ಧಾರವಾಡ –
ವಿದ್ಯಾನಗರಿ ಧಾರವಾಡದಲ್ಲಿ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ರಾಜ್ಯ ಘಟಕ ಹುಬ್ಬಳ್ಳಿ ಹಾಗೂ ಜಿಲ್ಲಾ ಘಟಕ ಧಾರವಾಡ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಅಂತರ್ಜಾಲ ಮಳೆ ಸಂಭ್ರಮ ಕವಿಗೋಷ್ಠಿಯನ್ನು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿತ್ತು

ದಿನಾಂಕ 06:06 :2021 ರಂದು ಆಯೋಜಿಸಿದ ಈ ಒಂದು ಗೋಷ್ಠಿಯಲ್ಲಿ ನಾಡಿನ ಶಿಕ್ಷಕ ಕವಿಪುಂಗವ ರಿಂದ ಕವನವಾಚನ ಮಾಡುತ್ತಿರುವುದು ಶ್ಲಾಘ ನೀಯ ಎಂದು ಶಿಕ್ಷಣ ತಜ್ಞರು ರಾಜ್ಯ ಸಂಪನ್ಮೂಲ ವ್ಯಕ್ತಿಗಳು ವಿದ್ಯಾಕಾಶಿ ಆದರ್ಶ ಶಿಕ್ಷಕರು,ಶಿಕ್ಷಣ ಇಲಾಖೆಯ ನಿವೃತ್ತ ಶಿಕ್ಷಕರು,ಮಾರ್ಗದರ್ಶಕರಾದ ಹಾಗೂ ವಾಗ್ಮಿಗಳಾದ ಮಲ್ಲಿಕಾರ್ಜುನ ಚಿಕ್ಕಮಠ ರವರು ಮಳೆ ಸಂಭ್ರಮದ ಶಿಕ್ಷಕರ ಕವಿಗೋಷ್ಠಿಗೆ ಪುಷ್ಟಿ ನೀಡಿದರು.

ಎರಡನೇ ಅಲೆಯಲ್ಲಿ ಕೊರೋನಾ ತನ್ನ ಅಟ್ಟಹಾಸ ವನ್ನು ಮೆರೆದು ಅತಿ ಹೆಚ್ಚು ಸಾವು- ನೋವುಗಳಿಂದ ನಾಡು ಜರ್ಜರಿತವಾಗಿರುವ ಈ ಸಂದರ್ಭದಲ್ಲಿ ಗ್ರಾಮೀಣ ಶಿಕ್ಷಕರ ಸಂಘದ ಸಹಾಯ-ಸಹಕಾರ ಶಿಕ್ಷಕರು ಮಾನಸಿಕ ಸಮತೋಲನ ಹಾಗೂ ಸದೃಢ ವಾಗಿಟ್ಟುಕೊಳ್ಳಲು ಈ ಅಂತರ್ಜಾಲ ಮಳೆ ಸಂಭ್ರ ಮದ ಕವಿಗೋಷ್ಠಿ ಒಂದು ಐತಿಹಾಸಿಕ ದಾಖಲೆ ಯನ್ನು ಬರೆಯಲು ನಮ್ಮ ವಿದ್ಯಾಕಾಶಿ ಮೂಲಕ ಬೆಳಕು ಚೆಲ್ಲಿ ನಾಡಿನಾದ್ಯಂತ ಯುವ ಶಿಕ್ಷಕರ ಕವಿಗ ಳಿಗೆ ಅವಕಾಶ ನೀಡಿರುವುದು ಅವರನ್ನು ಪ್ರೋತ್ಸಾ ಹಿಸುತ್ತಿರುವುದು ನೋಡಿದರೆ ಕನ್ನಡದ ಕಂಪು ಇಡೀ ರಾಜ್ಯದ ಮೂಲೆ ಮೂಲೆಗಳಿಗೆ ಪಸರಿಸುವ ಕೆಲಸ ಮಾಡಿರುವುದು ಬಹಳ ಸಂತೋಷವಾಗುತ್ತಿದೆ. ಕವಿಗೋಷ್ಠಿಯ ಎಲ್ಲಾ ಕವನಗಳು ಒಂದು ಕವನ ಸಂಕಲನ ವಾಗಲೆಂದು ಮಲ್ಲಿಕಾರ್ಜುನ ಚಿಕ್ಕಮಠ ರವರು ಅಭಿಪ್ರಾಯಿಸಿ ಮಾರ್ಗದರ್ಶನ ನೀಡಿದರು.

ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕದ ರಾಜ್ಯಧ್ಯಕ್ಷರಾದ ಅಶೋಕ್.ಎಂ.ಸಜ್ಜನ ಮಾತನಾಡಿ ಮಳೆ ಸಂಭ್ರಮ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಇಂದಿನ ಗೂಗಲ್ ಮೂಲಕ ನಡೆಸಿದ ಶ್ರೀಗಂಧದ ಸಿಂಚನ ಕವಿಗೋಷ್ಠಿಯೂ ಅಂತರಜಾಲದಲ್ಲಿ ಬಹಳ ಚೆನ್ನಾಗಿ ಮೂಡಿ ಬಂದು ವಿದ್ಯಾನಗರ ಕಳಸ ಕ್ಕೆ ಮಳೆ ಸಂಭ್ರಮದಿಂದ ಶೋಭೆಯನ್ನು ಕಾಣಲಾ ಯಿತು ಸಂಘದಿಂದ ರಾಜ್ಯದ ಸಮಸ್ತ ಶಿಕ್ಷಕರಿಗೆ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿ ಕೊಂಡು ಉತ್ತಮ ಅವಕಾಶಗಳನ್ನು ಸರ್ವರಿಗೂ ನೀಡಲಾಗುವುದು ಎಂದರು.

ಈ ಕವಿಗೋಷ್ಠಿಯಲ್ಲಿ ಬಾಗವಹಿಸಿದ ಪ್ರತಿ ಕವಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದೆಂದರು.ಇನ್ನೇನು ಕೆಲವೇ ದಿನಗಳಲ್ಲಿ ಆ ಶ್ರೀಶ್ರೀ ಸಿದ್ಧಾರೂಢರ ಕೃಪಾಕ ಟಾಕ್ಷದಿಂದ ಕರೋನಾ ಮಹಾಮಾರಿ ದೂರವಾಗು ತ್ತದೆ.ಕವಿಗೋಷ್ಠಿಯ ಸಂಭ್ರಮದಲ್ಲಿ ಮುಂಗಾರು ಹಿಂಗಾರು ಮಳೆ ರಾಜ್ಯದಲ್ಲಿ ಸರಿಯಾಗಿ ಆಗಿ ರೈತರ ಬೆಳೆಗಳು ಸಮೃದ್ಧವಾಗಿ ಬೆಳೆಯಲಿ ಎಂದು ಆಶಿಸಿ ದರು.

ಕವಿಗೋಷ್ಠಿಯ ಪ್ರಾರಂಭದಲ್ಲಿ ಪ್ರಾಸ್ತಾವಿಕ ನುಡಿ ಗಳನ್ನು ಮಾತನಾಡಿದ ನಮ್ಮ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ.ಸಿ.ಉಪ್ಪಿನ ಇಂತಹ ಸಂದರ್ಭದಲ್ಲಿ ದಾರವಾಡ ಜಿಲ್ಲಾಧ್ಯಕ್ಷರಾದ ಅಕ್ಬರಲಿ ಸೋಲಾಪುರ ರವರು ನಾಡಿನ ಶಿಕ್ಷಕ ಕವಿಗಳಿಗೆ ಅಂತರ್ಜಾಲದ ಮೂಲಕ ವೇದಿಕೆ ಕಲ್ಪಿಸಿ ಉತ್ತಮ ಕಾರ್ಯ ಮಾಡು ತ್ತಿದ್ದಾರೆ ನಮ್ಮ ನಾಡಿನ ಶಿಕ್ಷಕ ಕವಿಗಳಿಗೆ ಒಳ್ಳೆಯ ದಾಗಲಿ ಮಳೆ ಸಂಭ್ರಮ ಕವಿಗೋಷ್ಠಿಯಲ್ಲಿ ಉತ್ತಮ ವಾದ ಕವನಗಳನ್ನು ವಾಚಿಸಲಿ ಎಂದರು

