ಬೆಂಗಳೂರು –
COVID-19 ರ 2 ನೇ ಅಲೆಯ ಅಬ್ಬರದಿಂದ ದೇಶದಾದ್ಯಂತ ಹೆಚ್ಚು ಸಾವು ನೋವುಗಳು ಆಗುತ್ತಿದ್ದು ನಮ್ಮ ರಾಜ್ಯದಲ್ಲಿ 5,00,000 ಕ್ಕಿಂತ ಹೆಚ್ಚು ಕೊರೋನ +Ve ಪ್ರಕರಣಗಳು ಕಂಡು ಬಂದು ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ.
ಇನ್ನೂ 30,000 ಕ್ಕಿಂತ ಹೆಚ್ಚು ಸಾವುಗಳನ್ನು ತೆಗೆದುಕೊಂಡಿರುವುದರಿಂದ 3 ನೇ ಅಲೆಯಲ್ಲಿ ಈ ವೈರಸ್ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ತಜ್ಞ ವೈದ್ಯರು ಅಭಿಪ್ರಾಯ ನೀಡಿರುವುದರಿಂದ ಮಕ್ಕಳ ಪ್ರಾಣಗಳನ್ನು ಉಳಿಸಲು 2021 ನೇ ಸಾಲಿನ SSLC PUC ಪರೀಕ್ಷೆಗಳನ್ನು ರದ್ದು ಮಾಡಬೇಕು ಅಥವಾ ಆನ್ಲೈನ್ ನಲ್ಲಿ ಪರೀಕ್ಷೆ ಮಾಡಲಿ ಅಥವಾ ಆಯಾ ಕಾಲೇಜ್ ಗಳಲ್ಲಿ ಮೌಲ್ಯಮಾಪನ ಮಾಡಿ ಗ್ರೇಡ್ ನೀಡಲಿ ಎಂದು ಒಂದು ತಿಂಗಳಿಂದ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಧ್ವನಿ ಎತ್ತಿದವರು ಶಿಕ್ಷಣ ತಜ್ಞರು, ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರಾದ ಆರ್.ನಾರಾಯಣ ಸ್ವಾಮಿ ಚಿಂತಾಮಣಿ.
ಚಿಕ್ಕಬಳ್ಳಾಪುರ ಜಿಲ್ಲೆಯ ನಾರಾಯಣಸ್ವಾಮಿ ಅವರೊಂದಿಗೆ ಧಾರವಾಡ ಜಿಲ್ಲೆಯ ಹಿರಿಯ ಶಿಕ್ಷಕ ಮತ್ತು ಮಕ್ಕಳ ಶಿಕ್ಷಣ ತಜ್ಞರಾದ ಎಲ್ ಐ. ಲಕ್ಕಮ್ಮ ನವರ್ ಗೌರವಾಧ್ಯಕ್ಷರು ಇವರು ಕೂಡಾ ನಿರಂತರ ವಾಗಿ ಧ್ವನಿ ಎತ್ತಿದ್ದರು
ಇವರೊಂದಿಗೆ ರಾಜ್ಯ ಉಪಾಧ್ಯಕ್ಷರು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೆ ನಾಗರಾಜ್ ಇವರ ಧ್ವನಿಯಾಗಿ ಧ್ವನಿ ಎತ್ತಿದರು.
