OTS ಗಾಗಿ ಸಿರಿಗೇರಿಯತ್ತ ಮುಖ ಮಾಡಿದ ನಾಡಿನ ಶಿಕ್ಷಕರು ರಾಜ್ಯದ ಮೂಲೆ ಮೂಲೆಗಳಿಂದ ನ್ಯಾಯ ಪೀಠದ ಮುಂದೆ ವರ್ಗಾವಣೆಗಾಗಿ ನ್ಯಾಯ ಕೇಳಲು ಹೊರಟಿದ್ದಾರೆ ಶಿಕ್ಷಕ ಬಂಧುಗಳು…..

Suddi Sante Desk

ಬೆಂಗಳೂರು –

ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕವಾದ ವರ್ಗಾವಣೆಯ ನೀತಿ ನಿಯಮಗಳಿಂದಾಗಿ ತಂದೆ ತಾಯಿ ಬಂಧು ಬಳಗ ಹೆಂಡತಿ ಮಕ್ಕಳು ಹೀಗೆ ಎಲ್ಲರನ್ನೂ ಮರೆತು ದಿಕ್ಕಾಪಾಲಾಗಿ ನೆಮ್ಮದಿ ಇಲ್ಲದೇ ಶಿಕ್ಷಕರು ತಮ್ಮ ಸ್ವಂತ ಜಿಲ್ಲೆಯಿಂದ ನೂರಾರು ಕಿಲೋ ಮೀಟರ್ ದೂರದಲ್ಲಿದ್ದು ಕೊಂಡು ಶಿಕ್ಷಕರಾಗಿ ಕರ್ತವ್ಯವನ್ನು ಮಾಡುತ್ತಿದ್ದಾರೆ.

ಎಲ್ಲರ ಹಾಗೇ ಒಮ್ಮೆಯಾದರೂ ನಮ್ಮ ಸ್ವಂತ ಜಿಲ್ಲೆಗೆ ಹೋಗಲು ಅವಕಾಶ ಕೊಡಿ ಎಂದು ಕೇಳಿ ಕೇಳಿ ಬೇಸತ್ತಿ ರುವ ಶಿಕ್ಷಕರ ನೋವಿಗೆ ಯಾರು ಸ್ಪಂದಿಸುತ್ತಿಲ್ಲ ನೋಡು ತ್ತಿಲ್ಲ ಒಂದೆರೆಡು ಬಾರಿ ಬೆಂಗಳೂರು ಚಲೋ ಮಾಡಿ ಮಾಡಿ ಬೇಸತ್ತಿರುವ ಶಿಕ್ಷಕರು ಈ ಪೈನಲ್ ಆಗಿ ನಾಡಿನ ಹೆಸರಾಂತ ಮಠಗಳಲ್ಲಿ ಒಂದಾಗಿರುವ ಸಿರಿಗೇರಿಯ ತರಳಬಾಳು ಮಠಕ್ಕೆ ಹೊರಟಿದ್ದಾರೆ.

ಹೌದು ಈ ಒಂದು ಮಠದಲ್ಲಿ ನ್ಯಾಯಪೀಠ ವೊಂದು ಇದೆ ಹೀಗಾಗಿ ಎಲ್ಲೂ ಸಿಗಲಾರದ ಗೆಲುವು ಈ ಒಂದು ಪೀಠದಲ್ಲಿ ಸಿಗುತ್ತದೆ ಎಂಬ ಬಲವಾದ ನಂಬಿಕೆ ಈಗಲೂ ಇದೆ ಈ ಒಂದು ಹಿನ್ನಲೆಯಲ್ಲಿ ಕಳೆದೊಂದು ತಿಂಗಳ ಹಿಂದೆ ನ್ಯಾಯ ಪೀಠಕ್ಕೆ ಒಟಿಎಸ್ ವಿಚಾರ ಕುರಿತಂತೆ ಅರ್ಜಿಯನ್ನು ಹಾಕ ಲಾಗಿತ್ತು ಈ ಒಂದು ಅರ್ಜಿಯ ವಿಚಾರಣೆ ನಾಳೆ ನ್ಯಾಯ ಪೀಠದ ಮುಂದೆ ಬರಲಿದ್ದು ಹೀಗಾಗಿ ಸ್ವಂತ ಜಿಲ್ಲೆಯ ವರ್ಗಾವಣೆ ನಿರೀಕ್ಷೆಯಲ್ಲಿರುವ ಸಾವಿರಾರು ಶಿಕ್ಷಕರು ರಾಜ್ಯದ ಮೂಲೆ ಮೂಲೆಗಳಿಂದ ಮಠದತ್ತ ಮುಖ ಮಾಡಿದ್ದಾರೆ.

