ಹುಬ್ಬಳ್ಳಿಯಲ್ಲಿ ಡಾ ವಿಷ್ಣುವರ್ಧನ್ ಅವರ 72ನೇ ಜಯಂತಿ ಆಚರಣೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಸುರೇಶ ಗೋಕಾಕ್ ನೇತೃತ್ವದಲ್ಲಿ ರಾಯಣ್ಣನ ಕಚೇರಿಯಲ್ಲಿ ಜಯಂತಿ ಆಚರಣೆ…..

Suddi Sante Desk

ಹುಬ್ಬಳ್ಳಿ –

ಸಾಹಸಸಿಂಹ, ಅಭಿನವ ಭಾರ್ಗವ, ಕನ್ನಡದ ಕಣ್ಮಣಿ ಡಾ ವಿಷ್ಣುವರ್ಧನ್ ಅವರ 72ನೇ ಜಯಂತಿಯ ಅಂಗವಾಗಿ ಹುಬ್ಬಳ್ಳಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿ ಮಾನಿ ಬಳಗದಿಂದ ವಿಷ್ಣು ವರ್ಧನ್ ಅವರ ಜಯಂತಿ ಯನ್ನು ರಾಯಣ್ಣನ ಕಚೇರಿಯಲ್ಲಿ ಆಚರಿಸಲಾಯಿತು. ಸಾಹಸಸಿಂಹ ವಿಷ್ಣುವರ್ಧನ್ ಅವರ ಆದರ್ಶ ಬದುಕು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ದೈಹಿಕವಾಗಿ ಅವರು ನಮ್ಮ ನಡುವೆ ಇಲ್ಲದಿದ್ದರೂ ಕೂಡ ವಿಷ್ಣುವರ್ಧನ್ ಅವರ ಆದರ್ಶಗಳ ಮುಖಾಂತರ ಹಾಗೂ ಅವರು ನಟಿಸಿದ ಚಲನಚಿತ್ರಗಳ ಮುಖಾಂತರ ಅವರು ಎಂದೆಂದಿಗೂ ಅಜರಾಮರವಾಗಿದ್ದಾರೆ ಇಂತಹ ಅಪ್ರತಿಮ ನಟ ಮತ್ತೆ ಕರುನಾಡಲ್ಲಿ ಹುಟ್ಟಿ ಬರಬೇಕೆಂದು ಭಗವಂತನಲ್ಲಿ ಪ್ರಾರ್ಥಿ ಸುತ್ತಾ ವಿಷ್ಣು ದಾದಾ ಅವರ ಜಯಂತಿಯ ಅಂದು ಅವರಿಗೆ ಶತಕೋಟಿ ನಮನಗಳನ್ನು ಸಲ್ಲಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಗೋಕಾಕ್ ಹೇಳಿದರು


ಈ ಸಂದರ್ಭದಲ್ಲಿ ವಿಷ್ಣುಸೇನಾ ಸಮಿತಿಯ ಧಾರವಾಡ ಜಿಲ್ಲಾ ಗೌರವಾಧ್ಯಕ್ಷರಾದ ಚಂದ್ರು ಹೋನ್ನಣ್ಣನವರ ಅವರಿಗೆ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಲಾ ಯಿತು.ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಯುವ ಮುಖಂಡರು ಸಮಾಜಸೇವಕರಾದ ಕಿರಣ್ ಉಪ್ಪಾರ್ ರವರು ಮತ್ತು ಇನ್ನೊಬ್ಬ ಯುವ ಮುಖಂಡರಾದ ವೀರೇಶ್ ಗೋಂದಿ ಆಗಮಿಸಿದ್ದರು.ಅಭಿಮಾನಿ ಬಳಗದ ದೀಪಕ್ ಕಲಾಲ್,ಅಶೋಕ್ ಹಾದಿಮನಿ,ಗಣೇಶ್ ಅಂಬಿಗೇರ, ಸಂತೋಷ್ ಬಾಯಗೋಳ,ಎಲ್ಲಪ್ಪ ಅಂಬಿಗೇರ್,ನವೀನ ಅತ್ತಿಬೆಳಗಲ್,ವೀರೇಶ್ ಗೋಕಾಕ್ ಇನ್ನು ಹಲವಾರು ಅಭಿಮಾನಿ ಬಳಗದ ಸದಸ್ಯರು ಹಾಜರಿದ್ದು ವಿಷ್ಣು ದಾದಾ ಅವರ ಜಯಂತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿ ಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.