ಗುರುಲಿಂಗಸ್ವಾಮಿ ಹೊಳಿಮಠ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಧಾರವಾಡ ದಲ್ಲಿ ಪತ್ರಕರ್ತ ಮಿತ್ರರು ವಾರ್ತಾ ಇಲಾಖೆಯಿಂದ ನಮನ…..

Suddi Sante Desk

ಧಾರವಾಡ –

ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಧಾರವಾಡದ ವಾರ್ತಾಭವನದಲ್ಲಿ ಮಾಧ್ಯಮ ಪ್ರತಿನಿಧಿಗಳು ಗುರುಲಿಂಗಸ್ವಾಮಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಬಸವರಾಜ ಕಂಬಿ ಮಾತನಾಡಿ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶವೊಂದರಿಂದ ವಿಧಾನಸೌಧದ ಮೂರನೇ ಮಹಡಿಯವರೆಗೆ ಉತ್ತಮ ಸ್ಥಾನಕ್ಕೇರಿದ ಗುರುಲಿಂಗಸ್ವಾಮಿ ಹೊಳಿಮಠ ಅವರು ಚಿಕ್ಕ ವಯಸ್ಸಿನಲ್ಲಿಯೇ ಹಠಾತ್ ಆಗಿ ನಮ್ಮೆಲ್ಲರನ್ನು ಅಗಲಿರು ವುದು ದಿಗ್ಭ್ರಾಂತಿ ಉಂಟು ಮಾಡಿದೆ.ವೃತ್ತಿ ಜೀವನದಲ್ಲಿ ಅವರು ತೋರಿದ ಸಹಕಾರ,ಆತ್ಮೀಯತೆ ಸದಾ ಸ್ಮರಣೀ ಯ ಎಂದರು.

ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಡಾ.ಬಸವರಾಜ ಹೊಂಗಲ್ ಮಾತನಾಡಿ ಸ್ನಾತಕೋತ್ತರ ಪದವಿ ದಿನಗಳು ಮಾಧ್ಯಮ ವೃತ್ತಿಯ ಪ್ರಾರಂಭಿಕ ದಿನಗಳಿಂದಲೂ ಗುರುಲಿಂಗಸ್ವಾಮಿ ಹೊಳಿಮಠ ಅವರು ತೋರಿದ ಪ್ರೀತಿ,ಒಡನಾಟಕ್ಕೆ ಸಾಟಿ ಯಿಲ್ಲ.ತಮ್ಮ ಸ್ಪಂದನಾಶೀಲ ಮನೋಭಾವದಿಂದಲೇ ಎಲ್ಲರ ಹೃದಯ ಗೆದ್ದಿದ್ದರು ಎಂದರು.

ಧಾರವಾಡ ಮೀಡಿಯಾ ಕ್ಲಬ್ ಅಧ್ಯಕ್ಷ ಮುಸ್ತಫಾ ಕುನ್ನಿಭಾವಿ ಮಾತನಾಡಿ ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕರಾಗಿ ಕ್ಯಾಬಿನೆಟ್ ಸಚಿವರ ದರ್ಜೆಯ ಸ್ಥಾನ ಮಾನ ಹೊಂದಿದ್ದರೂ ಕೂಡ ಸರಳತೆಯನ್ನು ಅವರು ಮರೆತಿರಲಿಲ್ಲ.ಮಾಧ್ಯಮ ರಂಗದಲ್ಲಿ ಕರ್ತವ್ಯ ನಿರ್ವಹಿ ಸುವವರು ಹಾಗೂ ಹೊಸದಾಗಿ ಈ ರಂಗಕ್ಕೆ ಬರುವವರಿಗೆ ಮಾರ್ಗದರ್ಶನವಷ್ಟೇ ಅಲ್ಲದೇ ಸೂಕ್ತ ಉದ್ಯೋಗ ಒದಗಿ ಸಲು ಅವರು ವಹಿಸುತ್ತಿದ್ದ ಕಾಳಜಿ ಅನನ್ಯವಾದುದಾಗಿತ್ತು ಎಂದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ವಾರ್ತಾ ಸಹಾಯಕ ಡಾ.ಸುರೇಶ ಹಿರೇಮಠ,ಪತ್ರಕರ್ತರಾದ ಎಲ್.ಎಸ್.ಬೀಳಗಿ,ಬಸವರಾಜ ಹಿರೇಮಠ, ಇ.ಎಸ್. ಸುಧೀಂದ್ರ ಪ್ರಸಾದ,ಮಂಜುನಾಥ ಅಂಗಡಿ,ನಿಜಗುಣಿ ದಿಂಡಲಕೊಪ್ಪ,ಬಿ.ಎಂ.ಕೇದಾರನಾಥ,ಡಾ.ವೆಂಕನಗೌಡ ಪಾಟೀಲ,ವಿಶ್ವನಾಥ ಕೋಟಿ ಮತ್ತಿತರರು ಮಾತನಾಡಿ ಮೃತರೊಂದಿಗಿನ ಒಡನಾಟ ಸ್ಮರಿಸಿದರು.

ಜಾವೇದ್ ಆದೋನಿ,ಎನ್.ಎನ್.ಮೂರ್ತಿ ಪ್ಯಾಟಿ ಪರಶುರಾಮ ಅಂಗಡಿ,ರವೀಶ ಪವಾರ,ಮಹಾಂತೇಶ ಕಣವಿ,ಗಿರೀಶ ಹೆಗಡೆ,ವಿಠ್ಠಲ ಕರಡಿಗುಡ್ಡ,ಮಲ್ಲಿಕಾರ್ಜುನ ಬಾಳನಗೌಡ್ರ,ಮಹದೇವಯ್ಯ ಪಾಟೀಲ,ರವಿ ಕಗ್ಗಣ್ಣವರ, ಗುರುನಾಥ ಕಟ್ಟಿಮನಿ,ವಾರ್ತಾ ಇಲಾಖೆಯ ಸಿ.ಬಿ.ಭೋವಿ ಸೇರಿದಂತೆ ವಿವಿಧ ಮಾಧ್ಯಮಗಳ ವರದಿಗಾರರು ಛಾಯಾ ಗ್ರಾಹಕರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.