ಮೌಲ್ಯಯುತ ರಾಜಕೀಯಕ್ಕೆ ಮುನ್ನುಡಿ ಬರೆದ ಮಾಜಿ ಶಾಸಕ ಎನ್ ಎಚ್ ಕೋನರಡ್ಡಿ ಬಿಡುವಿಲ್ಲದ ರಾಜಕೀಯ ಕೆಲಸದ ನಡುವೆಯೂ ನಾಲ್ಕಕ್ಷರ ಕಲಿಸಿದ ಗುರುಗಳಿಗೆ ಗೌರವಿಸಿದ ಮಾಜಿ ಶಾಸಕರು…..

Suddi Sante Desk

ಧಾರವಾಡ –

ಪ್ರತಿಯೊಂದರಲ್ಲಿ ಸದಾ ಒಂದಿಲ್ಲೊಂದು ವಿಶೇಷ ಕೆಲಸ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಾ ಯಾವಾಗಲೂ ಸಾಮಾನ್ಯರಂತೆ ಇರುವ ಮಾಜಿ ಶಾಸಕ ಎನ್ ಹೆಚ್ ಕೊನರಡ್ಡಿ ಯವರು ಈಗ ಮತ್ತೊಂದು ವಿಶೇಷ ಕೆಲಸ ಕಾರ್ಯದ ಮೂಲಕ ಮತ್ತೊಮ್ಮೆ ಗಮನ ಸೆಳೆದು ರಾಜಕೀಯ ನಾಯಕರಿಗೆ ಮೌಲ್ಯಯುತ ಗುಣಗಳು ಹೇಗಿರಬೇಕು ಸಾಮಾಜಿಕ ಜವಾಬ್ದಾರಿ ಹೇಗಿರಬೇಕು ಎಂಬೊದನ್ನು ತೋರಿಸಿಕೊಟ್ಟಿದ್ದಾರೆ.

ಹೌದು ಶಿಕ್ಷಕ ದಿನಾಚರಣೆ ದಿನದಂದು ಮಾಜಿ ಶಾಸಕ ಎನ್ ಹೆಚ್ ಕೊನರಡ್ಡಿ ಯವರು ಅರ್ಥಪೂರ್ಣವಾಗಿ ಎಲ್ಲರೂ ನೆನೆಯುವಂತಹ ಕಾರ್ಯವನ್ನು ಮಾಡಿದರು. ನವಲಗುಂ ದದಲ್ಲಿ ಬಹಳ ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆ ಯನ್ನು ಆಚರಿಸಿದ ನವಲಗುಂದ ಮಾಜಿ ಶಾಸಕರಾದ ಎನ್.ಹೆಚ್. ಕೋನರಡ್ಡಿ.ತಮ್ಮ ಪ್ರಾಥಮಿಕ,ಪ್ರೌಢ, ಕಾಲೇಜು,ಡಿಗ್ರಿಯಲ್ಲಿ ಕಲಿಸಿದ ಗುರುಗಳೆಲ್ಲರಿಗೂ ಸನ್ಮಾನ ಮಾಡಿ ಗೌರವಿಸಿದರು

ಡಾ‌ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಗುರುಗಳಾದ ಫಕ್ಕೀರಪ್ಪ ಮೊರಬದ,ಕಪ್ಪತಪ್ಪ ಕಳ್ಳಿಮನಿ,ಎಸ್.ಎಮ್ ಪಟ್ಟಣಶೆಟ್ಟಿ, ಆರ್.ಬಿ.ಕಮತರ, ಬಿ.ಸಿ.ಪೂಜಾರ್ ಇವರೆಲ್ಲರ ಮನೆ ಮನೆಗೆ ತೆರಳಿ ಗುರು ವಂದನೆ ಸಲ್ಲಿಸಿ ಆಶೀರ್ವಾದ ಪಡೆದರು‌.ಮುಂದಿನ ಪೀಳಿಗೆಗೆ ಇದೊಂದು ಅತ್ಯುತ್ತಮ ಮಾದರಿ ಎಂದು ನವಲಗುಂದ ತಾಲೂಕ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುವುದರ ಜೊತೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಬಹಳ ಸಂತೋಷದ ವಿಷಯ ವಾಗಿದೆ.

ಈ ಸಂದರ್ಭದಲ್ಲಿ ನವಲಗುಂದ ಪುರಸಭೆಯ ಅಧ್ಯಕ್ಷರಾದ ಅಪ್ಪಣ್ಣ ಹಳ್ಳದ್,ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುರೇಶ್ ಮೇಟಿ,ಪುರಸಭೆಯ ಸದಸ್ಯರುಗಳಾದ ಜೀವನ್ ಪವಾರ್, ಮಂಜುನಾಥ್ ಜಾಧವ್,ಮಹಾಂತೇಶ್ ಭೋವಿ, ಶಲವಡಿ ಗ್ರಾಪ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಳ್ಳಿ,ಅರುಣ್ ಕುಮಾರ್ ಮಜ್ಜಗಿ,ರಾಮಪ್ಪ ಕಾಲವಾಡ, ಚಾಂದುಸಾಬ ನದಾಫ್,ನಾರಾಯಣ ನಲವಡಿ,ಶ್ರೀನಿವಾಸ ಮರಡ್ಡಿ, ಅಡಿವೆಪ್ಪ ಕಂಬಳಿ,ಮಹಾಂತೇಶ್ ವಗ್ಗರ,ಸಿದ್ದಲಿಂಗಪ್ಪ ಅಂಗಡಿ ಇತರರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.