ಗರಗ –
ಗರಗ ಗ್ರಾಮದ ಕಾಳಗಟ್ಟಿ ಕರೆಯಮ್ಮ ದೇವಿ ದೇವ ಸ್ಥಾನದ ಹತ್ತಿ ಸಾರ್ವಜನಿಕರ ರಸ್ತೆ ಮೇಲೆ ಜಗದೀಶ್ ಫಕ್ಕೀರಪ್ಪ ಪಟದಾರಿ ವಯಾ 39 ವರ್ಷ ಇತನು ತನ್ನ ಸ್ವಂತ ಫಾಯ್ದೆಗೋಸ್ಕರ್ ಯಾವುದೇ ಪಾಸ್ ಮತ್ತು ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ವಿಸ್ಕಿ ತುಂಬಿದ ಸರಾಯಿ ಟೆಟ್ರಾ ಪಾಕೀಟ್‍ಗಳನ್ನು ಮಾರಾಟ ಮಾಡುತ್ತಿದ್ದನು.ಈ ಒಂದು ದೂರನ್ನು ಸ್ವೀಕರಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಗರಗ ಪೋಲಿಸ್ ಠಾಣೆ ಸಿಬ್ಬಂದಿ ಕಾರ್ಯಾಚರಣೆ ಮಾಡಿ ಒರ್ವನನ್ನು ಬಂಧನ ಮಾಡಿದ್ದಾರೆ
ಎಸ್.ಎನ್.ಪಾತಲಿ ಆರ್.ಎಂ.ನರಗುಂದ ಎನ್.ವಾಯ್.ಹಟ್ಟೆನ್ನವರ ಸಿಬ್ಬಂದಿಯವರು ಆರೋಪಿಯನ್ನು ದಸ್ತಗೀರ ಮಾಡಿ ಅವನಿಂದ 43400 ರೂಪಾಯಿ ಹಣಹಾಗೂ ಇನ್ನಿತರ ವಸ್ತುಗ ಳನ್ನು ವಶಪಡಿಸಿಕೊಂಡಿದ್ದಾರೆ.
ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ದೆ ಸದರಿಯವರ ಕಾರ್ಯಕ್ಕಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪಿ.ಕೃಷ್ಣಕಾಂತ್ ಅವರು ತಂಡದವ ರಿಗೆ ಪ್ರಶಂಸನೆಯನ್ನು ವ್ಯಕ್ತಪಡಿಸಿದ್ದಾರೆ.