ಬೆಂಗಳೂರು –
ಗ್ರೂಪ್ ‘ಬಿ’ ದೈಹಿಕ ಶಿಕ್ಷಣ ಪರಿವೀಕ್ಷಕರ ತತ್ಸಮಾನ ವೃಂದದ ಹುದ್ದೆಗಳಿಗೆ ಬಡ್ತಿ ಕೊಡಲು ಕೇವಲ ಬೆಂಗಳೂರು ಮತ್ತು ಮೈಸೂರು ಪ್ರಾಧಿಕಾರವನ್ನಾಗಿ ಮಾಡಿ ಉಳಿದ ನಮ್ಮ ವಿಭಾಗಗಳಾದ ಬೆಳಗಾವಿ ಮತ್ತು ಕಲಬುರಗಿ ಪ್ರಾಧಿಕಾರವನ್ನಾಗಿ ಮಾಡಲು ಸರ್ಕಾರಕ್ಕೆ ಪತ್ರ ಬರೆದಿದ್ದು ಅದರ ಮಾಹಿತಿ ಬಾರದೆ 2008 ರಿಂದ 2016 ವರೆಗೂ ನಮ್ಮ ಎರಡೂ ವಿಭಾಗಗಳಿಗೆ ಅನ್ಯಾಯವಾಗಿರುವುದಲ್ಲದೇ ಈ ಲಾಕ್ ಡೌನ್ ಅವಧಿಯಲ್ಲಿ ಕೇವಲ 3 ದಿನ ದಿ:24/05/2021 ಸೋಮವಾರದ ವರೆಗೆ ಮಾತ್ರ ಆಕ್ಷೇಪಣೆ ಸಲ್ಲಿಸಲು ಕಾಲಾವಧಿ ನೀಡಿದ್ದು ತರಾತುರಿಯಲ್ಲಿ ಮಾಡುತ್ತಿರುವ ಮುಂದಿನ ಪ್ರಕ್ರಿಯೆಗಳನ್ನು ಸ್ಥಗಿತ ಗೊಳಿಸುವ ಕುರಿತು

ಉಲ್ಲೇಖ: 1.ಗೆಜೆಟ್ ನೋಟಿಫಿಕೇಶನ್ ನಂ ಡಿಪಿಎಆರ್ 12 ಎಸ್ ಡಿ ಇ 2007.ಬೆಂಗಳೂರು
2. ಆಯುಕ್ತರ ಕಚೇರಿ ಸಂಖ್ಯೆ ಸಿ(4) (4)ದೈ.ಶಿ.ಶಿ.ಗ್ರೇಡ್ -1 ಜೇಷ್ಠತಾ ಪಟ್ಟಿ 14/2019-20
3.ಆಯುಕ್ತರ ಕಚೇರಿ ಸಂಖ್ಯೆ ಸಿ (4)ದೈ .ಶಿ.ಶಿ ಗ್ರೇಡ್ -1 ಜೇಷ್ಠತಾ ಪಟ್ಟಿ 14/2019-20 ಮತ್ತು 19/05/2021 *ಮೇಲಿನ ವಿಷಯದಲ್ಲಿ ತಿಳಿಸಿರುವಂತೆ ಉಲ್ಲೇಖ 01 ಸರಕಾರದ ಅಧಿಸೂಚನೆಯನ್ನು ಉಲ್ಲಂಘನೆ ಮಾಡಿ 2008 ರಿಂದ 2016 ವರೆಗೆ ಗ್ರೇಡ್- 1ದೈ. ಶಿ. ಶಿಕ್ಷಕರಿಗೆ ಬಡ್ತಿ ನೀಡಿರುತ್ತಾರೆ.ಇದರಿಂದ ರಾಜ್ಯದ ಅನೇಕ ಗ್ರೇಡ್ -1ದೈಹಿಕ ಶಿಕ್ಷಣ ಶಿಕ್ಷಕರುಗಳಿಗೆ ಅನ್ಯಾಯವಾಗಿರುತ್ತದೆ.ಉಲ್ಲೇಖ 01 ಸರ್ಕಾರದ ಅಧಿಸೂಚನೆ ನಂ. ಡಿ ಪಿ ಎ ಆರ್ 12 ಎಸ್ ಡಿ ಇ 2007,ದಿನಾಂಕ :29/01/2008 ರಲ್ಲಿ ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಗ್ರೂಪ್ 'ಬಿ 'ದೈ.ಶಿ.ಪರಿವೀಕ್ಷಕರ ತತ್ಸಮಾನ ವೃಂದದ ಹುದ್ದೆಗಳಿಗೆ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರನ್ನು ನೇಮಕಾತಿ ಪ್ರಾಧಿಕಾರವೆಂದು ನಿಗದಿಪಡಿಸಲಾಗಿದೆ.