ಧಾರವಾಡ –
ಧಾರವಾಡದಲ್ಲಿ ಸಂಚಾರಿ ಪೊಲೀಸರು ಮತ್ತು ಸಿವಿಲ್ ಪೊಲೀಸರು ಲಾಕ್ ಡೌನ್ ಕರ್ತವ್ಯ ದೊಂ ದಿಗೆ ಸಮಾಜವೇ ಮೆಚ್ಚುವಂತಹ ಕೆಲಸವನ್ನು ಮಾಡಿದ್ದಾರೆ.
ಹೌದು ಜೂನ್ 1 ರಂದು ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಪೊಲೀಸ್ ಸಿಬ್ಬಂದಿಗಳು ಸಾಮೂಹಿಕವಾಗಿ ನಗರದಲ್ಲಿ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿ ದ್ದಾರೆ.
ಲಾಕ್ ಡೌನ್ ಇದೆ ಎಂದುಕೊಂಡು ಅಲ್ಲಲ್ಲಿ ಕರ್ತ ವ್ಯದ ಮೇಲಿರುವ ಪೊಲೀಸರು ರಸ್ತೆ ಮಧ್ಯದಲ್ಲಿ ಯೇ ಕೇಕ್ ಕತ್ತರಿಸಿಕೊಂಡು ತಮ್ಮ ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳದೇ ಸಧ್ಯ ದೇಶಕ್ಕೆ ಒದಗಿ ಬಂದಿರುವ ಪರಸ್ಥಿತಿಯ ನಡುವೆ ಆಕ್ಸಿಜನ್ ಕೊರತೆಯನ್ನು ಅರಿತುಕೊಂಡು ನಗರದಲ್ಲಿ ಗಿಡಗಳ ನ್ನು ನೆಟ್ಟು ವಿಭಿನ್ನವಾಗಿ ಹುಟ್ಟು ಹಬ್ಬವನ್ನು ಇವರು ಆಚರಣೆ ಮಾಡಿಕೊಂಡಿದ್ದಾರೆ.
ಸಧ್ಯ ಧಾರವಾಡ ಜಿಲ್ಲೆಯಲ್ಲೂ ಕೂಡಾ ಲಾಕ್ ಡೌನ್ ಇದೆ ಹೀಗಾಗಿ ಕರ್ತವ್ಯದ ಮೇಲಿರುವ ಪೊಲೀಸರು ಹುಟ್ಟು ಹಬ್ಬದ ಸಂಭ್ರದಲ್ಲಿರುವರೆ ಲ್ಲರೂ ಸೇರಿಕೊಂಡು ಸಾಮೂಹಿಕವಾಗಿ ಗಿಡಗಳನ್ನು ವಿಭಿನ್ನವಾಗಿ ವಿಶೇಷವಾಗಿ ಅರ್ಥಪೂರ್ಣವಾಗಿ ತಮ್ಮ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಈ ಮೂಲಕ ಕರ್ತವ್ಯದೊಂದಿಗೆ ಸಾಮಾಜಿಕ ಕಾಳಜಿ ಜವಾಬ್ದಾರಿಯನ್ನು ಇವರು ಮೆರೆದರು.ಅಲ್ಲದೇ ಹೆಚ್ಚು ಹೆಚ್ಚು ಗಿಡ ಮರಗಳನ್ನು ನೆಡುವಂತೆ ಇವರೆಲ್ಲ ರೂ ಸಾರ್ವಜನಿಕರಿಗೆ ಕರೆ ನೀಡಿದರು.ಇಂದು ಸಂಚಾರಿ ಮತ್ತು ಸಿವಿಲ್ ಪೊಲೀಸ್ ಸಿಬ್ಬಂದಿಗಳಾದ ಎಸ್ ಎಚ್ ಡೊಳ್ಳಿನ. ಶಿವಾನಂದ ಸುತಗಟ್ಟಿ, ಶಿವಾ ನಂದ ಮಡಿವಾಳರ,ಮಹಮ್ಮದ್ ರಫೀಕ್ ನಾಲ ಬಂದ, ಎಸ್ ಸಿ ಸೋಬರದ, ಎಸ್ ಹೆಚ್ ಬಾಳಿ ಕಾಯಿ, ಬಿ ಆರ್ ನಿಲೇರಿ,ಶಂಕರ ಲಮಾಣಿ, ಇವರೆ ಲ್ಲರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಈ ಒಂದು ಸಸಿ ನೆಡುವ ಕಾರ್ಯಕ್ರಮ ನಗರದಲ್ಲಿ ಕಂಡು ಬಂದಿತು.
ಇದರೊಂದಿಗೆ ವಿಶೇಷವಾಗಿ ಕರ್ತವ್ಯದ ನಡುವೆ ಯೂ ಇವರು ಸಮಾಜಕ್ಕೆ ಮಾದರಿಯಾಗಿ ಹೀಗೆ ಪ್ರತಿಯೊಬ್ಬರು ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಕೊಂಡು ಗಿಡ ಮರಗಳನ್ನು ಬೆಳೆಸಲು ಕರೆ ನೀಡಿದ ರು.
ವರದಿ – ಮಂಜು ಬಡಿಗೇರ (ಸೌಂದರ್ಯ) ಸುದ್ದಿ ಸಂತೆ ನ್ಯೂಸ್ ಡೆಸ್ಕ್ ಧಾರವಾಡ