ಬೆಂಗಳೂರು –
ಶಿಕ್ಷಕರ ವರ್ಗಾವಣೆ ಕುರಿತಂತೆ ರಾಜ್ಯ ಪತ್ರ ಹೊರ ಬಿದ್ದಿದೆ.ರಾಜ್ಯದಲ್ಲಿನ ಶಿಕ್ಷಕರ ವರ್ಗಾವಣೆ ಕುರಿತು ಸಚಿವ ಸಂಪುಟದಲ್ಲಿ ಈ ಹಿಂದೆ ಅನುಮೋದನೆ ತಗೆದುಕೊಂಡು ನಂತರ ಅದನ್ನು ರಾಜ್ಯಪಾಲರ ಬಳಿ ಅನುಮೋದನೆ ಗಾಗಿ ಕಳಿಸಲಾಗಿತ್ತು. ಸಧ್ಯ ಒಪ್ಪಿಗೆ ನೀಡಿ ವರ್ಗಾವಣೆ ಪ್ರಕ್ರಿಯೆ ಕುರಿತು ರಾಜ್ಯಪತ್ರ ಪ್ರಕಟಗೊಂಡಿದೆ.

ಶಿಕ್ಷಕರ ವರ್ಗಾವಣೆ ಕುರಿತು ಸಾರ್ವಜನಿಕರಿಗೆ ಮಾಹಿತಿ ಇದಾಗಿದೆ.ಇದರಲ್ಲಿ ಯಾರಾದರೂ ಆಕ್ಷೇಪಣೆ ಸಲ್ಲಿಸುವವರಿದ್ದರೆ ಸಲ್ಲಿಸಬಹುದು ಅವರಿಗೆ ಅವಕಾಶ ಇದೆ ಎಂದು ಉಲ್ಲೇಖ ಮಾಡಿ ರಾಜ್ಯ ಪತ್ರವನ್ನು ಬಿಡುಗಡೆ ಮಾಡಲಾಗಿದೆ

ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ 2021 ಎಮನದು ಕರೆಯುವ ಈ ಒಂದು ವರ್ಗಾವಣೆ ಪ್ರಕ್ರಿಯೆ ಆಗಿದೆ.

ಪ್ರಮುಖವಾಗಿ ಕೆಲವು ಅಂಶಗಳನ್ನು ಉಲ್ಲೇಖ ಮಾಡಿ ಈ ಒಂದು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶಿವಕುಮಾರ್ ಈ ಒಂದು ಪತ್ರವನ್ನು ಉಲ್ಲೇಖ ಮಾಡಿ ಸರ್ಕಾರದ ಪರವಾಗಿ ಹೊರಡಿಸದ್ದು ಇನ್ನೂ ವರ್ಗಾವಣೆ ನಿರೀಕ್ಷೆಯಲ್ಲಿರುವ ನಾಡಿನ ಶಿಕ್ಷಕರಿಗೆ ಈ ಒಂದು ಪತ್ರ ಸಂತೋಷವನ್ನುಂಟು ಮಾಡಿದ್ದು ಇನ್ನೂ ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು