ಈಜಿಪ್ಟ್ –
ಮಗ ಕಳ್ಳತನ ಮಾಡಿದ್ದಾನೆಂದು ಅವನಿಗೆ ಕಠಿಣ ಶಿಕ್ಷೆಯನ್ನು ತಂದೆಯೊಬ್ಬರು ನೀಡಿದ ಘಟನೆ ಈಜಿಪ್ಟ್ ನಲ್ಲಿ ನಡೆದಿದೆ.ಈ ಒಂದು ಮನಕಲಕುವ ಘಟನೆ ನಡೆದಿದ್ದು ಸಾಕಷ್ಟು ಪ್ರಮಾಣದಲ್ಲಿ ಪೊಟೊ ವೈರಲ್ ಆಗಿದೆ. 7 ವರ್ಷದ ಮಗನಿಗೆ ತಂದೆಯೊಬ್ಬ ಕ್ರೂರ ಶಿಕ್ಷೆ ನೀಡಿದ್ದಾನೆ. ಕಲುಬಿಯಾದಲ್ಲಿ ಘಟನೆ ನಡೆದಿದ್ದು, ಈತನ ಮಗ ಕಳ್ಳತನ ಮಾಡ್ತಾನೆಂದು ನೆರೆಹೊರೆಯವರು ಆರೋಪ ಮಾಡಿದ್ದರಂತೆ.
ಹೌದು ಮಗನ ಕೈ ಕಾಲುಗಳನ್ನು ಕಂಬಕ್ಕೆ ಕಟ್ಟಿದ ತಂದೆ ದೇಹಕ್ಕೆ ಜೇನುತುಪ್ಪ ಸವರಿದ್ದಾನೆ.ಜೇನು ತುಪ್ಪದ ವಾಸನೆಗೆ ಜೇನು ಹುಳುಗಳ ಮಗನ ಹತ್ತಿರ ಬರಲಿ ಎಂಬ ಕಾರಣಕ್ಕೆ ಹೀಗೆ ಮಾಡಿ ಕಠಿಣ ಕ್ರೂರ ಶಿಕ್ಷೆಯನ್ನು ನೀಡಿದ್ದಾರೆ
ಮೊಹಮ್ಮದ್ ಡಿ ಕಳ್ಳತನ ಮಾಡ್ತಾನೆಂದು ಪಕ್ಕದ ಮನೆಯವರು ಆರೋಪ ಮಾಡಿದ್ದರು ಎನ್ನಲಾಗಿದೆ. ಮರದ ಕೋಲಿಗೆ ಕೈ-ಕಾಲುಗಳನ್ನು ಕಟ್ಟಿ ನಂತ್ರ ಕಂಬಕ್ಕೆ ಮಗನನ್ನು ಕಟ್ಟಿದ್ದಾನೆ. ಮಗನ ಮೇಲೆ ಜೇನುಹುಳಗಳು ದಾಳಿ ನಡೆಸಿವೆ. ಇದ್ರ ಫೋಟೋ ವನ್ನು ತಾಯಿ ಕ್ಲಿಕ್ಕಿಸಿದ್ದಾಳೆ.ಇದನ್ನೆ ತಂದೆ ವಿರುದ್ಧದ ಸಾಕ್ಷಿಯಾಗಿ ಪಡೆಯಲಾಗ್ತಿದೆ.29 ವರ್ಷದ ಮೊಹ ಮ್ಮದ್ ಡಿ ತಾಯಿ, ಮಕ್ಕಳ ರಕ್ಷಣಾ ಸಂಸ್ಥೆಗೆ ಕರೆ ಮಾಡಿದ್ದಾಳೆ. ಪತಿ ತನ್ನ ಮೇಲೆ ಹಲ್ಲೆ ನಡೆಸಿ ನಂತ್ರ ಮಗನಿಗೆ ಚಿತ್ರಹಿಂಸೆ ನೀಡಿದ್ದಾನೆಂದು ದೂರಿದ್ದಾಳೆ. 34 ವರ್ಷದ ತಂದೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