ಕಲಬುರಗಿ
BEO ಕಚೇರಿಯ FDA ರೊಬ್ಬರು ಎಸಿಬಿ ಬಲೆಗೆ ಬಿದ್ದಿರಯವ ಘಟನೆ ಕಲಬುರಗಿ ಯಲ್ಲಿ ನಡೆದಿದೆ. ಹೌದು ನಿವೃತ್ತಿ ನೌಕರನ ಹಕ್ಕಿನ ರಜೆಯ ಐದು ತಿಂಗಳಿನ ವೇತನ ಬಿಲ್ ಮಾಡಲು 20 ಸಾವಿರ ಬೇಡಿಕೆ ಇಟ್ಟುಎಫ್ ಡಿಎ ಹುಸೇನ್ ಭಾಷಾ ಎನ್ನುವರೇ 20 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕು ಬಿದ್ದಿದ್ದಾರೆ.ಲಂಚ ಪಡೆಯುತ್ತಿ ದ್ದಾಗ ಜಿಲ್ಲೆಯ ಆಳಂದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿ ಕಾರಿ (ಬಿಇಓ) ಕಚೇರಿಯ ಎಫ್ ಡಿಎ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಹೌದು ನಿವೃತ್ತಿ ನೌಕರ ಸಂಗಪ್ಪ ದೇವಣಿ ಅವರ ಐದು ತಿಂಗಳಿನ ಹಕ್ಕಿನ ರಜೆಯ ವೇತನ ಮಂಜೂ ರಾತಿ ಮಾಡಲು ಎಫ್ ಡಿಎ ಹುಸೇನ್ ಭಾಷಾ ಲಂಚ ಕೇಳಿದ್ದರು.ಗುರುವಾರ ಜೂ. 3ರಂದು ಸಂಜೆ ಕಲಬುರಗಿ ನಗರದ ಖಾಸಗಿ ಹೊಟೇಲ್ ಬಳಿ ಸಂಗಪ್ಪ ಅವರ ಪುತ್ರ ದತ್ತುಕುಮಾರ ಎನ್ನುವರಿಂದ ಇಪ್ಪತ್ತು ಸಾವಿರ ಲಂಚ ಪಡೆಯುತ್ತಿರುವಾಗ ಭ್ರಷ್ಟಾ ಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ

ಎಸಿಬಿ ಎಸ್ಪಿ ಮಹೇಶ್ ಮೇಘಣ್ಣವರ ಮಾರ್ಗದರ್ಶ ನದಲ್ಲಿ ನಡೆದ ಈ ಒಂದು ಎಸಿಬಿ ಅಳಿಯಲ್ಲಿ ಡಿಎಸ್ಪಿ ವಿರೇಶ ಕರಡಿಗುಡ್ಡ ಮತ್ತು ಇತರೆ ಸಿಬ್ಬಂದಿಗಳು ಪಾಲ್ಗೊಂಡು ನೇತೃತ್ವದಲ್ಲಿ ದಾಳಿ ನಡೆದಿದ್ದು ಸಧ್ಯ ಏಫ್ ಡಿಎ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಅಧಿಕಾರಿಗಳು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