ಆದರೆ ಅಪರ ಆಯುಕ್ತರು ಧಾರವಾಡ ಮತ್ತು ಕಲಬುರಗಿ ಆಯುಕ್ತಾಲಯಕ್ಕೆ ಸಂಬಂಧಿಸಿದಂತೆ ಸದರಿ ವೃಂದದ ಹುದ್ದೆಗಳಿಗೆ ನೇಮಕಾತಿ ಪ್ರಾಧಿಕಾರನಿಗದಿಪಡಿಸಿರುವುದಿಲ್ಲ.ಈ ಬಗ್ಗೆ ಇಲಾಖೆಯಿಂದ ಸರ್ಕಾರಕ್ಕೆ ಪತ್ರ ಬರೆದಿರುವುದು ಸರಿಯಷ್ಟೆ ಸರ್ಕಾರದಿಂದ ಈ ವಿಷಯದ ಬಗ್ಗೆ ಮುಂದಿನ ಆದೇಶ ನೀಡುವವ ರೆಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಗ್ರೂಪ್ 'ಬಿ' ದೈಹಿಕ ಶಿಕ್ಷಣ ಪರಿವೀಕ್ಷಕರು ತತ್ಸಮಾನ ಹುದ್ದೆಗಳಿಗೆ ಉಲ್ಲೇಖ 01.02.03 ರಲ್ಲಿ ಪ್ರಕಟಿಸಿದ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯನ್ನು ರದ್ದುಪಡಿಸಿ ಬಡ್ತಿ ನೀಡುವ ಪ್ರಕ್ರಿಯೆ ಸ್ಥಗಿತಗೊಳಿಸಿ ಸರಕಾರದ ಅಧಿಸೂಚನೆಯಂತೆ ವಿಭಾಗಮಟ್ಟದಲ್ಲಿ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿ ಸಹ ಶಿಕ್ಷಕರಿಂದ ಮುಖ್ಯಶಿಕ್ಷಕರ ವೃಂದಕ್ಕೆ ನೀಡುತ್ತಿರುವ ವಿಧಾನದಲ್ಲಿ ಬಡ್ತಿ ನೀಡುವುದು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ 'ಬಿ' ವೃಂದದ ತತ್ಸಮಾನ ಹುದ್ದೆಗಳಿಗೆ ಬಡ್ತಿ ನೀಡುವುದು. ಇಲಾಖೆಯು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ರಾಜ್ಯಮಟ್ಟದಲ್ಲಿ ಬಡ್ತಿ ಪ್ರಕ್ರಿಯೆ ಯನ್ನು ಸ್ಥಗಿತಗೊಳಿಸಲು ಹಾಗೂ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ಶಿಕ್ಷಕರುಗಳ ಕಣ್ಮಣಿಗಳಾದ ತಮ್ಮ ಗಮನಕ್ಕೆ ತರುತ್ತಿದ್ದೇವೆ ಪುನಃ ಸರ್ಕಾರವು 07/06/2021 ರವರೆಗೆ ಲಾಕ್ ಡೌನ್ ವಿಸ್ತರಿಸಿದ್ದು ಶಿಕ್ಷಕರಿಗೆ ಆಕ್ಷೇಪಣೆ ಸಲ್ಲಿಸಲು ಬೇಕಾಗುವ ದಾಖಲೆಗಳು ಶಾಲಾ ಮುಖ್ಯಸ್ಥರ ಸಹಿ ದೃಢೀಕರಣ ಜೆರಾಕ್ಸ್ ಅಂಗಡಿಗೆ ಹೋಗಿ ಬರಲು ವಾಹನದ ಸಮಸ್ಯೆ (ರಜೆ) 1ಕಡೆ ಸರ್ಕಾರದ ನಿಯಮಗಳನ್ನು ಪ್ರಜ್ಞಾವಂತ ಶಿಕ್ಷಕರಾದ ನಾವೆಲ್ಲ ಲಾಕ್ ಡೌನ್ ನಿಯಮಗಳನ್ನು ಪಾಲಿಸಲೇಬೇಕು.