ಮುಂಬೈ –
ಕೆಲವೊಮ್ಮೆ ಅಕ್ರಮ ಸಂಬಂಧದಿಂದಾಗಿ ಅನೇಕ ಕುಟುಂಬಗಳೇ ಮುರಿದುಬೀಳುತ್ತವೆ. ಆದರೂ ಕೆಲ ವರು ಅಂತಹ ತಪ್ಪಿಗೆ ಕೈ ಹಾಕುವುದನ್ನು ನಿಲ್ಲಿಸುವು ದಿಲ್ಲ.ಹೀಗೆ ವ್ಯಕ್ತಿಯೊಬ್ಬ ಶಿಕ್ಷಕಿಯೊಬ್ಬಳ ಜತೆ ಅಕ್ರ ಮ ಸಂಬಂಧ ಹೊಂದಿ ನಂತರ ಆಕೆಯ ಟಾರ್ಚರ್ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಖಮ್‌ಗಾಂವ್ ತಾಲೂಕಿನ ಪಹು ರ್ಜಿರಾ ನಿವಾಸಿ ಪ್ರಭುದಾಸ್ ಬೋಲೆಗೆ ಮದುವೆ ಯಾಗಿತ್ತು.ಆದರೆ ಹೆಂಡತಿಯೊಂದಿಗಿನ ಸಂಬಂಧ ಸಾಕಾಗದ ಆತ ವಿಧವೆ ಶಿಕ್ಷಕರಿಯೊಬ್ಬರ ಅಕ್ರಮ ಸಂಬಂಧದ ಬಲೆಗೆ ಬಿದ್ದಿದ್ದಾನೆ. ಮೊದ ಮೊದಲು ಸ್ನೇಹದ ರೂಪದಲ್ಲಿ ಆರಂಭವಾದ ಅವರ ಸಂಬಂಧ ಕೊನೆಗೆ ಸಾಕಷ್ಟು ಆಳವಾಗಿ ಬೇರೂರಿದೆ.
ಇಷ್ಟೇಲ್ಲ ಬೆಳವಣಿಗೆಯ ನಡುವೆ ಅತ್ತ ಶಿಕ್ಷಕಿ ತನ್ನ ಕೆಲಸ ಕಳೆದುಕೊಂಡಿದ್ದಾಳೆ. ಹಣಕ್ಕೆ ಸಾಕಷ್ಟು ತೊಂದರೆಯಾಗಿದೆ.ಆಗ ಉಪಾಯ ಮಾಡಿದ ಆಕೆ ಪ್ರಭುದಾಸ್ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ನಾನು ಮನೆ ತೆಗೆದುಕೊಳ್ಳಬೇಕು ನನಗೆ ಹಣ ಕೊಡು ಎಂದು ಕೇಳಿದ್ದಾಳೆ.ಆದರೆ ತನ್ನ ಬಳಿ ಹಣವಿಲ್ಲವೆಂ ದು ಆತ ಹೇಳಿದಾಗ ಅವರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಹಾಕುವುದಾಗಿ ಬೆದರಿಸಿದ್ದಾಳೆ
ಶಿಕ್ಷಕಿಯ ಬೆದರಿಕೆಗೆ ಹೆದರಿದ ಪ್ರಭುದಾಸ್ ಆಕೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಇತ್ತ ಮೃತರಾದ ಆತನ ಹೆಂಡತಿ ನನ್ನ ಗಂಡನ ಸಾವಿಗೆ ಶಿಕ್ಷಕಿಯೇ ಕಾರಣವೆಂದು ಪೊಲೀಸರಲ್ಲಿ ದೂರು ನೀಡಿದ್ದಾಳೆ. ಶಿಕ್ಷಕಿಗೆ ಅನೇಕರು ಸಾಥ್ ಕೊಟ್ಟಿದ್ದಾಗಿ ಯೂ ಹೇಳಲಾಗಿದೆ.ಇದೀಗ ಪೊಲೀಸರು ಆರೋಪಿ ತ ಶಿಕ್ಷಕಿಯನ್ನು ವಶಕ್ಕೆ ಪಡೆದಿದ್ದು ಮುಂದಿನ ಕ್ರಮ ವನ್ನು ಕೈಗೊಂಡಿದ್ದಾರೆ