ಮಳೆ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿದ ಚಿತ್ರನಿರ್ದೇಶಕರು,ನವರಸ ವೇದಿಕೆಯ ಅಧ್ಯಕ್ಷರು, ಆಗಿರುವ ಬಾಬಾಜಾನ್ ಮುಲ್ಲಾರವರು ಕವಿಗೋಷ್ಠಿ ಯಲ್ಲಿ ಪಾಲಿಸಬೇಕಾದ ನಿಯಮಗಳು ಹಾಗೂ ಮಾರ್ಗದರ್ಶನಗಳನ್ನು ನೀಡಿದರು ಮಳೆ ಸಂಭ್ರಮ ದಲ್ಲಿ ಬರುವ ಎಲ್ಲಾ ಕವನಗಳಿಗೆ ಸಂಗೀತ ಸಂಯೋ ಜನೆ ಮಾಡಿ ಕವನಗಳನ್ನು ಹಾಡುಗಳ ರೂಪಕ್ಕೆ ತಂದು ದಾಖಲೀಕರಣ ಮಾಡಲು ನಮ್ಮ ನವರಸ ವೇದಿಕೆ ಸಹಕಾರ ನೀಡುತ್ತದೆ ಎಂದು ಆಶ್ವಾಸನೆ ನೀಡಿದರು

ವಿದ್ಯಾನಗರಿಯ ಮುಖಾಂತರ ನಡೆದ ಮಳೆ ಸಂಭ್ರ ಮದ ಕವಿಗೋಷ್ಠಿಯನ್ನು ಕುರಿತು ಅತಿಥಿಗಳಾಗಿ ಭಾಗವಹಿಸಿದ್ದ ಆರ್ ನಾರಾಯಣಸ್ವಾಮಿ ಚಿಂತಾಮ ಣಿ, ಜಿಲ್ಲಾಧ್ಯಕ್ಷರು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಿಕ್ಕಬಳ್ಳಾಪುರ ಜಿಲ್ಲೆ ಇವರು ಮಾತನಾಡುತ್ತಾ ಅಕ್ಬರ್ ಆಲಿ ಸೋಲಾಪುರ್ ರವರು ಧಾರವಾಡ ಜಿಲ್ಲೆಯಲ್ಲಿ ಅನೇಕ ಕವಿಗೋಷ್ಠಿ ಕಾರ್ಯಕ್ರಮಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ ಆದರೆ ಇಂದು ಅಂತರ್ಜಾಲದ ಮೂಲಕ ಮಳೆ ಸಂಭ್ರಮ ಕವಿಗೋಷ್ಠಿಯನ್ನು ಬಹಳ ಅಚ್ಚುಕಟ್ಟಾಗಿ ಇನ್ನೊಬ್ಬರಿಗೆ ಮಾದರಿಯಾಗು ವಂತೆ ಮಾಡಿದ್ದಾರೆ ಈ ಎಲ್ಲಾ ಕವನಗಳು ಒಂದು ಪುಸ್ತಕವಾಗಿ ಬರುವಂತೆ ಅಭಿಪ್ರಾಯ ನೀಡಲಾಯಿ ತು ಕಾರ್ಯಕ್ರಮವು ಇನ್ನೂ ಪರಿಣಾಮಕಾರಿಯಾಗಿ ಮೂಡಿ ಬರಲು ಸೂಕ್ತ ಸಲಹೆ ಮತ್ತು ಮಾರ್ಗದರ್ಶ ನ ಮಾಡಲಾಯಿತು.

ಮಳೆ ಸಂಭ್ರಮ ಕವಿಗೋಷ್ಠಿಯ ಆಯೋಜಕರು ಯುವಕವಿಗಳು ಧಾರವಾಡ ಜಿಲ್ಲಾ ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಅಕ್ಬರ್ ಅಲಿ ಸೋಲಾಪುರ್ ರವರು ಕವಿಗೋಷ್ಠಿಯ ಕವಿಗಳನ್ನು ಹೃದಯಪೂರ್ವಕವಾಗಿ ಅವಕಾಶಗಳನ್ನು ನೀಡಿ ರಾಜ್ಯಕ್ಕೆ ಮಾದರಿಯಾಗಿ ಕವಿಗೋಷ್ಠಿಯನ್ನು ಯಶ ಸ್ವಿಯಾಗಿ ಅನುಷ್ಟಾನಗೊಳಿಸಿದರು ಶಿಕ್ಷಕರ ದಿನಾಚ ರಣೆಯಷ್ಟೊತ್ತಿಗೆ ದಾನಿಗಳ ಸಹಕಾರದಿಂದ ಕವನ ಸಂಕಲನ ಮಾಡಿ ಬಿಡುಗಡೆಗೊಳಿಸಲಾಗುವುದು ಎಂದರು ಇನ್ನೂ ಕಾಲೇಜು ವಿದ್ಯಾರ್ಥಿಗಳಿಗೆ ಮಕ್ಕಳಿ ಗೆ ಕವಿಗೋಷ್ಠಿಗಳನ್ನು ನಡೆಸಲು ನಿಮ್ಮೆಲ್ಲರ ಸಲಹೆ ಗಳನ್ನು ಸಕಾರಾತ್ಮಕವಾಗಿ ಪಡೆದು ಮುಂದಿನ ದಿನಗ ಳಲ್ಲಿ ವಿದ್ಯಾರ್ಥಿಗಳಿಗೆ ಕವಿಗೋಷ್ಠಿಗಳನ್ನು ನಡೆಸುತ್ತೇ ನೆ ಈ ಒಂದು ಗೋಷ್ಠಿಯಲ್ಲಿ ಭಾವಹಿಸಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.

