ಶಿಕ್ಷಕರ ನೇಮಕಾತಿ ಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸಚಿವ ಬಂಧನ – ರಾಶಿ ರಾಶಿ ಕೋಟಿ ಕೋಟಿ ರೂಪಾಯಿ ಪತ್ತೆ…..

Suddi Sante Desk

ಕೋಲ್ಕತ್ತಾ –

ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ 20 ಕೋಟಿ ರೂ ನಗದು ಪತ್ತೆಯಾದ ದಿನದ ಒಳಗಾಗಿ ಜಾರಿ ನಿರ್ದೇಶನಾಲಯ ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಅರ್ಪಿತ ಮುಖರ್ಜಿ ಅವರನ್ನು ಬಂಧಿಸಿದೆ.ಜಾರಿನಿರ್ದೇಶನಾಲಯದ 8ಕ್ಕೂ ಹೆಚ್ಚು ಅಧಿಕಾರಿಗಳು ಸಚಿವ ಪಾರ್ಥ ಅವರನ್ನು ವಿಚಾರ ಣೆಗೊಳಪಡಿಸಿದರು.ಸತತ ವಿಚಾರಣೆ ಬಳಿಕ ತೃಪ್ತಿದಾಯಕ ಉತ್ತರಗಳು ದೊರೆಯದ ಕಾರಣ ಸಚಿವರನ್ನು ಬಂಧಿಸಲಾ ಗಿದೆ.

ಜಾರಿನಿರ್ದೇಶನಾಲಯ ಅರ್ಪಿತ ಚಟರ್ಜಿ ಹಾಗೂ ಶಿಕ್ಷಣ ಇಲಾಖೆಯ ರಾಜ್ಯ ಸಚಿವರೊಬ್ಬರು ಹಾಗೂ ಶಾಸಕರ ಮನೆ ಮೇಲೂ ದಾಳಿ ನಡೆಸಲಾಗಿತ್ತು.ಅರ್ಪಿತ ಚಟರ್ಜಿ ಅವರ ಮನೆಯಲ್ಲಿ 2 ಸಾವಿರ ಹಾಗೂ 500 ರೂ. ಮುಖ ಬೆಲೆಯ ನಗದಿನ ರಾಶಿಯೇ ಪತ್ತೆಯಾಗಿತ್ತು.ತೃಣಮೂಲ ಕಾಂಗ್ರೆಸ್‍ನಿಂದ ಬೆಹಾಲ್‍ಪಶ್ಚಿಮ್ ಕ್ಷೇತ್ರದಿಂದ ಶಾಸಕರಾ ಗಿರುವ ಪಾರ್ಥ ಈ ಮೊದಲು ಮಮತಾ ಬ್ಯಾನರ್ಜಿ ಅವರ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ದ್ದರು.2014ರಿಂದ 2021ರವರೆಗೂ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದರು

.

ದಕ್ಷಿಣ ಕೋಲ್ಕತ್ತಾದ ಪ್ರಭಾವಿ ನಾಯಕರಾಗಿದ್ದ ಪಾರ್ಥ 2006ರಿಂದ 11ರ ನಡುವೆ ಪಶ್ಚಿಮ ಬಂಗಾಳದ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು.2016ರಲ್ಲಿ ಮಮತಾ ಬ್ಯಾನರ್ಜಿ ಅವರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ ಸಾರ್ವಜನಿಕ ಉದ್ದಿಮೆ,ಐಟಿಬಿಟಿ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ. ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಧರ ರಾದ ಪಾರ್ಥದುರ್ಗ ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಾತಿ ಗಾಗಿ ಶಾಲಾ ಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಭಾರೀ ಅವ್ಯವಹಾರ ನಡೆಸಲಾಗಿದೆ.

ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ದಾಗ ಸಚಿವರ ಆಪ್ತೆಯ ಮನೆಯಲ್ಲಿ 20 ಕೋಟಿ ರೂ. ಪತ್ತೆಯಾಗಿದೆ.ಸಚಿವರ ಬಂಧನದ ಬಳಿಕ ಇಬ್ಬರು ವೈದ್ಯರು ಕೋಲ್ಕತ್ತಾದ ನಾಟ್ಕಾಲದಲ್ಲಿರುವ ಸಚಿವರ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದರು.ಈ ವೇಳೆ ಅವರ ಆರೋಗ್ಯ ಸರಿ ಇರಲಿಲ್ಲ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಶಿಕ್ಷಕರ ನೇಮ ಕಾತಿ ಹಗರಣ ಕೇವಲ ಸಚಿವ ಪಾರ್ಥ ಅವರಿಗಷ್ಟೇ ಸೀಮಿತವಾಗಿಲ್ಲ ಸರ್ಕಾರದ ಸಹಭಾಗಿತ್ವವಿದೆ.ಇದರ ಬಗ್ಗೆ ಇನ್ನಷ್ಟು ತೀವ್ರ ತನಿಖೆ ಅಗತ್ಯವಿದೆ ಎಂದು ಹೇಳಿದೆ.
ಹಗರಣದ ಕುರಿತು ಸಿಬಿಐ ಕೂಡ ತನಿಖೆ ಆರಂಭಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.