ಧಾರವಾಡ ಜಿಲ್ಲೆಯ ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಯತ್ನ ದಿಂದಾಗಿ ಜಿಲ್ಲೆಯಲ್ಲಿ 17 ಕೇಂದ್ರ ಗಳಲ್ಲಿ ಹೆಸರು ಉದ್ದಿನಕಾಳು ಖರೀದಿ ಕೇಂದ್ರ ಆರಂಭ….. ಮಾಹಿತಿ ನೀಡಿದ ಜಿಲ್ಲಾಧಿಕಾರಿ

Suddi Sante Desk

ಧಾರವಾಡ –

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಮತ್ತು ಉದ್ದಿನಕಾಳು ಉತ್ಪನ್ನವನ್ನು ಖರೀದಿಸಲು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಈ ಕುರಿತು ಇಂದು ಪ್ರಕಟಣೆ ಹೊರಡಿಸಿರುವ ಅವರು ಜಿಲ್ಲೆಯಲ್ಲಿ ರೈತರಿಂದ ಹೆಸರು ಕಾಳು ಮತ್ತು ಉದ್ದಿನಕಾಳು ಉತ್ಪನ್ನಗಳನ್ನು ಖರೀದಿಸಲು ಅಕ್ಟೋಬರ್ 13 ರವೆರೆಗೆ ರೈತರು ನೋಂದಣಿ ಮಾಡಿಸಿಕೊಳ್ಳಲು ಹಾಗೂ ನವೆಂಬರ್ 27 ರವರೆಗೆ ಉತ್ಪನ್ನಗಳ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‍ಎಕ್ಯೂ ಗುಣಮಟ್ಟದ ಹೆಸರುಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‍ಗೆ ರೂ.7,755/- ರಂತೆ ಹಾಗೂ ಉದ್ದಿನ ಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‍ಗೆ ರೂ.6,600/- ರಂತೆ ಧಾರವಾಡ ಜಿಲ್ಲೆಯ ರೈತರಿಂದ ಖರೀದಿಸಲಾಗುತ್ತದೆ.
ಬೆಂಬಲಬೆಲೆ ಯೋಜನೆಯಡಿ ಹೆಸರುಕಾಳು ಹಾಗೂ ಉದ್ದಿನಕಾಳು ಉತ್ಪನ್ನಗಳನ್ನು ಮಾರಾಟ ಮಾಡಬಯ ಸುವ ರೈತರು ಆಧಾರ್ ಕಾರ್ಡ್,ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿಯ ದಾಖಲೆಗ ಳೊಂದಿಗೆ ಖರೀದಿ ಕೇಂದ್ರಗಳಿಗೆ ಭೇಟಿ ನೀಡಬಹುದು.
ಅಕ್ಟೋಬರ್ 13 ರವರೆಗೆ ನೋಂದಣಿ ಕಾರ್ಯ ಹಾಗೂ ನವೆಂಬರ್ 27 ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ. ರೈತರಿಂದ ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಖರೀದಿಸಲಾಗುವುದು.ಯಾವುದೇ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೋಗಬಾ ರದು. ಇದರ ಉಪಯೋಗವನ್ನು ರೈತರೇ ನೇರವಾಗಿ ಪಡೆಯಬೇಕು.ಸಮಸ್ಯೆಗಳಿದ್ದಲ್ಲಿ ಧಾರವಾಡ,ಹುಬ್ಬಳ್ಳಿ, ಕುಂದಗೋಳ ಮತ್ತು ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರನ್ನು ಹಾಗೂ ಶಾಖಾ ವ್ಯವಸ್ಥಾಪಕ (0836-2374837)ರನ್ನು ಸಂಪರ್ಕಿಸಬ ಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಹೆಸರುಕಾಳು ಖರೀದಿ ಕೇಂದ್ರಗಳು ಧಾರವಾಡ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ (9916259625), ಹೆಬ್ಬಳ್ಳಿ ಖಾದಿ ಭಂಡಾರ ಗೋದಾಮು (9448424876), ಉಪ್ಪಿನಬೆಟಗೇರಿ (9620048221), ಹುಬ್ಬಳ್ಳಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ ಅಮರಗೋಳ (9008362073), ಹೆಬಸೂರು (9686717509), ಕುಂದಗೋಳ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ (9845169206), ಯರಗುಪ್ಪಿ (9845169206), ಅಣ್ಣಿಗೇರಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ (9986744565), ನವಲಗುಂದ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ (8861008191), ನವಲಗುಂದ ಶ್ರೀವಾರಿ ಫ್ಲೋರ್ ಮಿಲ್ (9886491644), ಮೊರಬ (6361269165), ಶಿರಕೋಳ (9620107330), ತಿರ್ಲಾಪೂರ (8494801475), ಬ್ಯಾಹಟ್ಟಿ (9986211378), ಆರೇಕುರಹಟ್ಟಿ (9845822903), ಹಾಲಕುಸುಗಲ್ಲ (9008575560), ಶಿರೂರ (7349636431) ಸಂಪರ್ಕಿಸಬಹುದು.

