ಧಾರವಾಡ –
ಧಾರವಾಡದ ಯಾದವಾಡ ಗ್ರಾಮದಲ್ಲಿ ಕೋವಿಡ್ ಕೇರ್ ಕೇಂದ್ರವನ್ನು ಆರಂಭ ಮಾಡಲಾಗಿದೆ.40 ಹಾಸಿಗೆಯ ಸಾಮರ್ಥ್ಯ ದ ನೂತನ ಕೋವಿಡ್ ಕೇರ್ ಕೇಂದ್ರ ವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಚಿವ ಜಗದೀಶ್ ಶೆಟ್ಟರ್ ಶಾಸಕ ಅಮೃತ ದೇಸಾಯಿ ಸೇರಿದಂತೆ ಹಲವು ಗಣ್ಯರು ಉದ್ಘಾಟನೆ ಮಾಡಿದರು

ಹೌದು ಧಾರವಾಡ ಜಿಲ್ಲೆಯ ಯಾದವಾಡ ಗ್ರಾಮ ದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ SDM ಸಂಸ್ಥೆ ವತಿಯಿಂದ ನಿರ್ಮಾಣವಾದ 40 ಹಾಸಿಗೆ ಸಾಮರ್ಥ್ಯದ ನೂತನ ಕೋವಿಡ್ ಕೇರ್ ಸೆಂಟರ್ ಅನ್ನು ಉದ್ಘಾಟಿಸಲಾಯಿತು.

ಸದರಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಅಗತ್ಯವಿರುವ ಸಕಲ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ನುರಿತ ವೈದ್ಯ ವೃಂದ ಹಾಗೂ ಸಿಬ್ಬಂದಿ ವರ್ಗವನ್ನು ನಿಯೋಜಿ ಸುವ ಮೂಲಕ ಈ ಭಾಗದ ಜನರ ಆರೋಗ್ಯ ಸಂರ ಕ್ಷಣೆಯ ಕುರಿತು ಕ್ರಮವನ್ನು ಅನುಸರಿಸಿ ಕಾರ್ಯ ನಿರ್ವಹಿಸಲು ಈ ಒಂದು ಕೇರ್ ಆರಂಭ ಮಾಡ ಲಾಯಿತು

ಈ ಒಂದು ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಸಚಿವರಾದ ಜಗದೀಶ್ ಶೆಟ್ಟರ್ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ್ ದೇಸಾಯಿ,ನವಲಗುಂದ ಕ್ಷೇತ್ರದ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ,ತವನಪ್ಪ ಅಷ್ಟಗಿ, ಜಿಲ್ಲಾಧಿಕಾರಿ ನಿತೀಶ್ ಪಾಟೀಲ್,

ತಹಶೀಲ್ದಾರ್ ಸಂತೋಷ ಬಿರಾದಾರ, SDM ಸಂಸ್ಥೆಯ ಅಧಿಕಾರಿ ಗಳು ಸಿಬ್ಬಂದಿ ಹಾಗೇ ಕಂದಾಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಹಾಗೂ ಇತರರು ಈ ಒಂದು ಸಂದರ್ಭದಲ್ಲಿ ಹಾಜರಿದ್ದರು.
