ಮೈಸೂರು –
ಸಧ್ಯ ಎಲ್ಲೆಡೆ ಲಾಕ್ ಡೌನ್ ಕರೋನ ಮಹಾಮಾರಿಗೆ ಎಲ್ಲರೂ ಭಯ ಗೊಂಡು ಮನೆ ಮನೆಗಳಲ್ಲಿ ಇದ್ದಾರೆ ಇನ್ನೂ ಇದರಿಂದಾಗಿ ನಮ್ಮ ಶಿಕ್ಷಕರು ಹೆಚ್ಚಿನ ಪ್ರಮಾ ಣದಲ್ಲಿ ಹೆದರಿಕೊಂಡಿದ್ದು ಇವೆಲ್ಲದರ ನಡುವೆ ಶಾಲೆ ಗಳಿಗೆ ರಜೆ ಇದೆ ಎಂದುಕೊಂಡು ಮನೆಯಲ್ಲಿ ಬೆಚ್ಚಗೆ ಕುಳಿತುಕೊಳ್ಳದೇ ಇಲ್ಲೊಬ್ಬ ಶಿಕ್ಷಕ ವಿಭಿನ್ನವಾದ ಕಾರ್ಯದಲ್ಲಿ ತೊಡಗಿದ್ದಾರೆ.

ಹೌದು ಕರ್ನಾಟಕದಲ್ಲಿ ಸಧ್ಯ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಕಾರಣ ರಾಜ್ಯ ಸರ್ಕಾರ 3ನೇ ಹಂತದ ಲಾಕ್‌ಡೌನ್ ಅನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.ಇನ್ನೂ ಲಾಕ್‌ಡೌನ್ ಮಾರ್ಗ ಸೂಚಿಗಳನ್ವಯ ಶಾಲಾ- ಕಾಲೇಜುಗಳನ್ನು ಬಂದ್ ಮಾಡಿದ್ದು 1 ರಿಂದ 9ನೇ ತರಗತಿಗಳಿಗೆ ಬೇಸಿ ಗೆ ರಜೆಯನ್ನೂ ಘೋಷಣೆ ಮಾಡಿದೆ ಹೀಗಿರುವಾಗ ಮೈಸೂರಿನಲ್ಲಿ ಒರ್ವ ಶಿಕ್ಷಕ ವಿಭಿನ್ನವಾದ ಕಾರ್ಯ ದಲ್ಲಿ ತೊಡಗಿದ್ದಾರೆ

ಹೌದು ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ತುಂಬಲ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರಾಯಪ್ಪ ಗೌಂಡಿ ವಿಶೇಷವಾದ ಸೇವಾ ಕಾರ್ಯ ದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ

ಎತ್ತಿನಗಾಡಿ ಮೂಲಕ ಮಕ್ಕಳ ಮನೆ ಬಾಗಿಲಿಗೆ ರೇಷನ್ ವಿತರಿಸುತ್ತಿದ್ದಾರೆ.ತುಂಬಲ ಗ್ರಾಮದಲ್ಲಿ ಶಾಲಾ ಮಕ್ಕಳ ಮನೆಮನೆಗೆ ತೆರಳಿ ಆಹಾರ ವಿತರಣೆ ಮಾಡಿರುವ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರಾಯಪ್ಪರ ವಿಭಿನ್ನ ಪ್ರಯತ್ನದ ವಿಡಿಯೋ ಎಲ್ಲೆಡೆ ಮೆಚ್ಚುಗೆ ಗಳಿಸಿದೆ.

ನಿತ್ಯವೂ ತುಂಬಲ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿ ಗಳಿಗೆ ವಿಭಿನ್ನ ರೀತಿಯಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿರುವ ಮುಖ್ಯ ಶಿಕ್ಷಕ ರಾಯಪ್ಪ ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಗಾಗಿ ಮನೆ ಮನೆಗೆ ತೆರಳಿ ಪಾಠ ಮಾಡುತ್ತಾರೆ. ಮುಖ್ಯ ಶಿಕ್ಷಕ ರಾಯಪ್ಪ ಸರ್ಕಾರದ ವಿದ್ಯಾಗಮ ಯೋಜನೆ ಶುರು ಮಾಡುವ ಮೊದಲೇ ಪಾಠ ಅರಂಭಿಸಿದ್ದರು.ಪ್ರತಿಯೊಂದು ಮಕ್ಕಳ ಓದಿನ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಸರ್ಕಾರಿ ಸಂಬಳ ಪಡೆದು ಕೇವಲ ಶಾಲೆಗಷ್ಟೇ ಸೀಮಿತವಾಗುವ ಶಿಕ್ಷಕರ ನಡು ವೆ ರಾಯಪ್ಪ ಗೌಂಡಿ ನಿಜಕ್ಕೂ ಮಾದರಿ ಆಗಿದ್ದಾರೆ. ಇನ್ನೂ ಇವರ ಒಳ್ಳೆಯ ಕೆಲಸವನ್ನು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಸಜ್ಜನ ನೇತೃತ್ವದಲ್ಲಿನ ಸರ್ವ ಸದಸ್ಯರು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲೇಖನ – ಎಲ್ ಐ ಲಕ್ಕಮ್ಮನವರ ಶಿಕ್ಷಕರು