ಉದ್ದಿನಕಾಳು ಖರೀದಿ ಕೇಂದ್ರಗಳು ಧಾರವಾಡ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ (9916259625), ಉಪ್ಪಿನಬೆಟಗೇರಿ (9620048221), ಹುಬ್ಬಳ್ಳಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ (9008362073) ಸಂಪರ್ಕಿಸಬಹುದು.ಉತ್ಪನ್ನ ಖರೀದಿ ಸಲು ಅನುಸರಿಸುವ ಕ್ರಮಗಳು: ಬೆಂಬಲಬೆಲೆ ಯೋಜನೆ ಯಡಿ ಖರೀದಿಸಲು ಹೆಸರುಕಾಳು ಹಾಗೂ ಉದ್ದಿನಕಾಳು ಎಫ್.ಎ.ಕ್ಯೂ. ಗುಣಮಟ್ಟ ಹೊಂದಿರಬೇಕು. ಉತ್ಪನ್ನಗಳು ಚನ್ನಾಗಿ ಒಣಗಿರಬೇಕು ಮತ್ತು ತೇವಾಂಶವು ಶೇ.12ಗಿಂತ ಕಡಿಮೆ ಇರಬೇಕು. ಹೆಸರುಕಾಳು ಹಾಗೂ ಉದ್ದಿನಕಾಳು ಉತ್ಪನ್ನವು ಗಾತ್ರ, ಬಣ್ಣ, ಆಕಾರ ಹೊಂದಿರಬೇಕು. ಸ್ವಚ್ಚವಾಗಿರಬೇಕು.ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು.
ರೈತರಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳವು ನೀಡುವ ಗೋಣಿಚೀಲದಲ್ಲಿ ಐವತ್ತು ಕೆ.ಜಿ. ಪ್ರಮಾಣದಲ್ಲಿ ತುಂಬಬೇಕು. ಹೆಸರು ಕಾಳು ಪ್ರತಿ ಎಕರೆಗೆ 4 ಕ್ವಿಂಟಾಲ್‍ನಂತೆ ಪ್ರತಿ ರೈತರಿಂದ ಗರಿಷ್ಟ 15 ಕ್ವಿಂಟಾಲ್ ಮತ್ತು ಉದ್ದಿನಕಾಳು ಪ್ರತಿ ಎಕರೆಗೆ 3 ಕ್ವಿಂಟಾಲ್‍ನಂತೆ ಪ್ರತಿ ರೈತರಿಂದ ಗರಿಷ್ಟ 6 ಕ್ವಿಂಟಾಲ್ ಗುಣಮಟ್ಟದ ಉತ್ಪನವನ್ನು ಖರೀದಿಸಲಾಗುವುದು. ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನೂ ಈ ಒಂದು ಬೇಡಿಕೆ ಕುರಿತು ಧಾರವಾಡ ಜಿಲ್ಲೆಯಲ್ಲಿ ರೈತರು ಸೇರಿದಂತೆ ಹಲವರು ಹೋರಾಟವನ್ನು ಮಾಡಿದ್ದು ಇದೆಲ್ಲಾ ವನ್ನು ಅರಿತುಕೊಂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಜಿಲ್ಲೆಯ ಬಿಜೆಪಿ ಶಾಸಕರ ಪ್ರಯತ್ನ ದಿಂದಾಗಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಕೇಂದ್ರ ಗಳನ್ನು ಆರಂಭಕ್ಕೆ ಸೂಚನೆ ನೀಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.