ಬೆಂಗಳೂರು –
ರಾಜ್ಯದಲ್ಲಿ ಸಧ್ಯ ದ್ವೀತಿಯ ಪಿಯುಸಿ ಪರೀಕ್ಷೆ ನಡೆಸದಿರಲು ನಿರ್ಧಾರವನ್ನು ಮಾಡಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ಕೋವಿಡ್ ಹಿನ್ನಲೆಯಲ್ಲಿ ಈ ಒಂದು ನಿರ್ಧಾರವನ್ನು ತಗೆದುಕೊಳ್ಳಲಾಗಿದೆ ಎಂದರು
ಕಳೆದ ವರ್ಷ ಒಂದು ಪರಿಸ್ಥಿತಿಯಲ್ಲಿ ನಾವು ಪರೀಕ್ಷೆ ಗಳನ್ನು ಎದುರಿಸಿದ್ದು ಈ ವರ್ಷ ಮತ್ತೊಂದು ಪರಿಸ್ಥಿತಿಯನ್ನು ಎದುರಿಸಿದ್ದು ನಾವುಗಳು ಹೀಗಾಗಿ ಈ ಒಂದು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಈ ಒಂದು ಪರೀಕ್ಷೆ ಗಳನ್ನು ನಡೆಸಬೇಕೆ ಬೇಡ ಕುರಿತು ಎಲ್ಲರೊಂದಿಗೆ ಚರ್ಚೆ ಮಾಡಲಾಗಿದೆ ಅಂತಿಮವಾಗಿ ಈ ಒಂದು ನಿರ್ಧಾರಕ್ಕೆ ಬರಲಾಯಿತು ಜೊತೆಯಲ್ಲಿ ಕಳೆದ ವರ್ಷಗಳ ಪಿಯುಸಿ ಪ್ರಥಮ ವರ್ಷದ ಫಲಿತಾಂಶ ವನ್ನು ನೋಡಿ ಗ್ರೇಡ್ ನೀಡಲಾಗುತ್ತದೆ ಈ ಒಂದು ಕುರಿತು ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ. ಮಾಡಲಾಗುತ್ತದೆ.ಇನ್ನೂ ಇದರೊಂದಿಗೆ ಯಾರಾದರೂ ಪರೀಕ್ಷೆ ಮಾಡಿ ಎಂದರೆ ಅಂತಹ ಮಕ್ಕಳಿಗೆ ಕೋವಿಡ್ ಕಡಿಮೆಯಾದ ಮೇಲೆ ಪರೀಕ್ಷೆ ಮಾಡಲಾಗುತ್ತದೆ ಎಂದರು
SSLC ಪರೀಕ್ಷೆ ನಡೆಸಲು ತೀರ್ಮಾನ
ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು ಮಾಡಲು ಯಾವುದೇ ಅವಕಾಶ ಅನುಕೂಲ ಇಲ್ಲದ ಹಿನ್ನಲೆಯಲ್ಲಿ ಪರೀಕ್ಷೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ವಿಜ್ಞಾನ,ಗಣಿತ, ಸಮಾಜ ಸೇರಿ ಒಂದೇ ಐಚ್ಛಿಕ ವಿಷಯಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಬಹು ಆಯ್ಕೆ ಐಚ್ಛಿಕ ಭಾಷೆಯಲ್ಲಿ ಪರೀಕ್ಷೆ ನಡೆಯಲಿದ್ದು ಜುಲೈ ತಿಂಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಇಪ್ಪತ್ತು ದಿನಗಳ ಮುಂಚಿತವಾಗಿ ತಿಳಿಸಲಾಗುತ್ತದೆ. ಒಂದೇ ಕೊಠಡಿಯಲ್ಲಿ ಹತ್ತರಿಂದ ಹದಿನೈದು ಮಕ್ಕಳು ಕುಳಿತುಕೊಳ್ಳಲು ಅವಕಾಶ ನೀಡಲಾಗುತ್ತದೆ ಈ ಒಂದು ಕುರಿತು ಎಲ್ಲಾ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು ಅಲ್ಲದೇ ಶೀಘ್ರದಲ್ಲೇ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಲಾಗುತ್ತದೆ ಜೊತೆಯಲ್ಲಿ ಪ್ರಮುಖವಾಗಿ ಈ ಒಂದು ಪರೀಕ್ಷೆ ಯಿಂದಾಗಿ ಮಕ್ಕಳ ಶಿಕ್ಷಕರ ಕಲಿಕಾ ಗುಣಮಟ್ಟ ಸಿಗಲಿದೆ ಎಂದರು.