ಕಲಘಟಗಿ –
“ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗುವ ಕೃತಿ “ಮತ್ತೆ ಹೊಸ ಗೆಳೆಯರು”ಕರ್ನಾಟಕ ಶಿಕ್ಷಕರ ಸಾಹಿತ್ಯ ಪರಿಷತ್ತು ಬೆಂಗಳೂರು ಜಿಲ್ಲಾಘಟಕ ಧಾರವಾಡದ ಸಹಯೋಗದಲ್ಲಿ ಜರುಗಿದ ” ನನ್ನ ಕೃತಿ ನನ್ನ ಹೆಮ್ಮೆ” ಪಾಕ್ಷಿಕ ವೆಬ್ ನಾರ್ ಮೊದಲ ಸಭೆಯ ಕಾರ್ಯಕ್ರಮದಲ್ಲಿ ಯಲ್ಲಾಪೂರದ ಸಾಹಿತಿ ನಾಗರಾಜ ಹುಡೇದ ಅವರು ವೈ,ಜಿ,ಭಗವತಿ ಅವ ರು ರಚಿಸಿದ ಕಾದಂಬರಿ ವಿಮರ್ಶಿಸುತ್ತಾ ಮಾತಾಡು ತ್ತಿದ್ದರು.

ಮಕ್ಕಳ ಬಾಲ್ಯ, ಅವರ ತುಂಟಾಟದ ವಾಸ್ತವ ಅಂಶ ಗಳ ಜೊತೆಯಲ್ಲಿ ಒಂದಿಷ್ಟು ಕಲ್ಪನೆ,ಪ್ರಾಕೃತಿಕ ವರ್ಣ ನೆಗಳಿಂದ ಕಾದಂಬರಿ ಓದುಗರನ್ನು ಗೆಲ್ಲತ್ತದೆ ಎಂದ ರು.190 ಪುಟಗಳ ಈ ಕಾದಂಬರಿಯಲ್ಲಿ 21 ಅಧ್ಯಾ ಯಗಳು ಇವೆ.

ಮೈಸೂರಿನ ದ್ರಾಕ್ಷಾಯಣಿ ಪ್ರಕಾಶನ ಮೈಸೂರ ಇವರಿಂದ ಅಂದವಾಗಿ ಮುದ್ರಣಗೊಂಡಿದೆ.ಇದರ ಬೆಲೆ 175 ರೂ.ಇದನ್ನು ಕೊಂಡು ಓದುವ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬಹುದು ಎಂದ ರು. ಕು.ನಿಕ್ಷೇಪ ಜಾವೂರ ಅವರ ಪ್ರಾರ್ಥನೆಯೊಂ ದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ರಾಜ್ಯಾಧ್ಯಕ್ಷರಾದ ಶಿವಕುಮಾರ ಪರಿಷತ್ತಿನಿಂದ ಸದ ಭಿರುಚಿಯ ಸಾಹಿತ್ಯ ಚಟುವಟಿಕೆಗಳನ್ನು ಸಂಘಟಿ ಸುವ ಯೋಚನೆ ಇದೆ ಎಂದರು.ಪ್ರಾಸ್ತಾವಿಕವಾಗಿ ರಾಜ್ಯ ಪ್ರಧಾನಕಾರ್ಯದರ್ಶಿ ಯಲ್ಲಪ್ಪ ಕರೆಣ್ಣವರ ಮಾತಾಡಿ ವಿಶಿಷ್ಠ ಕಾರ್ಯಕ್ರಮಕ್ಕೆ ಶುಭಕೋರಿದರು

ಕೃತಿಕಾರ ವೈ,ಜಿ,ಭಗವತಿ ಅವರು ಇಂದಿನ ಮಕ್ಕಳಿಗೆ ದಕ್ಕಲಾರದ ಅನೇಕ ಸಂಗತಿಗಳು ಈ ಕೃತಿಯಲ್ಲಿವೆ ಹಿರಿಯರು ಮಕ್ಕಳು ಓದಬಲ್ಲ ಈ ಕೃತಿಯಲ್ಲಿ ತೀರ್ಥ ಹಳ್ಳಿಯ ಚಿತ್ತಕಲಾವಿಧ ಮಂಜಣ್ಣ ನಾಯಕ ಅವರ ಅಂದವಾದ ಚಿತ್ರಗಳಿವೆ.ಈಗಾಗಲೇ ಅನೇಕ ಲೇಖಕ ರ ವಿಮರ್ಶಾ ಬರಹಗಳು ಪತ್ರಿಕೆಯಲ್ಲಿ ಪ್ರಕಟಗೊಂ ಡಿವೆ.

ಪ್ರಕಟಣೆಗೂ ಮುನ್ನವೇ “ನೈರುತ್ಯ” ಕನ್ನಡ ಮಾಸಪ ತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ಪರಿಷತ್ತಿನ ಮೊದಲ ಕಾರ್ಯಕ್ರಮದಲ್ಲಿ ಈ ಕೃತಿ ವಿಮರ್ಶೆಗೆ ಒಳಪಟ್ಟಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು.

ಡಾ. ಆನಂದ ಪಾಟೀಲ,ಎಂ,ಎಂ, ಪುರದನಗೌಡರ, ಡಾ. ನಿಂಗು ಸೊಲಗಿ. ಮೈಸೂರಿನ ಪ್ರಭಾಶಾಸ್ತ್ರೀ ಜೋಶಾಲ, ಚಿತ್ರದುರ್ಗದ ಪರಮೇಶ್ವರಪ್ಪ ಕುದರಿ, ಜಮಖಂಡಿಯ ಗುರುನಾಥ ಸುತಾರ, ಪ್ರೋ ಮಾಲ ತಿ ಪಟ್ಟಣಶೆಟ್ಟಿ ಅನೇಕ ಹಿರಿಯ ಸಾಹಿತಿಗಳ ನಡುವೇ ಈ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ಜರುಗಿತು. ಡಾ,ಶಿವಾನಂದ ಟಿವಳಿ,ಶಿವಾನಂದ ಚಿಕ್ಕ ನರ್ತಿ,ಸುಭಾಸ ಚೌವ್ಹಾನ, ಶ್ರೀಧರ ಗಸ್ತಿ,ರಂಗನಾಥ ವಾಲ್ಮೀಕಿ, ಅಭಿಪ್ರಾಯ ಹೇಳಿದರು.ಸಭೆಯ ಅಧ್ಯಕ್ಷ ತೆಯನ್ನು ಕೆ,ಎಫ್,ಜಾವೂರ ವಹಿಸಿದ್ದರು.ಸಿದ್ದು ವಾರದ ಸ್ವಾಗತಿಸಿದರು.ಬಸವರಾಜ ದೇಸೂರ ಕಾರ್ಯಕ್ರಮ ನಿರೂಪಿಸಿದರು ನಲವತ್ತು ಹೆಚ್ಚಿನ ಶಿಕ್ಷಕರು, ಸಾಹಿತಿಗಳು ಪಾಲ್ಗೊಂಡಿದ್ದರು.