ಬೆಂಗಳೂರು –
ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗಳಿಗೆ ಬಡ್ತಿ ಪಡೆಯಲು 1 ರಿಂದ 5ನೇ ತರಗತಿಗೆ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರು ಅರ್ಹರಲ್ಲ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶಿಸಿದೆ.ಶಿಕ್ಷಕರಿಗೆ ಈಗಾಗಲೇ ಬಡ್ತಿ ನೀಡಿದ್ದರೆ ಅದನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಹೀಗಾಗಿ ರಾಜ್ಯದಲ್ಲಿ ಈಗಾಗಲೇ ಬಡ್ತಿ ಪಡೆದಿರುವ ಸುಮಾರು 8 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿಯಾಗಲಿದೆ ಈ ಒಂದು ವಿಚಾರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈಗ ಸಿಡಿದೆದ್ದಿದೆ.

ಹೌದು ಅತ್ತ ಕೆಎಟಿ ಆದೇಶ ಬರುತ್ತಿದ್ದಂತೆ ಇತ್ತ ಈ ಒಂದು ಶಿಕ್ಷಕರ ಸಂಘಟನೆ ಯವರು ಈಗ ಸಿಡಿ ದೆದ್ದಿದ್ದಾರೆ.ಇಂದು ಇಡಿ ದಿನ ಈ ವಿಚಾರ ಕುರಿತು ಚಿಂತನ ಮಂಥನ ಮಾಡಿ ಕೊನೆಯಲ್ಲಿ ಯಾವುದೇ ಕಾರಣಕ್ಕೂ ಶಿಕ್ಷಕರಿಗೆ ಅನ್ಯಾಯ ಆಗಲು ಬಿಡೊ ದಿಲ್ಲ ಎಂದು ತೀರ್ಮಾನ ತಗೆದುಕೊಂಡು ಅಂತಿಮ ವಾಗಿ ಈಗ ಸಂಘದ ಸರ್ವ ಸದಸ್ಯರಾದ ಶಿಕ್ಷಕರ ಬೆನ್ನಿಗೆ ನಿಂತುಕೊಂಡಿದೆ

ಈ ಒಂದು ವಿಚಾರದಲ್ಲಿ ಶಿಕ್ಷಣ ಸಚಿವರಿಗೆ ಸಂಘದ ಸರ್ವ ಸದಸ್ಯರ ಪರವಾಗಿ ಅಧ್ಯಕ್ಷ ಶಂಭುಲಿಂಗ ನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸುರೇಶ್ ಕುಮಾರ್ ಅವರಿಗೆ ಪತ್ರವನ್ನು ಬರೆದಿದ್ದಾರೆ

ಪತ್ರವನ್ನು ಬರೆದು ಸುಮ್ಮನಾಗದೇ ಈ ಒಂದು ಕೆಎಟಿ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಈ ಒಂದು ವಿಚಾರದಲ್ಲಿ ಅರ್ಜಿ ಸಲ್ಲಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ

ಸಂಘದ ಒತ್ತಡ ಪ್ರಯತ್ನದ ಫಲವಾಗಿ ಸಂಜೆ ಶಿಕ್ಷಣ ಸಚಿವರು ಯಾವುದೇ ಕಾರಣಕ್ಕೂ ಶಿಕ್ಷಕರಿಗೆ ಅನ್ಯಾಯ ಆಗಲು ಬಿಡೊದಿಲ್ಲ ಎಂದು ಹೇಳಿ ಶಿಕ್ಷಣ ಸಚಿವರು ಸಂಘದ ಧ್ವನಿಗೆ ಸ್ಪಂದಿಸಿದ್ದಾರೆ ಅಲ್ಲದೇ ಶಿಕ್ಷಕರ ಬೆನ್ನಿಗೆ ನಿಂತ ಸಂಘಟನೆಯ ಧ್ವನಿಗೆ ಶಕ್ತಿ ತುಂಬಿ ಅಭಯ ನೀಡಿದ್ದಾರೆ.