ಕಾರವಾರ –
ಖೋಟಾ ನೋಟು ಜಾಲವನ್ನು ದಾಂಡೇಲಿಯ ಗ್ರಾಮೀಣ ಪೊಲೀಸ್ ಪತ್ತೆ ಮಾಡಿದ್ದಾರೆ. ಮನೆಯ ಲ್ಲಿ ಕೆಲವೊಂದಿಷ್ಟು ಜನರು ಸೇರಿಕೊಂಡು ಪ್ರಿಂಟ್ ಮಾಡುತ್ತಿದ್ದ ಮಾಹಿತಿ ಪಡೆದ ಗ್ರಾಮೀಣ ಪೊಲೀಸ ರು ದಾಳಿ ಮಾಡಿ ಈ ಒಂದು ಜಾಲವನ್ನು ಪತ್ತೆ ಮಾಡಿ ಅಪಾರ ಪ್ರಮಾಣದಲ್ಲಿ ಖೋಟಾ ನೋಟು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾರ್ಯಾಚರಣೆ ಮಾಡಿದ ಪೊಲೀಸರು ಲಕ್ಷಾಂತರ ಮೌಲ್ಯದ ಖೋಟಾನೋಟು ಹಾಗೇ ವ್ಯವಹಾರ ಮಾಡುತ್ತಿದ್ದ 6 ಜನರನ್ನು ಬಂಧಿಸಿದ್ದಾರೆ

ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಈ ಒಂದು ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ 4.5 ಲಕ್ಷ ಅಸಲಿ ನೋಟು,72 ಲಕ್ಷದ ಖೋಟಾ ನೋಟು ವಶಕ್ಕೆ ತಗೆದುಕೊಂಡಿದ್ದಾರೆ. ಮಹಾರಾಷ್ಟ್ರ ದ ಕಿರಣ ದೇಸಾಯಿ(40),ಗಿರೀಶ ಪೂಜಾರಿ(42), ಬೆಳಗಾವಿಯ ಅಮರ ನಾಯ್ಕ(30), ಸಾಗರ ಕುಣ್ಣೂ ರ್ಕರ್(28), ದಾಂಡೇಲಿಯ ಶಬ್ಬೀರ್ ಕುಟ್ಟಿ(45), ಶಿವಾಜಿ ಕಾಂಬ್ಳೆ(52) ಬಂಧಿತರಾದ ಆರೋಪಿಗಳಾ ಗಿದ್ದಾರೆ

ಡಿಡಿಎಲ್ ವನಶ್ರೀ ಭಾಗದ ಶಿವಾಜಿ ಕಾಂಬ್ಳೆ ಎನ್ನುವ ವರ ಮನೆಯಲ್ಲಿ ಇವರನ್ನು ವಶಕ್ಕೆ ತೆಗೆದುಕೊಳ್ಳಲಾ ಗಿದೆ.4.5 ಲಕ್ಷ ಅಸಲಿ ನೋಟು ಪಡೆದು 9 ಲಕ್ಷ ನಕಲಿ ನೋಟು ನೀಡಲು ಮುಂದಾಗಿದ್ದ ವೇಳೆ ಈ ಒಂದು ದಾಳಿ ನಡೆದಿದೆ.ಇನ್ನೂ ಇವರೊಂದಿಗೆ ವ್ಯವ ಹಾರಕ್ಕೆ ಬಳಸಿದ್ದ ಎರಡು ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಇದರೊಂದಿಗೆ ಬೃಹತ್ ಪ್ರಮಾಣದ ಖೋಟಾ ನೋಟು ವ್ಯವಹಾರ ಬಯಲಾಗಿದೆ.ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಧ್ಯ ಪೊಲೀಸರು ಮುಂದಿನ ಮಹತ್ವದ ತನಿಖೆಯನ್ನು ಮಾಡತಾ ಇದ್ದಾರೆ