ಹೆಬ್ಬಳ್ಳಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಗೆ 91 ನೆಯ ದತ್ತಿಯನ್ನು ನೀಡಿದ ಲೂಸಿ ಸಾಲ್ಡಾನ ಮುಂದು ವರಿದ ಅಕ್ಷರ ತಾಯಿಯ ದತ್ತಿ ಕಾರ್ಯಕ್ರಮ…..

Suddi Sante Desk


ಹೆಬ್ಬಳ್ಳಿ –

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಗೆ 91 ನೆಯ ದತ್ತಿ ಯನ್ನು ಧಾರವಾಡ ಜಿಲ್ಲೆಯ ಸೇವಾ ದಳದ ಜಿಲ್ಲಾ ಸಂಘಟಕರಾದ ಕಾಶೀನಾಥ್ ಹಂದ್ರಾಳ ಇವರ ಅಮೃತ ಹಸ್ತದಿಂದ ಅಕ್ಷರತಾಯಿ ಲೂಸಿ ಸಾಲ್ಡಾನ ತನ್ನ 91 ನೆಯ ದತ್ತಿಯನ್ನು ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರಾದ ಸುರೇಶ ಅಂಬಿಗೇರ ಅವರಿಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಶೀನಾಥ್ ಹಂದ್ರಾಳ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯದ ಜಾಗ್ರತೆ ಮೂಡಿಸುವ ಸಮುವಾಗಿ ಮೂರು ಜನ ಸೈನಿಕರನ್ನು ಕರೆದುಕೊಂಡು ಧಾರವಾಡ ತಾಲೂಕಿನ ಪ್ರಮುಖ ಆಯ್ದ ಹಳ್ಳಿಗಳಿಗೆ ಸೇವಾದಳದ ಕುರಿತು ಮಕ್ಕಳಿಗೆ ಜನರಿಗೆ ತಿಳಿಸುವುದು ಸೇರಿದಂತೆ ದೇಶದ ಬಗ್ಗೆ ಅಭಿಮಾನ ಮೂಡಿಸುವ ಈ ಜಾತಾ ಕಾರ್ಯಕ್ರಮದಲ್ಲಿ, ಧಾರವಾಡದ ಅಕ್ಷರತಾಯಿ ದತ್ತಿ ದಾನಿ ನಿವೃತ್ತ ಶ್ರೇಷ್ಠ ಶಿಕ್ಷಕಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿರು ವುದು ನಮಗೆ ಸಂತಸ ತಂದಿದೆ ಎಂದರು

ಮುಖ್ಯ ಅತಿಥಿಯಾಗಿ ಶಾಲಾಭಿವೃದ್ದಿ ಸಮಿತಿಯ ಸದಸ್ಯ ಚಂದ್ರಶೇಖರ ಮಟ್ಟಿ ಮಾತನಾಡಿ ಕಷ್ಟ ಪಟ್ಟು ಬದುಕು ಕಟ್ಟಿಕೊಂಡ ಮೇಲೆ ತಾವಾಯಿತು ತಮ್ಮ ಸಂಸಾರವಾ ಯಿತು ಎನ್ನುವವರ ಮದ್ಯೆ ಈ ಅಕ್ಷರತಾಯಿ ನಿಜವಾಗಿ ಯೂ ಇಂದಿನ ದಿನದಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿ ಎಣಿಸು ವರು ಏಕೆಂದರೆ ನಿವೃತ್ತಿ ಆಗಿ ಹದಿನೈದು ವರ್ಷಗಳು ಕಳೆದರು ಇನ್ನೂ ಕೂಡಾ ಶಾಲೆಗಳಿಗೆ ಬಡ ಮಕ್ಕಳ ಕಲಿಕೆ ಗಾಗಿ ದತ್ತಿ ನೀಡುತ್ತಿದ್ದಾರೆ ತನ್ನ ಪಿಂಚಣಿ ಹಣದಲ್ಲಿ ಶೇಕಡ 90 ರಷ್ಟು ಬಡ ಮಕ್ಕಳ ಕಲಿಕೆಗೆ ದತ್ತಿ ನೀಡುತ್ತಾ ಕೇವಲ 10% ರಷ್ಟು ಹಣದಲ್ಲಿ ತನ್ನ ಜೀವನ ನಿರ್ವಹಿಸುತ್ತಾ ಒಬ್ಬ ಆದರ್ಶ ಶ್ರೇಷ್ಠ ಶಿಕ್ಷಕಿಯಾಗಿ ಇಂದು ನಮ್ಮ ಮದ್ಯೆ ಇದ್ದಾರೆ, ಇವರು ನಮಗೆಲ್ಲ ಆದರ್ಶ ಎಂದರು ನಾನು ಮತ್ತು ನನ್ನ ಹಾಗೇ ಸಾವಿರಾರು ವಿದ್ಯಾರ್ಥಿಗಳಿಗೆ ಇವರು ಅಕ್ಷರದ ಬೆಳಕನ್ನು ನೀಡಿದ್ದಾರೆ ಎಂದರು.ಶಿಕ್ಷಕ ಎಲ್ ಐ ಲಕ್ಕಮ್ಮ ನವರ,ಸೇವಾದಳದ ಧಾರವಾಡ ಗ್ರಾಮೀಣ ಸಂಘಟಕ ಎಸ್ ವಿ ವಗ್ಹನವರ,ಸೈನಿಕರಾದ ಸೋಮನಿಂಗ ಸೊಗಲದ ಈಶ್ವರ ಗಾಣಿಗೇರ,ಬಸವರಾಜ ಮೂಡಣ್ಣವರ ಸೇರಿದಂತೆ ಎಲ್ಲಾ ಶಿಕ್ಷಕರು,ಮಕ್ಕಳು ಹಾಜರಿದ್ದರು,ನಾಗಮ್ಮ ಹೂಗಾರ ಸ್ವಾಗತಿಸಿದರು,ಸೇವಾದಳದ ಶಿಕ್ಷಕಿ ಎ ಸಿ ಉಮಚಗಿ ನಿರ್ವಹಿಸಿ ವಂದಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.