ಕಲಘಟಗಿ –
ಮಾಜಿ ಸಚಿವ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂತೋಷ ಲಾಡ್ ಸಧ್ಯ ಅಧಿಕಾರದಲ್ಲಿಲ್ಲ ಆದರೂ ಕೂಡಾ ಕ್ಷೇತ್ರದ ಜನರಿಗಾಗಿ ಮಹಾನ್ ಕಾರ್ಯವನ್ನು ಮಾಡ್ತಾ ಇದ್ದಾರೆ.
ಸಾಮಾನ್ಯವಾಗಿ ಅಧಿಕಾರದಲ್ಲಿದ್ದವರು ಅಲ್ಲವೇ ಸರ್ಕಾರ ಸಂಸದರು ಸಚಿವರು ಮಾಡಬೇಕಾದ ಕಾರ್ಯವನ್ನು ಸಧ್ಯ ಸಂತೋಷ ಲಾಡ್ ಮಾಡಲು ಸಿದ್ದತೆ ನಡೆಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಎಲ್ಲರಿಗೂ ತೊಂದರೆಯಾಗಿದ್ದು ದುಡಿಯುವ ಕೈಗಳಿಗೆ ಸಮಸ್ಯೆಯಾಗಿದ್ದು ಇನ್ನೂ ಇದರಿಂದ ಹಸಿದ ಹೊಟ್ಟೆಗಳಿಗೆ ತೊಂದರೆಯಾಗಬಾರದೆಂಬ ಕಾರಣದಿಂದಾಗಿ ಮಾಜಿ ಸಚಿವ ಸಂತೋಷ ಲಾಡ್ ಅವರು ಕ್ಷೇತ್ರದ ಜನರ ಪ್ರತಿಯೊಬ್ಬರಿಗೂ ನೆರವಾಗು ತ್ತಿದ್ದಾರೆ.
ಅದೂ ಅನ್ನದ ರೂಪದಲ್ಲಿ. ಹೌದು ಸಾಮಾನ್ಯವಾಗಿ ಪ್ರತಿಯೊಂದರಲ್ಲೂ ವಿಶೇಷವಾಗಿ ಕಂಡು ಬರುವ ಇವರು ಈಗ ಲಾಡ್ ಡೌನ್ ನಿಂದಾಗಿ ಕ್ಷೇತ್ರದಲ್ಲಿನ ಜನರಿಗೆ ಯಾವುದಾದರೂ ರೂಪದಲ್ಲಿ ನೆರವಾಗ ಬೇಕು ಎಂಬ ಒಂದು ಕಾರಣಕ್ಕಾಗಿ ಸಂತೋಷ ಲಾಡ್ ಅವರು ಕ್ಷೇತ್ರದ 50 ಸಾವಿರ ಕುಟುಂಬಗಳಿಗೆ ಅಕ್ಕಿಯನ್ನು ವಿತರಣೆ ಮಾಡ್ತಾ ಇದ್ದಾರೆ.
ಈಗಾಗಲೇ ಉತ್ತಮ ಗುಣಮಟ್ಟದ ಒಳ್ಳೇಯ ಅಕ್ಕಿ ಯನ್ನು ನಾಲ್ಕೈದು ಲೋಡ್ ತರಿಸಿದ್ದು ಕಲಘಟಗಿ ಯ ಅಮೃತ ನಿವಾಸದಲ್ಲಿ ಸಂತೋಷ ಲಾಡ್ ಅವರ ಆಪ್ತರಾದ ಎನ್ ಎಮ್, ಹರೀಶಂಕರ್,
ಸೋಮಶೇಖರ್ ಬೆನ್ನರೂ,ಇನ್ನೂ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಎಸ್ ಆರ್ ಪಾಟೀಲ್, ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಮಂಜುನಾಥ ಮುರಳಿ,
https://youtu.be/CPR’s
ಇನ್ನೂ ಗಂಗಾಧರ ಸೇರಿದಂತೆ ಐದಾರು ಜನರ ನೇತ್ರತ್ವದಲ್ಲಿ ಕ್ಷೇತ್ರದ ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಬಳ್ಳಾರಿ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಬಂದ ಉತ್ತಮ ಗುಣಮಟ್ಟದ ಅಕ್ಕಿಯನ್ನು ಪ್ಯಾಕಿಂಗ್ ಮಾಡುತ್ತಿದ್ದಾರೆ.
ಒಬ್ಬನೇ ಊಟ ಮಾಡುವುದಕ್ಕಿಂತ ಎಲ್ಲರೂ ಸೇರಿ ಕೊಂಡು ಊಟ ಮಾಡಿದರೆ ಚಂದ ಎಂಬ ಮಾತಿನಂತೆ ಬಂದ ಅಕ್ಕಿಯನ್ನು ಜನರಿಗೆ ವಿತರಣೆಗೆ ಮಾಡಲು ಪ್ಯಾಕಿಂಗ್ ಮಾಡ್ತಾ ಇದ್ದಾರೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಪ್ಯಾಕಿಂಗ್ ಕಾರ್ಯ ನಡೆಯುತ್ತಿದ್ದು ಹೀಗಾಗಿ ಇನ್ನೇರೆಡು ದಿನಗಳಲ್ಲಿ ಐವತ್ತು ಸಾವಿರ ಪಾಕೇಟ್ ಗಳು ಸಿದ್ದವಾಗಲಿದ್ದು ನಂತರ ಸಂತೋಷ ಲಾಡ್ ಬಂದ ನಂತರ ವಿತರಣೆಯ ಕಾರ್ಯಕ್ಕೆ ಚಾಲನೆ ಸಿಗಲಿದೆ.
ಇನ್ನೂ ಪ್ರಮುಖವಾಗಿ ಸಾಮಾನ್ಯವಾಗಿ ಅಧಿಕಾರ ದಲ್ಲಿರಬೇಕಾದ ಸರ್ಕಾರ ಸಚಿವರು ಶಾಸಕರು ಈ ಒಂದು ಕಾರ್ಯವನ್ನು ಮಾಡಬೇಕು ಆದರೆ ಈ ಹಿಂದೆ ಅಧಿಕಾರವನ್ನು ನೀಡಿದ ಕ್ಷೇತ್ರದ ಜನರ ಪ್ರೀತಿ ಗೆ ಸಂತೋಷ ಲಾಡ್ ನೆರವಾಗುತ್ತಿದ್ದು ಅದೂ ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಕ್ಷೇತ್ರದ ಬರೊಬ್ಬರಿ 50 ಕುಟುಂಬಗಳಿಗೆ ಒಳ್ಳೇಯ ಗುಣಮಟ್ಟದ ಅಕ್ಕಿ ಯನ್ನು ನೀಡಿ ಮತ್ತೊಮ್ಮೆ ಅಧಿಕಾರ ಇಲ್ಲದಿದ್ದರೂ ಕೂಡಾ ನೆರವಾಗುತ್ತಿದ್ದಾರೆ
ಇದಕ್ಕೆ ಅನ್ನೊದು ಸಂತೋಷ ಲಾಡ್ ಅಂದರೆ ಅಧಿಕಾರ ಇದ್ದರೂ ಅದೇ ಗುಣ ಇಲ್ಲದಿದ್ದರೂ ಅದೇ ಗುಣ ಅದೇ ಪ್ರೀತಿ ಇವರೊಂದಿಗೆ ಈಗ ತಾಲ್ಲೂಕಿನ ಅಪಾರ ಅಭಿಮಾನಿಗಳು ಕಾರ್ಯಕರ್ತರು ಮುಖಂ ಡರು ನಿಂತುಕೊಂಡು ಕಳೆದ ನಾಲ್ಕೈದು ದಿನಗಳಿಂದ ಪ್ಯಾಕಿಂಗ್ ಕಾರ್ಯದಲ್ಲಿ ತೊಡಗಿದ್ದು ಶೀಘ್ರದಲ್ಲೇ ವಿತರಣೆ ಕಾರ್ಯ ನಡೆಯಲಿದೆ