿ ಎಸ್ ಟಿ ಹೇರಿಕೆ ಕೈ ಬಿಡಲು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಧಾರವಾಡ ದಲ್ಲಿ ಪ್ರತಿಭಟನೆ ಮಾಡಿದರು ದಿನಬಳಕೆಯ ವಸ್ತುಗಳ ಮೇಲೆ ಜಿ ಎಸ್ ಟಿ ಹೇರಿಕೆ ಕೈ ಬಿಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಬ್ಲಾಕ್ ಕಾಂಗ್ರೆಸ್ ಧಾರವಾಡ -71 ಗ್ರಾಮೀಣ ವಿಧಾನ ಸಭಾಕ್ಷೇತ್ರ ಹಾಗೂ ಅರ್ಬನ್ ಬ್ಲಾಕ್ ವತಿಯಿಂದ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಅರ್ಪಿಸಿದರು.

ದೇಶದ ಜನತೆ ಎರಡು ಮೂರು ವರ್ಷಗಳಿಂದ ಕರೋನಾ ಮಹಾಮಾರಿಗೆ ತತ್ತರಿಸಿ ತಮ್ಮ ವ್ಯವಹಾರಿಕ ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿ ತೊಂದರೆಯ ಜೀವನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಇಂತಹ ಸಮಯದಲ್ಲಿ ದಿನೇ ದಿನೇ ಅವಶ್ಯಕ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ,ಸಿಲಿಂಡರ್ ಪೆಟ್ರೋಲ್,ಡಿಸೈಲ್ ಅಕ್ಕಿ ಮೊಸರು,ಲಸ್ಸಿ ಹೀಗೆ ಹತ್ತು ಹಲವಾರು ವಸ್ತುಗಳು ಗಗನಕ್ಕೇರಿದ್ದು ಎಲ್ಲಾ ವಸ್ತುಗಳ ಮೇಲೆ ಜಿ ಎಸ್ ಟಿ ವಿಧಿಸಿದ್ದು ಖಂಡನೀಯ.ಈ ದುಬಾರಿ ದುನಿಯಾದಿಂದ ಮುಕ್ತಿ ನೀಡಬೇಕು ಎಂದು ಅಧ್ಯಕ್ಷರಾದ ಅನಿಲ ಕುಮಾರ ಪಾಟೀಲ,ಹನುಮಂತಪ್ಪ ಅಲ್ಕೊಡ,ಅರವಿಂದ ಎಗನಗೌಡರ,ಈಶ್ವರ ಶಿವಳ್ಳಿಪಾಲಿಕೆಯ ಸದ್ಯಸರಾದ ರಾಜುಕಮತಿ,ದೀಪಾ ನಿರಲಕಟ್ಟಿ,ಉಳವಣ್ಣ ಬಡವಣ್ಣವರ,ಸಿದ್ದಣ ಪ್ಯಾಟಿ,ಅರುಣ ಪಾಟಿಲ

ಗೌರಮ್ಮ ಬಲೊಜಿ,ರೇಣುಕಾ ಕಳ್ಳಿಮನಿ,ನಿರ್ಮಲಾ ಹೊಂಗಲ,ನವಿನ ಕದಮ,ವಿನಯ ಬಾಬರ,ಮೈಲಾರಿ ಪಾಟೀಲ್,ಆನಂದ ಸಿಂಗನಾಥ, ಮಂಜು ನಡಟ್ಟಿ,ಇಮ್ರಾನ ಕಳ್ಳಿಮನಿ,ನಿಲಕಂಟಪ್ಪ ಹಂಪ್ಪಣ್ಣವರ,ಪ್ರಕಾಶ ಬಾವಿಕಟ್ಟಿ ಶಿವಾನಂದ ಗಿರಿಯೆಪ್ಪನವರ,ಪರುಶರಾಮ ಚುರಮರಿ ಪರಮೇಶ ಕಾಳೆ,ಮೈನು ನದಾಪ,ಕೃಷ್ಣ ರಾಣೊಜಿ, ಮುಕ್ತಿಯಾರ ಪಠಾಣ,ಬಸವರಾಜ ಜಾಧವ,ಸಂಜಿವ ಲಕಮನಹಳ್ಳಿ,ನಿಜಾಮ ರಾಹಿ,ಕಾರ್ತಿಕ ಗೊಕಾಕ ಅಶೊಕ ದೊಡಮನಿ,ಸಲಿಮ ಕರಡಿಗುಡ್ಡ,ಕಿಶೊರ ಗಾಯಕವಾಡ ಬಸವರಾಜ ಮಟ್ಟಿ,ಬಸು ಇಡ್ಲಿ, ಸಂಜು ಚುರಮರಿ,ಅರುಣ ಮಜ್ಜಗಿ ಸೇರಿದಂತೆ ಹಲವರು ಕೂಡಲೇ ಇವೆಲ್ಲವುಗಳನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.