ವಯೋಮಿತಿ ಸಡಿಲಿಕೆ ನಿಯಮ ಬದಲಾವಣೆ ಮಾಡಿದ ಸಚಿವ ಸಂಪುಟಕ್ಕೆ ಶಿಕ್ಷಕರ ವರ್ಗಾವಣೆ ನೆನಪಾಗಲಿಲ್ಲವೇ ವರ್ಗಾವಣೆ ಸಿಗದೇ ರಾಜ್ಯದ ಶಿಕ್ಷಕರು ಏನೇಲ್ಲಾ ಕಷ್ಟ ಅನುಭವಿಸುತ್ತಿದ್ದಾರೆ ಒಮ್ಮೆ ನೋಡಿ ಜನಪ್ರತಿನಿಧಿಗಳೇ

Suddi Sante Desk

ಬೆಂಗಳೂರು –

ಯಾರಿಗೂ ಯಾವ ಇಲಾಖೆಗೂ ಇಲ್ಲದ ವರ್ಗಾವಣೆಯ ನೀತಿ ನಿಯಮದಿಂದಾಗಿ ರಾಜ್ಯದ ಅದೇಷ್ಟೋ ಶಿಕ್ಷಕರು ಬೇಸತ್ತಿದ್ದು ತಂದೆ ತಾಯಿ ಹೆಂಡತಿ ಮಕ್ಕಳು ಬಂಧು ಬಳಗ ಊರು ಹೀಗೆ ಎಲ್ಲವನ್ನೂ ಬಿಟ್ಟು ಸೇವೆಯನ್ನು ಮಾಡುತ್ತಿ ರುವ ಶಿಕ್ಷಕರಿಗೆ ಸ್ವಂತ ಜಿಲ್ಲೆಗೆ ಒಮ್ಮೆಯಾದರೂ ವರ್ಗಾ ವಣೆ ಮಾಡಬೇಕು ಎಂಬ ಕೂಗು ಒಂದೆಡೆ ಜೋರಾಗು ತ್ತಿದ್ದರೆ ಮತ್ತೊಂದೆಡೆ ಇವರ ನೋವು ಕಷ್ಟ ಯಾರು ಕೇಳು ತ್ತಿಲ್ಲ ನೋಡುತ್ತಿಲ್ಲ ಹೀಗಾಗಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ನೊಂದುಕೊಳ್ಳುತ್ತಿದ್ದು ಸಾಕಷ್ಟು ಪ್ರಮಾಣದಲ್ಲಿ ನರಕಯಾತನೆಯನ್ನು ಅನುಭವಿ ಸುತ್ತಿದ್ದಾರೆ.

ಇನ್ನೂ ಇವೆಲ್ಲದರ ನಡುವೆ ರಾಜ್ಯದಲ್ಲಿ ಹೊಸದಾಗಿ ಶಿಕ್ಷಕ ರಾಗಲು ಬಯಸುವವರಿಗೆ ಇಂದಿನ ಸಚಿವ ಸಂಪುಟ ಸಭೆ ಗುಡ್ ನ್ಯೂಸ್ ನೀಡಿದ್ದು ನೇಮಕಾತಿಗಾಗಿ ವಯೋಮಿತಿ ಯನ್ನು ಹೆಚ್ಚಳ ಮಾಡಿದೆ.ಹೌದು ಶಿಕ್ಷಕರಾಗುವ ಕನಸು ಕಂಡವರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ನೀಡಿದ್ದು ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಗ್ರೀನ್‌ ಸಿಗ್ನಲ್ ನೀಡಿದೆ.ಶಿಕ್ಷಕರ ನೇಮಕಾತಿ ಹೊಸ ನಿಯಮಾವಳಿಗಳಿಗೆ ಅನುಮೋದನೆ ನೀಡಿದೆ.ಈ ಮೂಲಕ ಶಿಕ್ಷಕರ ನೇಮಕಾತಿ ಯಲ್ಲಿ ವಯೋಮಿತಿ ಮೀರಿ, ಶಿಕ್ಷಕರ ಹುದ್ದೆಯಿಂದ ವಂಚಿತ ರಾಗುತ್ತಿದ್ದಂತ ಲಕ್ಷಾಂತರ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

ಹೌದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧದ ಹೊಸ ನಿಯಮಾವಳಿ ಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾ ಯಿತು.ಇಂದಿನ ಸಚಿವ ಸಂಪುಟ ಸಭೆಯಲ್ಲಿ ಶಾಲಾ ಶಿಕ್ಷಕರ ನೇಮಕಾತಿ ನಿಯಮದಲ್ಲಿ ನಿಯಮಾವಳಿಗೆ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದ ಕಾರಣ, ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿ ಮಾಡಲಾಗುತ್ತಿದೆ.

ಅದ್ರಂತೆ ಎಲ್ಲ ವರ್ಗಗಳಿಗೂ ವಯೋಮಿತಿಯಲ್ಲಿ 2 ವರ್ಷ ಏರಿಕೆಗೆ ನಿರ್ಧಾರ ಮಾಡಲಾಗಿದ್ದು,ಹೊಸ ನಿಯಮದ ನ್ವಯ ಎಸ್ಸಿ, ಎಸ್‌ಟಿ, ಪ್ರವರ್ಗ 1, ವಿಕಲಚೇತನರಿಗೆ 47 ವರ್ಷಗಳವರೆಗೆ ವಯೋಮಿತಿ ಸಿಗಲಿದೆ.ಇನ್ನು ಪ್ರವರ್ಗ 2, 2ಬಿ, 3ಎ ಮತ್ತು 3ಬಿಗೆ 45 ವರ್ಷ ಮೀರಿರಬಾರದು. ಅದ್ರಂತೆ, ಸಾಮಾನ್ಯ ವರ್ಗಗಳಿಗೆ 42 ವರ್ಷ ಮೀರಿರಬಾ ರದು.ಇದಲ್ಲದೇ ಶಿಕ್ಷಕರ ಹುದ್ದೆಯ ಆಯ್ಕೆಗಾಗಿ ನಡೆಸ ಲಾಗುತ್ತಿದ್ದಂತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಕನಿಷ್ಠ ಅಂಕ ಗಳ ನಿಯಮದಲ್ಲೂ ಬದಲಾವಣೆ ಮಾಡಲಾಗಿದೆ. ಕನಿಷ್ಠ ನಿಯಮ ಅಂಕವನ್ನು ಇಳಿಕೆ ಮಾಡಲು ಒಪ್ಪಿಗೆ ಸೂಚಿಸ ಲಾಗಿದೆ.ಅದರಂತೆ ಕಟಾಫ್‌ ಅಂಕಗಳು 60 ರಿಂದ 50ಕ್ಕೆ ಸರ್ಕಾರ ಇಳಿಸಿದೆ.ಇದು ಸರಿ ಆದರೆ ವರ್ಗಾವಣೆ ಸಿಗದೇ ಪರದಾಡುತ್ತಿರುವ ಶಿಕ್ಷಕರಿಗೆ ಒಮ್ಮೆಯಾದರು ಸ್ವಂತ ಜಿಲ್ಲೆಗೆ ವರ್ಗಾವಣೆ ನೀಡುವ ವಿಚಾರ ಯಾರ ಗಮನಕ್ಕೂ ಅದ ರಲ್ಲೂ ಸಚಿವ ಸಂಪುಟದ ಗಮನಕ್ಕೆ ಬಾರದಿರೊದು ದೊಡ್ಡ ದುರಂತವಾಗಿದ್ದು ಮಾಡು ಇಲ್ಲವೇ ಮಡಿ ಎಂಬಂತೆ ವರ್ಗಾ ವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರು ಹೋರಾಟ ಮಾಡೊ ದೊಂದು ದಾರಿಯಾಗಿದ್ದು ಯಾರನ್ನು ನಂಬಿಕೊಂಡು ಕುಳಿತುಕೊಳ್ಳದೇ ಮುಂದಿನ ನಿರ್ಧಾರವನ್ನು ಕೈಗೊಳ್ಳು ತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.