ಎಲ್ ಐ ಲಕ್ಕಮ್ಮನವರ ಗೌರವಾಧ್ಯಕ್ಷರು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಹುಬ್ಬಳ್ಳಿ ಇವರು ಎಂಟು ದಿನಗಳಿಂದ ಮಳೆ ಸಂಭ್ರಮದ ಕವಿಗೋಷ್ಠಿಯ ಬಗ್ಗೆ ಇಡೀ ರಾಜ್ಯಾದ್ಯಂತ ಪ್ರಚಾರ ಮಾಡಿ ಶಿಕ್ಷಕ ಕವಿಗಳ ನ್ನು ಸಂಘಟಿಸಿ ಅವರು ಕವಿಗೋಷ್ಠಿಯಲ್ಲಿ ಪಾಲ್ಗೊ ಳ್ಳಲು ನಿರಂತರವಾಗಿ ರೂಪರೇಷೆಗಳನ್ನು ಮಾಡಿ ಕಾರ್ಯಕ್ರಮ ಯಶಸ್ವಿಗೆ ಕಾರಣರಾದರು.

ಮಳೆ ಸಂಭ್ರಮ ಅಂತರ್ಜಾಲ ಕವಿಗೋಷ್ಠಿಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪದಾಧಿಕಾರಿಗಳಾದ ಎಸ್, ಎಫ್. ಪಾಟೀಲ್, ಶ್ರೀಮತಿ ಕಲ್ಪನಾ ಚಂದನ ಕರ,ಗೋವಿಂದ ಜುಜಾರೆ,ಶರಣಪ್ಪ ಗೌಡ ಪಾಟೀಲ ರು,ಆರ್. ಎಂ. ಕುರ್ಲಿ,ವಿ.ಜಿ. ಮುದಿಗೌಡರ, ಎಸ್ ಎಸ್ ದನಿಗೊಂಡ,ಎಸ್.ಸಿ.ಹೊಳೆಯಣ್ಣನವರ್, ಬಿ. ವಿ ಅಂಗಡಿ ಹಾಗೂ 40 ಮಂದಿ ಯುವ ಶಿಕ್ಷಕ ಕವಿಗಳು ಉಪಸ್ಥಿತರಿದ್ದರು.ಮಳೆ ಸಂಭ್ರಮ ಅಂತ ರ್ಜಾಲ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಭಾಗವಹಿಸಿದ ವರೆಲ್ಲರನ್ನು ದಾರವಾಡ ಜಿಲ್ಲಾ ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿಗಳಾದ ರಾಜೀವ ಸಿಂಗ್ ಹಲವಾಯಿ ಸ್ವಾಗತಿಸಿದರು.ಯುವಕವಿ ದ್ಯಾಪೂರ್ ವಂದಿಸಿದರು ಕುಮಾರಿ ಅಪ್ಸ ಬಾಬಾ ಜಾನ್ ಮುಲ್ಲಾ ಪ್ರಾರ್ಥಿಸಿದರು.
ವರದಿ
ಅಕ್ಬರಾಲಿ ಸೋಲಾಪುರ್ ಯುವ ಕವಿಗಳು ಧಾರವಾಡ ಹಾಗೂ ಜಿಲ್ಲಾಧ್ಯಕ್ಷರು ಗ್ರಾಮೀಣ ಶಿಕ್ಷಕರ ಸಂಘ ಧಾರವಾಡ.