ನಿರಂತರವಾಗಿ ವರದಿ ಯನ್ನು ಪ್ರಕಟ ಮಾಡಿದ ಸುದ್ದಿ ಸಂತೆಯ ಟೀಮ್ ನ ಸರ್ವ ಸದಸ್ಯರು ಇವರು ಮಾಧ್ಯಮದ ಮೂಲಕ ಬೆಳಕು ಚೆಲ್ಲಲು ಪ್ರಸ್ತಾಪಿಸಿ ನಿರಂತರವಾಗಿ ಬೆಳಕು ಚೆಲ್ಲಿ ಶಿಕ್ಷಣ ತಜ್ಞರು,ಪೋಷಕರು,ಜನಪ್ರತಿನಿಧಿಗಳು ಅದರಲ್ಲಿ ವಾಟಾಳ್ ನಾಗರಾಜ್ ರವರು ಮಾಧ್ಯಮದ ಮೂಲ ಕ ಧ್ವನಿ ಎತ್ತಿದರು,ಎಲ್ಲಾ ಮಾಧ್ಯಮಗಳಲ್ಲಿ ಬೆಳಕು ಚೆಲ್ಲಲು ಪ್ರಯತ್ನಿಸಲಾಯಿತು.ಅದರ ಪ್ರತಿಫಲ ದಿಂದ ಕೇಂದ್ರ ಸರ್ಕಾರ CBSE ,ICSE ಪರೀಕ್ಷೆ ಗಳನ್ನು ರದ್ದು ಪಡಿಸಿರುವ ಹಿನ್ನಲೆಯಲ್ಲಿ ನಮ್ಮ ರಾಜ್ಯ ಸರ್ಕಾರವು ಸಹ ಶಿಕ್ಷಣ ತಜ್ಞರ, ಪೋಷಕರ, ವಿದ್ಯಾರ್ಥಿಗಳ,ಜನಪ್ರತಿನಿಧಿಗಳ ಒತ್ತಾಯದ ಮೇರೆ ಗೆ ಇಂದು ಕರ್ನಾಟಕ ಸರ್ಕಾರದ ಮಾನ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಪತ್ರಿಕಾ ಘೋಷ್ಠಿಯಲ್ಲಿ ದ್ವಿತೀಯ PUC ರದ್ದು ಮಾಡಲಾಗಿ ದೆ ಎಂದು ಘೋಷಿಸಿದರು.SSLC ಪರೀಕ್ಷೆ ಗಳನ್ನು ಸರಳವಾಗಿ ಎರಡೇ ದಿನದಲ್ಲಿ ಮುಗಿದಲಾಗುವು ದೆಂದು ತಿಳಿಸಿದರು.ಮುಖ್ಯ ಮಂತ್ರಿಗಳು ಬೆಳಗಾವಿ ಯಲ್ಲಿನ ಪತ್ರಿಕಾ ಗೋಷ್ಟಿ ಯಲ್ಲಿ ಕೊರೋನ ಕಡಿಮೆ ಯಾದರೆ ಪರೀಕ್ಷೆ ಮಾಡುವುದು ಇಲ್ಲದೇ ಇದ್ದರೆ ರದ್ದು ಮಾಡುವುದು ಎಂದು ತಿಳಿಸಿದರು.ಆದ್ದರಿಂದ R. ನಾರಾಯಣ ಸ್ವಾಮಿ ಚಿಂತಾಮಣಿ ರವರ ಪ್ರಥಮ ಹೋರಾಟದ ಧ್ವನಿಗೆ ಮಾಧ್ಯಮಗಳು ನಿರಂತರವಾಗಿ ಬೆಳಕು ಚೆಲ್ಲಿ 15,00,000 ಮಕ್ಕಳ ಪ್ರಾಣಗಳನ್ನು ಉಳಿಸಿದ ಕರ್ನಾಟಕ ಸರ್ಕಾರ PUC ಪರೀಕ್ಷೆಗಳನ್ನು ರದ್ದುಗೊಳಿಸಿದ್ದಕ್ಕೆ ಶಿಕ್ಷಣ ತಜ್ಞರ, ಜನಪ್ರತಿನಿಧಿಗಳ, ಪೋಷಕರ, ಸಾರ್ವಜನಿಕರ, ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಇನ್ನೂ ಇವರಿಗೆ ಧ್ವನಿಯಾಗಿ ಹೋರಾಟ ಮಾಡಿದ ಧಾರವಾಡ ಜಿಲ್ಲೆಯ ಹಿರಿಯ ಶಿಕ್ಷಕ ಮತ್ತು ಮಕ್ಕಳ ಶಿಕ್ಷಣ ತಜ್ಞರಾದ ಎಲ್ ಐ. ಲಕ್ಕಮ್ಮನವರ್, ಇವರೊಂದಿಗೆ ರಾಜ್ಯ ಉಪಾಧ್ಯ ಕ್ಷರು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೆ ನಾಗರಾಜ್ ಇವರು ಧನ್ಯ ವಾದಗಳನ್ನು ಹೇಳಿದ್ದಾರೆ.ಇನ್ನೂ ಇವರೆಲ್ಲದರ ಧ್ವನಿಯಾಗಿ ಕೆಲಸ ಕಾರ್ಯ ನಿರ್ವಹಿಸಿ ನಿರಂತರ ವಾಗಿ ವರದಿಯನ್ನು ಪ್ರಕಟ ಮಾಡಿದ ಸುದ್ದಿ ಸಂತೆ ಯ ಟೀಮ್ ನ ಸರ್ವ ಸದಸ್ಯರಿಗೆ ಧನ್ಯವಾದಗಳನ್ನು ಹೇಳಿ ಅಭಿನಂದಿಸಿದ್ದಾರೆ ಇವರ ಧ್ವನಿಯಾಗಿ ವರದಿ ಮಾಡಿದ್ದ ಸುದ್ದಿ ಸಂತೆ ಗೆ ಸಾರ್ಥಕ ಗೆಲುವು ಸಿಕ್ಕಿದೆ