ಶಿವಮೊಗ್ಗ –
ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿ PSI ರೊಬ್ಬರು ಮೃತರಾಗಿದ್ದಾರೆ. ಹೌದು ಕೋವಿಡ್‌ನಿಂದ ಬಳಲುತ್ತಿದ್ದ ಭದ್ರಾವತಿ ಸಂಚಾರ ಠಾಣೆ ಪಿಎಸ್‌ಐ ಕೆ.ಬಿ.ರಮೇಶ್ ಶುಕ್ರವಾರ ನಿಧನರಾಗಿದ್ದಾರೆ

ಹೌದು ಕರ್ತವ್ಯದಲ್ಲಿದ್ದಾಗಲೇ ಮೇ 14 ರಂದು ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು.ಮನೆ ಯಲ್ಲೇ ಐಸೋಲೇಷನ್‌ನಲ್ಲಿದ್ದರು.ಉಸಿರಾಟದ ತೊಂದರೆ ಕಾಣಿಸಿಕೊಂಡ ನಂತರ ಅಸ್ಪತ್ರೆಗೆ ದಾಖಲಿ ಸಲಾಗಿತ್ತು.ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪ ಟ್ಟಿದ್ದಾರೆ

ಸಾಗರ ತಾಲ್ಲೂಕು ಬಾಳೆಗುಂಡಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಇನ್ನೂ ಮೃತರಾದ ಪೊಲೀಸ್ ಅಧಿಕಾರಿಗೆ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ಸೂಚಿಸಿದರು