ಹೀಗಿದ್ದಾಗ ಕೇವಲ 3 ದಿನಗಳಲ್ಲಿ ಅತಿ ತರಾತುರಿಯಲ್ಲಿ ಆಕ್ಷೇಪಣೆ ಸಲ್ಲಿಸುವುದು ತುಂಬಾ ತೊಂದರೆ ಆಗುತ್ತಿದೆ ಬೆಳಗಾವಿ, ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಉಪಚುನಾವಣೆ ಈ 3 ಚುನಾವಣೆಗಳಲ್ಲಿ ಭಾಗವಹಿಸಿದ ಶಿಕ್ಷಕರು ಕೋವಿಡ್ -19 ರಿಂದ ಪಾಸಟಿವ್ ದಿಂದ ಬಳಲುತ್ತಿದ್ದು ಅನೇಕ ನಮ್ಮ ವೃತ್ತಿಬಾಂಧವರು ಕ್ವಾರಂಟೈನ್ ದಲ್ಲಿರುತ್ತಾರೆ ಹೀಗಾಗಿ ಯಾವುದೇ ಆನ್ ಲೈನ್ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಇನ್ನೂ ನೇರವಾದ ಕೌನ್ಸಲಿಂಗ್ ಇಟ್ಟರು ಬೆಂಗಳೂರಿಗೆ ಹೋಗಲು ಲಾಕ್ ಡೌನ್ ಇರುವುದು ಹಾಗೂ 2019-20 ಕಾರ್ಯನಿರ್ವಹಣಾ ವರದಿ ಮಾತ್ರ ಸಲ್ಲಿಸಿದ್ದು 2020-21 ರ ಸಾಲಿನ ಕಾರ್ಯ ನಿರ್ವಹಣಾ ವರದಿ ಯನ್ನು ಸಲ್ಲಿಸಿರುವುದಿಲ್ಲ ಇದಕ್ಕೆ ಮಾನ್ಯ ಮುಖ್ಯೋಪಾಧ್ಯಾಯರ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಉಪ ನಿರ್ದೇಶಕರ ಸಹಿ ಮತ್ತು ದೃಢೀಕರಣಕ್ಕಾಗಿ ಶಿಕ್ಷಕರುಗಳು ಹೋಗಬೇಕಾಗುವುದು.ಅನೇಕ ಶಿಕ್ಷಕ ಬಳಗವು ರಜಾ ಅವಧಿಯಲ್ಲಿ ತಮ್ಮ ತಮ್ಮ ಊರುಗಳಿಗೆ ಹೋಗಿದ್ದು ಈ ಲಾಕ್ ಡೌನ್ ಸಮಯದಲ್ಲಿ ಇದೆಲ್ಲವೂ ಹೇಗೆ ಸಾಧ್ಯ ಕಾರಣ ಮಾನ್ಯ ರವರಲ್ಲಿ ವಿನಂತಿಸುತ್ತಾ ದಿ:24/05/2021 ರ ಆಕ್ಷೇಪಣೆ ಕೊಡುವ ಸಮಯವನ್ನು ಲಾಕ್ ಡೌನ್ ಮುಗಿಯುವವರೆಗೆ ವಿಸ್ತರಿಸಬೇಕೆಂದು ವಿನಂತಿಸುತ್ತಾ ಉಲ್ಲೇಖ 01ರ ಗೆಜೆಟ್ ನೋಟಿಫಿಕೇಷನ್ ದಂತೆ ನಿಯಮನುಸಾರವಾಗಿ ಮಾಡಲು ಮಾನ್ಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಮಾನ್ಯ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಮಾನ್ಯ ಜಂಟಿ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರುಗಳಿಗೆ ಸನ್ಮಾನ್ಯರಾದ ನಮ್ಮೆಲ್ಲರ ಕಣ್ಮಣಿ ಗಳಾದ ತಾವುಗಳು ಇವರಿಗೆ ಸೂಚಿಸಿ ಸೇವೆಯಲ್ಲಿ ಸಿಗುವ ಇದೊಂದೇ ಬಡ್ತಿಯನ್ನು ನಮ್ಮ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ಶಿಕ್ಷಕರುಗಳಿಗೆ ಸಿಗುವಂತೆ ಅನುಕೂಲ ಮಾಡಿಕೊಡಬೇಕೆಂದು ಅತ್ಯಂತ ಕಳಕಳಿಯಿಂದ ವಿನಮ್ರತೆಯಿಂದ ಕೇಳಿಕೊಳ್ಳು ತ್ತೇವೆ ಎಂದು ಮನವಿ ಮಾಡಿದ್ದರು


ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ. ಸಜ್ಜನ. ಪ್ರ.ಕಾ.ಮಲ್ಲಿಕಾರ್ಜುನ ಉಪ್ಪಿನ.ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ಧಾರವಾಡದ ರಾಜ್ಯಾಧ್ಯಕ್ಷ ರಾದ ಗುರು ತಿಗಡಿ. ಎಸ್. ವಾಯ್. ಸೊರಟಿ. ಕರ್ನಾಟಕ ರಾಜ್ಯ ಗ್ರೇಡ .1 ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳಾದಅನ್ನಪೂರ್ಣ.ಸಿ.ಅಸ್ಕಿ. ಶಿವನಗೌಡ.ಜಾಲಿಹಾಳ.ನರಗುಂದದ ಬಿ.ಆರ್. ಪಾಟೀಲ.ವಿ.ಎನ್.ಭೋಸಲೆ.ಅರ್.ಎಮ್.ಪಾಟೀಲ.ಬಿ.ಪಿ.ಬಿರಾದಾರ.ಎಸ್.ಕೆ.ಗೊಡಚಿನಮಲ್ಕಿ.ಜಿ.ವಾಯ್.ಬಾರ್ಕೇರ.ಆರ್.ಎಮ್.ಮಕಾಳೆ.ಎಸ್.ಬಿ.ಪತ್ತಾರ.ನವಲಗುಂದದ ಎಲ್.ವಾಯ್. ರಾಯಪ್ಪನ ವರ.ಆರ್.ಎಚ್.ನೇಗಲಿ.ಬಿ.ಜಿ.ಹುಲ್ಲೂರ.ಸಿಂಧಗಿಯಎಸ್.ವಿ.ಬಿರಾದಾರ.ಆರ್.ಎಚ್.ಹಚಡದ.ರಮೇಶ.ಬಿರಾದಾರ.ಎಸ್.ವಿ.ಕೊಳೇಕರ.ಎಮ್.ಎ.ಬಿರಾದಾರ.ಜೇವರಗಿಯ.ಎಸ್.ವಿ.ಗೊಂಬಿಮಠ.ಬಿ.ಎಸ್.ಅರಳಿಗುಂಡಗಿ.ಭಾಲ್ಕಿಯ ಚನವೀರಪ್ಪ. ಚಕ್ರ ಸಾಲಿ.ಶ್ರೀನಿವಾಸ ರೆಡ್ಡಿ.ಮಂದ್ರಾಳ..ಮುಂತಾದ ರಾಜ್ಯ..ಜಿಲ್ಲೆ ತಾಲೂಕ ಹಂತದ ಪದಾಧಿಕಾರಿಗಳು ನಮ್ಮ ಮನವಿಗೆ ತತ್ ಕ್ಷಣ ಸ್ಪಂದಿಸಿ ಸರ್ಕಾರಕ್ಕೆ ಶಿಕ್ಷಣ ಸಚಿವರಿಗೆ ಪತ್ರ ಬರೆದು ಶಿಫಾರಸ್ಸು ಮಾಡಿದ್ದ ಕ್ಕಾಗಿ ವಿಧಾನ ಪರಿಷತ್ ಸಭಾಪತಿಗಳಾದ ಮಾನ್ಯ ಶ್ರೀ ಬಸವರಾಜ ಎಸ್.ಹೊರಟ್ಟಿಯವರಿಗೆ ಅಭಿವಂದಿಸಿದ್ದಾರೆ