ಏನಾದರೂ ಆಗಲಿ ಮೊದಲು ನಾವು ಕೂಡಾ ಸ್ವಂತ ಜಿಲ್ಲೆಗೆ ಹೋಗಬೇಕು ತಂದೆ ತಾಯಿ ಬಂಧು ಬಳಗ ಹೆಂಡತಿ ಮಕ್ಕಳೊಂದಿಗೆ ನಾವು ಕೂಡಾ ಇರಬೇಕು ನೆಮ್ಮದಿಯಿಂದ ನೌಕರಿ ಮಾಡಬೇಕು ಎಂದುಕೊಂಡಿರುವ ನಾಡಿನ ಅದೇಷ್ಟೋ ಶಿಕ್ಷಕರು ಸಾವಿರಾರು ಕಿಲೋ ಮೀಟರ ದೂರ ದೂರದಿಂದ ಹೊರಟಿದ್ದಾರೆ.

ನಾಳೆ ಜಗದ್ಗುರು ತರಳಬಾಳು ಸಿರಿಗೇರಿ ಮಠದ ನ್ಯಾಯ ಪೀಠದ ಮುಂದೆ ಈ ಒಂದು ಅರ್ಜಿಯ ವಿಚಾರಣೆ ಬರಲಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಮುಖ ಮಾಡಿದ್ದು ನ್ಯಾಯ ಕೇಳಲು ಹೊರಟಿದ್ದಾರೆ

ಶಿಕ್ಷಕ ಬಂಧುಗಳು ಈವರೆಗೆ ರಾಜ್ಯ ಸರ್ಕಾರ ಶಿಕ್ಷಣ ಸಚಿವರು ಸಂಘಟನೆಯ ನಾಯಕರನ್ನು ನಂಬಿ ಕೊಂಡು ಕುಳಿತಿರುವ ಶಿಕ್ಷಕರು ಈಗ ಸಿರಿಗೇರಿ ಮಠದ ನ್ಯಾಯಪೀ ಠಕ್ಕೆ ಮೊರೆ ಹೋಗಿದ್ದಾರೆ ನಾಡಿನ ಒಟಿಎಸ್ ಶಿಕ್ಷಕರು ಮಠದ ನ್ಯಾಯಪೀಠ ದಲ್ಲಿ ನ್ಯಾಯ ಸಿಗಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡು ತರಳಬಾಳು ಸಿರಿಗೇರಿ ಮಠದತ್ತ ಮುಖ ಮಾಡಿದ್ದಾರೆ.

ಒಟಿಎಸ್ ಸಂಘಟನೆಯ ಮಹೇಶ್ ಮಡ್ಡಿ ಮತ್ತು ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾ ಗಿರುವ ಪವಾಡೆಪ್ಪ ಅವರ ನೇತ್ರತ್ವದಲ್ಲಿ ಶಿಕ್ಷಕರ ಬಳಗ ಹೊರಟಿದ್ದು ನಾಳೆ ಅರ್ಜಿ ವಿಚಾರಣೆ ನಡೆಯಲಿದ್ದು ದೇವರು ನೊಂದುಕೊಂಡಿರುವ ಶಿಕ್ಷಕರ ಆಸೆಯನ್ನು ಈಡೇರಿಸಲಿ ಒಳ್ಳೇಯದಾಗಲಿ

ಎಲ್ಲರ ಹಾಗೆ ಇವರಿಗೂ ಕೂಡಾ ಸ್ವಂತ ಜಿಲ್ಲೆಗೆ ಹೋಗುವ ಅವಕಾಶ ಸಿಗಲಿ ನಾಳೆಯ ನ್ಯಾಯಪೀಠದಲ್ಲಿ ಗೆಲುವು ಸಿಗಲೆಂದು ಆ ದೇವಾನು ದೇವತೆಗಳಲ್ಲಿ ಶಿಕ್ಷಕರ ಪರವಾಗಿ ಸುದ್ದಿ ಸಂತೆ ಬಳಗ ಪ್ರಾರ್ಥನೆಯನ್ನು ಮಾಡುತ್ತಿದೆ.ಆಲ್ ದಿ ಬೆಸ್ಟ್ ಶಿಕ್ಷಕ ಬಂಧುಗಳೇ ಗೆಲುವು ನಿಮ್ಮದಾಗಲಿ ಒಳ್ಳೇಯ ಬೇಡಿಕೆಯ ನ್ನಿಟ್ಟುಕೊಂಡು ಹೊರಟಿರುವ ನಿಮಗೆ ಗೆಲುವು ಸಿಗಲಿ ಶುಭವಾಗಲಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.