ಧಾರವಾಡ –
ರಾಜ್ಯದಲ್ಲಿ ಮುಖ್ಯಮಂತ್ರಿಯಡಿಯೂರಪ್ಪ ಮತ್ತೊಂದು ಲಾಕ್ ಡೌನ್ ಜೂನ್ 14 ರವರೆಗೆ ವಿಸ್ತರಣೆ ಮಾಡಿದ ಬೆನ್ನಲ್ಲೇ ಧಾರವಾಡದಲ್ಲೂ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಕೂಡಾ ಲಾಕ್ ಡೌನ್ ವಿಸ್ತರಣೆ ಮಾಡಿ ಕೆಲವೊಂದಿಷ್ಟು ನಿಯಮ ಗಳನ್ನು ಜಿಲ್ಲೆಯಲ್ಲಿ ಸಡಿಲಿಕೆ ಮಾಡಿ ಹೊಸದೊಂದು ಆದೇಶವನ್ನು ಮಾಡಿದ್ದಾರೆ. ಹೌದು ಈವರಗೆ ಇದ್ದ ನಿಯಮಗಳು ಜೂನ್ 7 ರಿಂದ ಜಿಲ್ಲೆಯಲ್ಲಿ ಕಿರಾಣಿ, ದಿನಸಿ, ಬೇಕರಿ,ಹಣ್ಣ, ತರಕಾರಿ,ಹಾಲು ಮಾಂಸ, ಮೀನು,ಪಶು ಆಹಾರ ಸೇರಿದಂತೆ ಕೆಲವೊಂದಿಷ್ಟು ಅಂಗಡಿಗಳ ಆರಂಭಕ್ಕೆ ಅವಕಾಶ ನೀಡಿದ್ದಾರೆ. ಪ್ರತಿ ದಿನ ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ಮಾರಾಟ ಕ್ಕೆ ಅವಕಾಶವನ್ನು ನೀಡಿ ಜಿಲ್ಲಾಧಿಕಾರಿ ಹೊಸ ನಿಯ ಮಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ನೀಡಿ ದ್ದಾರೆ.

ಇನ್ನೂ ಪ್ರಮುಖವಾಗಿ ಜಿಲ್ಲೆಯಲ್ಲಿ ಮಧ್ಯದ ಅಂಗಡಿ ಗಳಲ್ಲಿ ಮಧ್ಯವನ್ನು ಮಾರಾಟ ಮಾಡಲು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆ ಯವರೆಗೆ ಕೇವಲ ಪಾರ್ಸಲ್ ಗಾಗಿ ಅವಕಾಶವನ್ನು ನೀಡಿದ್ದಾರೆ. ಎರಡು ಗಂಟೆಗಳ ಹೆಚ್ಚಿನ ಸಮಯವನ್ನು ಮಧ್ಯ ಮಾರಾಟಕ್ಕೆ ಅವಕಾಶವನ್ನು ನೀಡಿದ್ದಾರೆ

ಇನ್ನೂ ಇದರೊಂದಿಗೆ ಹೊಟೇಲ್ ಗಳಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ 8 ಗಂಟೆ ಯವರೆಗೆ ಹೊಟೇಲ್ ಗಳಿಗೆ ಕೇವಲ ಮನೆಗಳಿಗೆ ಮಾತ್ರ ಡಿಲೇವರಿ ಮಾಡ ಲು ಅವಕಾಶ ನೀಡಿದ್ದಾರೆ

ಈ ಒಂದು ಹೊಸ ನಿಯಮಗಳು ಜೂನ್ 7 ರಿಂದ ಬೆಳಿಗ್ಗೆ 6 ಗಂಟೆ ಯಿಂದ ಜಾರಿಯಾಗಿ ಜೂನ್ 14 ರವರೆಗೆ ಮಾತ್ರ ಅವಕಾಶವನ್ನು ನೀಡಿರುವ ಜಿಲ್ಲಾಧಿ ಕಾರಿಗಳು ಹೊಸ ಆದೇಶ ಮಾಡಿದ್ದಾರೆ ಇದರೊಂದಿ ಗೆ ಪ್ರಮುಖವಾಗಿ ಮಾಸ್ಕ್ ಧರಿಸಿಕೊಂಡು ಅನಾವ ಶ್ಯಕವಾಗಿ ತಿರುಗಾಡದೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜಿಲ್ಲಾಡಳಿತದೊಂದಿಗೆ ಸಹಕರಿ ಸುವಂತೆ ವಿನಂತಿಯನ್ನು ಮಾಡಿಕೊಂಡಿದ್ದಾರೆ.