ಕೊಪ್ಪಳ –
ಕರೋನ ಭೀತಿಯ ನಡುವೆ ಮತ್ತೊಂದು ಸಮಸ್ಯೆಯನ್ನು ತಂದಿರುವ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ವಿರುದ್ದ ಶಿಕ್ಷಕರು ಸಿಡಿದೆದ್ದಿ ದ್ದಾರೆ. ಹೌದು ಈ ಸಂಕಷ್ಟದ ನಡುವೆ ಈಗ ಮತ್ತೊಂದು ಕಾರ್ಯವನ್ನು ಇಲಾಖೆ ಶಿಕ್ಷಕರಿಗೆ ನೀಡಕು ಮುಂದಾಗಿದೆ. ಹೌದು ಮಕ್ಕಳ ಸಮೀಕ್ಷಾ ಕಾರ್ಯವನ್ನು ನೀಡಿ ಆದೇಶವನ್ನು ಹೊರಡಿಸಿದ್ದಾರೆ. ಇದರ ವಿರುದ್ಧ ಶಿಕ್ಷಕರು ಅಸಮಾಧಾನಗೊಂಡಿದ್ದಾರೆ.ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ CEO ಆದೇಶವನ್ನು ಮಾಡಿ ಜಿಲ್ಲೆಯಲ್ಲಿ ಮಕ್ಕಳ ಸಮೀಕ್ಷಾ ಕಾರ್ಯಕ್ಕೆ ಜ್ಞಾಪನ ಹೊರಡಿಸಿದ್ದಾರೆ.

ಸಂಘದ ಪದಾಧಿಕಾರಿಗಳು ಜಿಲ್ಲೆಯ ಗುರುಬಳಗ ಇಚ್ಛಾಶಕ್ತಿಯ ಮೇರೆಗೆ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಲು ಸಿದ್ಧರಿದ್ದಾರೆ ಎಂದು ತಿಳಿಸಿರುವ ವಿಷಯವು ವಾಸ್ತವವಾಗಿ ಯಾವ ಪದಾಧಿಕಾರಿ ಗಳು ಈ ರೀತಿ ಒಪ್ಪಿಕೊಂಡಿಲ್ಲ ಎಂದು ಈ ಮೂಲಕ ಜಿಲ್ಲಾ ಘಟಕವು ಸ್ಪಷ್ಟಪಡಿಸುತ್ತದೆ. ಮುಂದುವರೆದು ಇಲಾಖೆಯು ಹೊರಡಿಸಿರುವ "Willing Letter" ನಲ್ಲಿ ಯಾವುದೇ ಶಿಕ್ಷಕರು ಒಪ್ಪಿಗೆ ಕೊಡದಿರುವುದು ಸೂಕ್ತ ಎಂದು ಸಂಘವು ತಮ್ಮ ಗಮನಕ್ಕೆ ತರಬಯ ಸುತ್ತದೆ.ಸಮೀಕ್ಷಾ ಕಾ
ರ್ಯಕ್ಕೆ ನಿಯೋಜಿಸಿದ ಶಿಕ್ಷಕರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸುವಂತೆ ಮನವಿ ಸಲ್ಲಿಸಲಾಗಿದೆ.ಸಂಘವು ಯಾವತ್ತೂ ತಮ್ಮೊಂದಿಗೆ ಎನ್ನುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಇಂಥಹ ಕಠಿಣ ಪರಿಸ್ಥಿತಿಯಲ್ಲಿ ಯಾವುದೇ ಕಾರಣ ಕ್ಕೂ ಶಿಕ್ಷಕರಿಗೆ ಇದನ್ನು ನೀಡದೆ ಮುಂದೂಡಿಕೆ ಮಾಡಿ ಎಂದು ಒತ್ತಾಯ ಮಾಡಿದ್ದಾರೆ.